ವಕ್ಫ್ ಆಸ್ತಿಯಾದ ದಾವಣಗೆರೆಯ ಪಿ.ಜೆ ಬಡಾವಣೆಯ ಈ ಪ್ರದೇಶ!!!
2024-11-12 11:46:10
ದಾವಣಗೆರೆ, ನ.12: ಬೆಣ್ಣೆ ನಗರಿ ದಾವಣಗೆರೆಗೂ ಸಹ ವಕ್ಫ್ ವಿವಾದ ಕಾಲಿಟ್ಡಿದೆ.
ದಾವಣಗೆರೆ ಮಹಾನಗರದ ಪ್ರತಿಷ್ಠಿತ ಪಿ.ಜೆ ಬಡಾವಣೆಯ ಒಂದು ಏರಿಯಾ ಸಂಪೂರ್ಣ ವಕ್ಪ್ ಹೆಸರಿಗೆ ಆಗಿದೆ. ಏಕೆಂದರೆ ಪಿ.ಜೆ ಬಡಾವಣೆಯ ಸರ್ವೇ ನಂಬರ್ 53 ರಲ್ಲಿ ಬರುವ 4 ಎಕರೆ 13 ಗುಂಟೆ ಜಾಗದ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದೆ. 1992-93ರಲ್ಲಿ ಈ ಪಿ.ಜೆ ಬಡಾವಣೆ ಬೀರದೇವರ ಪೂಜಾರಿ ಎಂದು ಕೈ ಬರಹದ ಪಹಣಿಯಲ್ಲಿ ಕಾಣಿಸಿಕೊಂಡಿದೆ. ಆದ್ರೆ, ಈಗ ಇದು ವಕ್ಫ್ ಎಂದು ನಮೂದಾಗಿದೆ. ಒಟ್ಟು 4 ಎಕರೆ 13 ಗುಂಟೆ ಜಮೀನು. 1 ಲಕ್ಷ 88 ಸಾವಿರದ 397 ಚದರ ಅಡಿ ಇದ್ದು, ಒಂದು ಚದರ ಅಡಿಗೆ 15 ಸಾವಿರ ರೂಪಾಯಿ ಇದೆ. ಹೀಗಾಗಿ ಇದರ ಒಟ್ಟು ಮೌಲ್ಯ 565 ಕೋಟಿ ರೂಪಾಯಿ.
565 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ!
ಪಿ.ಜೆ ಬಡಾವಣೆಯ ಸರ್ವೇ ನಂಬರ್ 53 ರಲ್ಲಿ ಬರುವ 4 ಎಕರೆ 13 ಗುಂಟೆ ಜಾಗದ ಪಹಣಿಯಲ್ಲಿ ವಕ್ಫ್ ಎಂದು ಬಂದಿದೆ. 1992-93ರಲ್ಲಿ ಈ ಪಿ.ಜೆ ಬಡಾವಣೆ ಬೀರದೇವರ ಪೂಜಾರಿ ಎಂದು ಕೈ ಬರಹದ ಪಹಣಿಯಲ್ಲಿ ಕಾಣಿಸಿಕೊಂಡಿದೆ. ಆದ್ರೆ, ಈ ವಕ್ಫ್ ಎಂದು ನಮೂದಾಗಿದೆ. ಒಟ್ಟು 4 ಎಕರೆ 13 ಗುಂಟೆ ಜಮೀನು. 1 ಲಕ್ಷ 88 ಸಾವಿರದ 397 ಚದರ ಅಡಿ ಇದ್ದು, ಒಂದು ಚದರ ಅಡಿಗೆ 15 ಸಾವಿರ ರೂಪಾಯಿ ಇದೆ. ಹೀಗಾಗಿ ಇದರ ಒಟ್ಟು ಮೌಲ್ಯ 565 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಇಷ್ಟೊಂದು ಬೆಲೆ ಬಾಳುವ ಈ ಪ್ರದೇಶದ ವಿಚಾರ ಬಿರುಗಾಳಿ ಎಬ್ಬಿಸಿರುವುದು ಸುಳ್ಳಲ್ಲ.
9 ವರ್ಷಗಳ ಹಿಂದೆ ಪಹಣಿಯಲ್ಲಿ ವಕ್ಫ್ ಮಂಡಳಿ ಆಸ್ತಿಯೆಂದು ಹೆಸರು ಸೇರ್ಪಡೆಯಾಗಿದೆ. ಪಿಜೆ ಬಡಾವಣೆಯ ರಿ.ಸ.ನಂ.53ರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಲ್ಲಿ ನೋಂದಣಿಯಾಗಿದ್ದು, ದಾಖಲೆಗಳಲ್ಲಿ ಕಂಡುಬರುತ್ತಿದೆ. 2015ರಲ್ಲಿ ಮ್ಯೂಟೇಷನ್ ರಿಜಿಸ್ಟರ್, ಕೋರ್ಟ್ ಆದೇಶದಂತೆ ಮ್ಯೂಟೇಷನ್ ಅಂತಾ ದಾಖಲೆಗಳಲ್ಲಿ ಉಲ್ಲೇಖ ಮಾಡಲಾಗಿದೆ.
1985-86ರಲ್ಲಿ ಎಂಆರ್ ನಂಬರ್ 54/85-86ರಡಿ 4.13 ಎಕರೆಯನ್ನು ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆಯೆಂದು ಪಹಣಿಯಲ್ಲಿ ಇರುತ್ತದೆ. ಪಿ.ಜೆ. ಬಡಾವಣೆಯ ಒಂದು ಇಡೀ ಭಾಗವೇ ವಕ್ಫ್ ಹೆಸರಿಗೆ ಹೋಗಿದ್ದು ಹೇಗೆ ಎನ್ನುವುದದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
comments
Log in to write reviews