Paris Olympics 2024: ಭಾರತಕ್ಕೆ ಶೂಟಿಂಗ್ನಲ್ಲಿ ಕಂಚಿನ ಪದಕ ಮಿಸ್, ಮತ್ತೊಂದು ಪದಕದ ಮೇಲೆ ಮನು ಭಾಕರ್ ಕಣ್ಣು
2024-07-29 11:51:51
ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ (Paris Olympics 2024) ಸೋಮವಾರ ಭಾರತಕ್ಕೆ ಪದಕವೊಂದು ಕೂದಲೆಳೆ ಅಂತರದಲ್ಲಿ ಮಿಸ್ ಆಗಿದೆ.
ಹೌದು..ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅರ್ಜುನ್ ಬಬುಟಾ 4ನೇ ಸ್ಥಾನ ಪಡೆಯುವದೊಂದಿಗೆ ಕೂದಲೆಳೆ ಅಂತರದಲ್ಲಿ ಪದಕ ಮಿಸ್ ಮಾಡಿಕೊಂಡಿದ್ದಾರೆ. ಅರ್ಜುನ್ ಬಬುಟಾ 208.4 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಈ ಮೂಲಕ ಭಾರತಕ್ಕೆ ಕಂಚಿನ ಪದಕ ಜಸ್ಟ್ ಮಿಸ್ ಆಗಿದೆ. ಅವರಿಗಿಂತ ಮುಂದಿರುವ ಕ್ರೊಯೇಷಿಯಾದ ಮಿರಾನ್ ಮಾರಿಸಿಕ್ ಒಟ್ಟು 230 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.
ಚೀನಾದ ಶೆಂಗ್ ಲಿಹಾವೊ 252.2 ಅಂಕಗಳೊಂದಿಗೆ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಸ್ವೀಡನ್ನ ವಿಕ್ಟರ್ ಲಿಂಡ್ಗ್ರೆನ್ 251.4 ಅಂಕಗಳೊಂದಿಗೆ ಬೆಳ್ಳಿ ಗೆದ್ದರು.
ಬಬುಟಾ ಆರಂಭಿಕ ಶಾಟ್ಗಳಲ್ಲಿ ಅಗ್ರ ಮೂರಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಂತಿಮ ಶಾಟ್ನಲ್ಲಿ 9.5 ಅಂಕಗಳನ್ನು ಗಳಿಸಿದ ಕಾರಣ ಮೂರನೇ ಸ್ಥಾನ ಉಳಿಸಿಕೊಳ್ಳುವುದಕ್ಕೆ ವಿಫಲಗೊಂಡರು. ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್ನಲ್ಲಿ ರಮಿತಾ ಜಿಂದಾಲ್ ಏಳನೇ ಸ್ಥಾನ ಪಡೆದ ನಂತರ ಅವರು ಪದಕವನ್ನು ಕಳೆದುಕೊಂಡ ಎರಡನೇ ಭಾರತೀಯ ಶೂಟರ್ ಆಗಿದ್ದಾರೆ.
60 ಶಾಟ್ಗಳ ಅರ್ಹತಾ ಸರಣಿಯಲ್ಲಿ, ಬಾಬುಟಾ 630.1 ಅಂಕಗಳನ್ನು ಗಳಿಸುವ ಏಳನೇ ಸ್ಥಾನ ಪಡೆದಿದ್ದರು. ಈ ಮೂಲಕ ಕ್ರೀಡಾಕೂಟದಲ್ಲಿ ಶೂಟಿಂಗ್ ಈವೆಂಟ್ ಫೈನಲ್ಗೆ ಅರ್ಹತೆ ಪಡೆದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮತ್ತೊಂದು ಪದಕದ ಮೇಲೆ ಮನು ಭಾಕರ್ ಕಣ್ಣು!
ಇನ್ನು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಮನು ಭಾಕರ್ ಮತ್ತೊಂದು ಪದಕದ ನಿರೀಕ್ಷೆಯಲ್ಲಿದ್ದಾರೆ. ಇಂದು ನಡೆದ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಮಿಶ್ರ ವಿಭಾಗದ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಹಾಗೂ ಸರ್ಬಜೋತ್ ಸಿಂಗ್ ಜೋಡಿ ಕಂಚಿನ ಪದಕಕ್ಕೆ ಅರ್ಹತೆ ಪಡೆದಿದ್ದಾರೆ. ಇದೇ ವಿಭಾಗದಲ್ಲಿ ಮತ್ತೊಂದು ಜೋಡಿ ಸಗ್ವಾನ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರು 10ನೇ ಸ್ಥಾನ ಪಡೆದರು. ವೈಯಕ್ತಿಕ ವಿಭಾಗದಲ್ಲಿ ಮತ್ತೊಬ್ಬ ಶೂಟರ್ ಆದ ರಮಿತಾ ಜಿಂದಾಲ್ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಅರ್ಹತಾ ವಿಭಾಗದಲ್ಲಿ ಮನು ಭಾಕರ್ ಹಾಗೂ ಸರ್ಬಜೋತ್ ಸಿಂಗ್ ಜೋಡಿ 193,195 ಹಾಗೂ 192 ಅಂಕಗಳಿಸಿ ಜುಲೈ 30 ರಂದು ನಡೆಯುವ ಕಂಚಿನ ಪದಕದ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಜಿನ್ ಯೆ ಹೊ ಹಾಗೂ ವೊನ್ನೊ ಲೀ ವಿರುದ್ಧ ಸ್ಪರ್ಧಿಸಲಿದ್ದಾರೆ. ಟರ್ಕಿ ಹಾಗೂ ಸರ್ಬಿಯಾದ ಸ್ಪರ್ಧಿಗಳು ಚಿನ್ನ ಹಾಗೂ ಬೆಳ್ಳಿ ಪದಕದ ಪಂದ್ಯಕ್ಕೆ ಪೈಪೋಟಿ ನಡೆಸಲಿದ್ದಾರೆ.
ಮನು ಭಾಕರ್ ಐತಿಹಾಸಿಕ ಸಾಧನೆ
ಮಹಿಳೆಯರ ಶೂಟಿಂಗ್ ವಿಭಾಗದಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಇದೇ ಮೊದಲ ಬಾರಿಗೆ ಪದಕ ಲಭಿಸಿದೆ. ಹರಿಯಾಣದ ಜಜ್ಜಾರ್‌ನವರಾದ ಮನು ಭಾಕರ್ ವಿಶ್ವಕಪ್‌ನಲ್ಲಿ 9 ಚಿನ್ನ, 2 ಬೆಳ್ಳಿ, ಯುವ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಂದು ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ.
comments
Log in to write reviews