ತುಷ್ಟೀಕರಣದ ಪರಾಕಾಷ್ಠೆ
2024-08-17 01:25:28
ಪೋಲೀಸ್ ಇಲಾಖೆ ಇರುವುದೇ ಜಾತಿ ಧರ್ಮ, ಭಾಷೆ ಇದಾವುದರ ತಾರತಮ್ಯವಿಲ್ಲದೇ ನಿಶ್ಪಕ್ಷವಾಗಿ ಕಾನೂನು ಮತ್ತು ಸುವ್ಯವಸ್ಥೆಗಳನ್ನು ನೋಡಿಕೊಳ್ಳುವುದು. ಅಪರಾಧಿ ಅವರ ಸಂಬಂದಃಇಕನೇ ಆಗಿದ್ದರೂ, ಮುಲಾಜಿಲ್ಲದೇ, ಅವರನ್ನು ಹೆಡೆಮುರಿಕಟ್ಟಿ ನ್ಯಾಯಲಯದ ಕಟೆಕಟೆಯಲ್ಲಿ ನಿಲ್ಲಿಸಿ ಸೂಕ್ತವಾದ ದಾಖಲೆಗಳನ್ನು ನ್ಯಾಯಾಲಕಕ್ಕೆ ಸಲ್ಲಿಸಿ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಕೊಡಿಸುವ ಮೂಲಕ ಅಪರಾಧ ಮಾಡುವವರಿಗೆ ತಮ್ಮ ತಪ್ಪಿನ ಅರಿವಾಗುವಂತೆ ಮಾಡಿಸುವುದಲ್ಲದೇ, ಈ ರೀತಿಯ ಶಿಕ್ಷೆಯನ್ನು ಗಮನಿಸಿ ಮುಂದೆ ಇನ್ನಾರೂ ಸಹಾ ಆ ರೀತಿಯ ದುಷ್ಕೃತ್ಯಗಳಲ್ಲಿ ಭಾಗಿಗಳಾಗಬಾರದು ಎನ್ನುವುದಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇಡೀ ದೇಶದಲ್ಲೇ ಕರ್ನಾಟಕ ಪೋಲೀಸ್ ಎಂದರೆ ಹಿರಿಮೆ ಗರಿಮೆ ಇರುವಂತಹ ಸಂಧರ್ಭದಲ್ಲಿ, ಕೇವಲ ತಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕೆಲವು ರಾಜಕೀಯ ಪಕ್ಷಗಳು ಪೋಲೀಸ್ ಇಲಾಖೆಯ ಭಡ್ತಿ ಮತ್ತು ಪ್ರಶಸ್ತಿ ಪುರಸ್ಕಾರಗಳಲ್ಲಿ ವಿವಿಧ ಹಗರಣಗಳಲ್ಲಿ ಭಾಗಿಯಾಗಿ ಕರ್ತವ್ಯದಿಂದ ಅಮಾನತ್ತಾಗಿರುವ ಅಲ್ಪಸಂಖ್ಯಾತ ಪೋಲೀಸ್ ಅಧಿಕಾರಿಗಳಿಗೇ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲು ಮುಂದಾಗಿರುವ ಮೂಲಕ ದೇಶದ ಭಾವೈಕ್ಯತೆಗೆ ಧಕ್ಕೆ ತರುವಂತಹ ಪ್ರಕರಣಗಳು ನಡೆದಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.
