ಡ್ರಂಕ್ ಅಂಡ್ ಡ್ರೈವ್ ಬೇಟೆಗೆ ಇಳಿದ ಟ್ರಾಫಿಕ್ ಪೊಲೀಸ್: ಒಂದೇ ದಿನಕ್ಕೆ 779 ಪ್ರಕರಣ ದಾಖಲು
2024-08-26 05:53:40
ಬೆಂಗಳೂರು : ಬೆಂಗಳೂರಲ್ಲಿ ವೀಕೆಂಡ್ ಬಂತಂದ್ರೆ ಸಾಕು ಪಾರ್ಟಿ ಘಾಟು ಜೋರಾಗೆ ಇರುತ್ತೆ. ಅದೇ ನಶೆಯಲ್ಲಿ ಕುಡಿದು ವಾಹನ ಚಾಲನೆ ಮಾಡುತ್ತಾರೆ. ಇದರಿಂದ ಅಪಘಾತ, ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದು, ಸರಿಯಾದ ಶಾಕ್ ನೀಡಿದ್ದಾರೆ. ಸಿಲಿಕಾನ್ ಸಿಟಿಯಾದ್ಯಂತ ನಗರ ಪೊಲೀಸರು ಹೆಣೆದಿದ್ದ ಬಲೆಗೆ ಬಿದ್ದ ವಾಹನ ಸವಾರರು ಕಂಗಾಲಾಗಿ ಹೋಗಿದ್ದಾರೆ. ನಗರದಲ್ಲಿ ಅಪಘಾತ.. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ.. ರೋಡ್ ರೇಜ್ ಪ್ರಕರಣಗಳು..ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಾಗ್ತಿದ್ದು..ಇದಕ್ಕೆ ಕಡಿವಾಣ ಹಾಕಲು ನಗರ ಸಂಚಾರ ಪೊಲೀಸರು ದಿಟ್ಟ ಕ್ರಮವನ್ನು ತೆಗೆದುಕೊಂಡಿದ್ದಾರೆ. ಹಾಗಾಗಿ ಆಗಸ್ಟ್ 22 ರಿಂದ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಡ್ರಂಕ್ ಅಂಡ್ ಡ್ರೈವ್ ಬೇಟೆಗೆ ಇಳಿದಿದ್ದಾರೆ.ಮದ್ಯಪಾನ ಮಾಡುವ ವಾಹನ ಸವಾರರ ಪರಿಶೀಲನೆಗೆ ಇಳಿದಿದ್ದು ದಂಡ ವಿಧಿಸುತ್ತಿದ್ದಾರೆ. ಇದರ ಭಾಗವಾಗಿ ನಿನ್ನೆ ಒಂದೇ ದಿನ 1200 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಫೀಲ್ಡ್ಗೆ ಇಳಿದಿದ್ದು 34,676 ವಾಹನಗಳ ತಪಾಸಣೆ ನಡೆಸಿ 779 ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವವರ ವಾಹನಗಳನ್ನು ವಶಕ್ಕೆ ಪಡೆದು ನೋಟಿಸ್ ಕೊಟ್ಟು ಕಳಿಸಿದ್ದಾರೆ. ಅಷ್ಟೇ ಅಲ್ಲಾ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಡ್ರೈವಿಂಗ್ ಲೈಸನ್ಸ್ ರದ್ದು ಪಡಿಸಲು ಕ್ರಮ ಕೈಗೊಂಡಿದ್ದಾರೆ.
comments
Log in to write reviews