ನಮ್ಮದು ಈ ದೇಶಕ್ಕೆ ಸ್ವಾತ್ರಂತ್ರ್ಯ ಕೊಡಿಸಿದ ಪಕ್ಷ. ಈ ದೇಶದಲ್ಲಿ ಸರ್ವ ಧರ್ಮ ಸಮನ್ವಯದ ಪಕ್ಷ ಏನಾದರೂ ಇದ್ದಲ್ಲಿ ಅದು ಕೇವಲ ಕೇವಲ ಕಾಂಗ್ರೇಸ್ ಪಕ್ಷ ಎಂದು ನೆನ್ನೆ ಮೊನ್ನೆ ಅಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಏರಿರುವ ನಾಲಾಯಕ್ ಚಿಲ್ಟು ಪಲ್ಟು ಮಂತ್ರಿಗಳು ಅಬ್ಬಿರಿದು ಬೊಬ್ಬಿರಿಯುವುದನ್ನು ಕೇಳುವುವಾಗ, ಛೇ! ಸರಿಯಾದ ಶಿಕ್ಷಣವಿಲ್ಲದೇ ಬೌಧ್ಧಿಕ ದೀವಾಳಿಗಳಾಗಿರುವ ಇಂತಹವರು ಬಿಟ್ಟಿ ಭಾಗ್ಯಗಳ ಹೆಸರಿನಲ್ಲಿ ಕೊಡುವ ಆಮೀಷಗಳಿಗೆ ಬಲಿಯಾಗುವಂತಹ ಬೌದ್ಧಿಕ ದೌರ್ಭಾಗ್ಯವೇ ನಮ್ಮ ಕನ್ನಡಿಗರಿಗೇ ಎಂದು ಮನಸ್ಸು ನೋವಾಗುತ್ತದೆ. ಅಂದು ಇಂದು ಮತ್ತು ಮುಂದೆಯೂ ಈ ದೇಶ ಸನಾತನ ಧರ್ಮಾಧರಿತ ದೇಶ ಎಂಬುದನ್ನು ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳೇ ಹೇಳುತ್ತಿದ್ದರೂ, ಭಾರತವನ್ನು ಒಡೆಯಲು ಮುಂದಾಗಿರುವ ದೇಶ ವಿದೇಶಗಳ ಪಟ್ಟ ಭದ್ರ ಹಿತಾಸಕ್ತಿಯವರ ಎಂಜಿಲು ಕಾಸಿನಾಸಿಗಾಗಿ ಮತ್ತು ತಮ್ಮ ಅಧಿಕಾರದ ಆಸೆಗಾಗಿ, ಪ್ರತಿಯೊಂದರಲ್ಲೂ ಜಾತಿ, ಭಾಷೆ ಮತ್ತು ಧರ್ಮಗಳನ್ನು ಮುಂದಾಗಿರಿಸಿ ಈ ದೇಶವನ್ನು ಮತ್ತೊಮ್ಮೆ ತುಂಡರಿಸುವ ಹುನ್ನಾರವನ್ನು ಕಾಂಗ್ರೇಸ್ ಮತ್ತು ಅದರ ಮಿತ್ರ ಪಕ್ಷಗಳು ಮಾಡುತ್ತಿದ್ದು ಅದಕ್ಕೆ ಪೂರಕ ಎನ್ನುವಂತೆ, ಪೋಲೀಸ್ ಇಲಾಖೆಯಲ್ಲೂ ಅದಕ್ಷ ಮತ್ತು ಅಪರಾಧಿ ಹಿನ್ನಲೆಯಂತಹವರಿಗೆ ಮುಖ್ಯಮಂತ್ರಿ ಸೇವಾ ಪದಕ ನೀಡುವ ಮೂಲಕ ಸಿದ್ದರಾಮಯ್ಯನವರ ಕಾಂಗ್ರೇಸ್ ಸರ್ಕಾರ ನಗೆಪಾಟಲಿಗೆ ಈಡಾಗಿದೆ.
ಸಾಮ್ಯಾನ್ಯವಾಗಿ ಸ್ವಾತ್ರಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಂಧರ್ಭದಲ್ಲಿ ಪೋಲೀಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿರುವ ಪೋಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೇವಾ ಪದಕ (CM Medal) ಮತ್ತು ರಾಷ್ಟ್ರಪತಿ ಸೇವಾ ಪದಕಗಳನ್ನು ನೀಡುವ ಮೂಲಕ ಅಭಿನಂದಿಸುವುದು ರೂಢಿಯಲ್ಲಿದ್ದು, ಅನೇಕ ವರ್ಷಗಳಿಂದಲೂ ಕರ್ತವ್ಯ ಲೋಪ ಮತ್ತು ನೂರಾರು ಅಪರಾಧಿ ಕೃತ್ಯಗಳಲ್ಲಿ ಭಾಗಿಗಾಗಿರುವವರ ಜೊತೆ ಶಾಮೀಲಾಗಿರುವುದರ ಕುರಿತಾಗಿ ನೂರಾರು ದೂರುಗಳಿದ್ದು ಕೇವಲ ಒಂದು ತಿಂಗಳ ಹಿಂದೆಯಷ್ಟೇ ಮೈಸೂರಿನಲ್ಲಿ ನಡೆದ ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡ ಆರೋಪಿಗಳಿಗೆ ಸಹಕರಿಸಿದ ಆರೋಪ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ಆರೋಪದಿಂದ ಅಮಾನತ್ತಾಗಿರುವ ಸಲೀಂ ಪಾಷಾ ಎಂಬ ಪೋಲೀಸ್ ಪೇದೆಗೆ 2024ರ ಸ್ವಾತಂತ್ರ್ಯೋತ್ಸವದ ಮುಖ್ಯಮಂತ್ರಿ ಸೇವಾ ಪದಕ (CM Medal)ವನ್ನು ಪ್ರಕಟಿಸಿರುವುದು, ಸಾರ್ವಜನಕರು ಮತ್ತು ವಿರೋಧ ಪಕ್ಷಗಳಲ್ಲದೇ ಸ್ವಪಕ್ಷೀಯರಿಂದಲೂ ಕಟು ಟೀಕೆಗೆ ಎದುರಿಸುವಂತಾಗಿರುವುದಲ್ಲದೇ, ಇದೇ ವಿಷಯದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಅಲ್ಪಸಂಖ್ಯಾತ ತುಷ್ಟೀಕರಣದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿರುವುದು ವಿಪರ್ಯಾಸವಾಗಿದೆ.
ಮೈಸೂರಿನ ವಿವಿಧ ಪೋಲೀಸ್ ಠಾಣೆಗಳಲ್ಲಿ ಸುಮಾರು ಎರಡು ದಶಕದಿಂದಲೂ ಪೋಲೀಸ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡಿರುವ ಅನುಭವ ಇರುವ ಸಲೀಂ ಪಾಶಾ ಅವರನ್ನು ಇತ್ತೀಚೆಗೆ ಕಳವು ಪ್ರಕರಣವೊಂದರಲ್ಲಿ ಅವರ ಸಹಕಾರವೂ ಇದೆ ಎನ್ನುವ ಕಾರಣಕ್ಕಾಗಿ ಅಮಾನತುಪಡಿಸಲಾಗಿತ್ತು. ಇಂತಹ ಅಮಾನತ್ತಾದಾರ ಹೆಸರು ಸಹಾ ಕರ್ನಾಟಕ ಸರ್ಕಾರ ಬುಧವಾರ ಪ್ರಕಟಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸೇವಾ ಪದಕ ವಿಜೇತರ ಪಟ್ಟಿಯಲ್ಲಿ ಇರುವುದು ಅನೇಕ ಅನುಮಾನಗಳಿಗೆ ಇಂಬು ಕೊಡುತ್ತಿದೆ.
ಸಲೀಂ ಪಾಶಾ ಸಮಾಜಘಾತುಕ ಶಕ್ತಿಗಳ ಜೊತೆ ಕೈಜೋಡಿಸಿ ಸಾರ್ವಜನಿಕರ ಸ್ವತ್ತು ಕಳುವಾಗಲು ಕಾರಣೀಭೂತರಾಗಿರುವುದಲ್ಲದೇ, ಇಲಾಖೆಯಲ್ಲಿ ಇದ್ದು ಕೊಂಡೇ ಇಲಾಖೆಯ ಆಂತರಿಕ ಮತ್ತು ಗುಪ್ತಮಾಹಿತಿಗಳನ್ನು ಅಪರಾಧಿಗಳಿಗೆ ಸೋರಿಕೆ ಮಾಡುವಂತಹ ಕುಕೃತ್ಯಗಳಲ್ಲಿ ಭಾಗಿಗಳಾಗಿರುವಷ್ಟೇ ಅಲ್ಲದೇ, ಮೈಸೂರಿನ ವಿವಿಧ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ನಡೆದ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ನೇರವಾದ ಸಂಪರ್ಕ ಹೊಂದಿರುವುದಲ್ಲದೇ, ಅವರ ಕುಕೃತ್ಯಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಕಹರಿಸಿದ ಪರಿಣಾಮ ಅನೇಕ ಸಾರ್ವಜನಿಕರ ಆಸ್ತಿ ಪಾಸ್ತಿ ಕಳವಿಗೆ ಕಾರಣೀಭೂತರಾಗಿದ್ದಾರೆ ಎಂಬ ಆರೋಪವೂ ಇದೆ. ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕನ್ನ ಹಾಗೂ ಗಾಂಜಾ ಪ್ರಕರಣಗಳ ಆರೋಪಿಗಳ ಸಂಬಂಧಿಕರ ಜೊತೆ ನೇರವಾದ ಸಂಪರ್ಕವನ್ನೂ ಸಹಾ ಹೊಂದಿರುವುದರ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು ಆ ಕುರಿತಾಗಿ ಇಲಾಖಾ ಮಟ್ಟದಲ್ಲಿ ತನಿಖೆ ನಡೆದು ಮೇಲ್ನೋಟಕ್ಕೆ ಸಲೀಂ ಅವರ ಆರೋಪಗಳು ಸಾಭೀತಾಗಿರುವ ಕಾರಣ ಅವರನ್ನು ಅ ಕೂಡಲೇ ಅಮಾನತ್ತಿನಲ್ಲಿ ಇರಿಸಿ ಅವರ ವಿರುದ್ಧ ಹೆಚ್ಚಿನ ಮಟ್ಟದ ತನಿಖೆ ನಡೆಯುತ್ತಿದೆ.
ಇಂತಹ ಸಲೀಂ ಅವರಿಗೆ ಪ್ರಶಸ್ತಿಯನ್ನು ನೀಡಿದ್ದರ ಕುರಿತಾಗಿ ಆರೋಪ ಪ್ರತ್ಯಾರೋಪ ಕೇಳಿ ಬರುತ್ತಿದ್ದಂತೆಯೇ, ಯಥಾ ಪ್ರಕಾರ ಆವರ ರಕ್ಷಣೆಗೆ ಮುಂದಾದ ರಾಜ್ಯಸರ್ಕಾರ, ಸಲೀಂ ಆವರು ಕಳೆದ ವರ್ಷ ಮೈಸೂರು ಸಿಸಿಬಿ ಘಟಕದಲ್ಲಿ ಮಾಡಿದ್ದ ಸೇವೆಯನ್ನು ಆಧರಿಸಿ ಈ ವರ್ಷ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸಲೀಂ ಪಾಶಾ ಅಮಾನತುಗೊಳ್ಳುವ ಮುನ್ನವೇ, ಮೈಸೂರು ಪೊಲೀಸ್ ಆಯುಕ್ತರಿಂದ ಶಿಫಾರಸ್ಸು ಮಾಡಿದ್ದ ಪಟ್ಟಿಯಲ್ಲಿ ಸಲೀಂ ಅವರ ಹೆಸರಿದ್ದ ಕಾರಣ, ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ ಎಂಬ ಹೇಳಿಕೆನ್ನು ನೀಡುವ ಮೂಲಕ ಪರಮೇಶ್ವರ್ ಅವರ ನೇತೃತ್ವದ ಗೃಹ ಇಲಾಖೆ ಎಂತಹ ನಾಲಾಯಕ್ ಎಂಬುದನ್ನು ಸಾಭೀತು ಮಾಡಿದೆ.
ಅಮಾನತ್ತಾಗಿದ್ದ ಅಲ್ಪ ಸಂಖ್ಯಾತ ಸಲೀಂ ಪಾಶಾ ಅವರಿಗೆ ಪ್ರಶಸ್ತಿ ಬಂದ ಕಾರಣ ಅವರ ವಿಷಯ ಎಲ್ಲೆಡೆಯಲ್ಲಿಯೂ ವೈರಲ್ ಆಗಿದ್ದರೇ, ಚಿನ್ನ ಕಳ್ಳತನ ಪ್ರಕರಣದ ಆರೋಪ ಹೊತ್ತಿರುವ ಸುರಪುರ ಉಪವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಾವೀದ್ ಇನಾಮ್ದಾರ್ ಅವರಿಗೂ ಸಹಾ ಮುಖ್ಯಮಂತ್ರಿಗಳ ಉತ್ತಮ ಸಾಧನೆ ಪ್ರಶಸ್ತಿಯನ್ನು ನೀಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಶಿಫಾರಸು ಮಾಡಿರುವುದು ಸಹಾ ಮತ್ತೊಂದು ಅಚ್ಚರಿಗೆ ಕಾರಣವಾಗಿವುವುದಲ್ಲದೇ, ಇಲಾಖೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಲ್ಪಸಂಖ್ಯಾತ ತುಷ್ಟೀಕರಣಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ಅದೃಷ್ಟವಷಾತ್ ಈ ವಿಷಯವನ್ನು ತಿಳಿದು ಇಂತಹ ಕಳಂಕಿತರಿಗೆ ಮುಖ್ಯಮಂತ್ರಿ ಸೇವಾ ಪದಕವನ್ನು ನೀಡಿದರೆ, ಪ್ರಾಮಾಣಿಕ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸಿದಂತಾಗುತ್ತದೆ ಎಂದು ಸ್ಥಳೀಯ ಶಾಸಕ ಶರಣಗೌಡ ಕಂದಕೂರ ಅವರು ನೇರವಾಗಿ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದ ಕಾರಣ, ಅವರ ಹೆಸರನ್ನು ಸದ್ಯಕ್ಕೆ ಕೈ ಬಿಡಲಾಗಿದ್ದು, ಖಂಡಿತವಾಗಿಯೂ ಮುಂದೊಮ್ಮೆ ಯಾವುದೋ ನೆಪವೊಡ್ಡಿ ಇದಕ್ಕಿಂತಲೂ ಹೆಚ್ಚಿನ ರೀತಿಯ ಪ್ರಶಸ್ತಿ ಪುರಸ್ಕಾರವನ್ನು ಈ ಸರ್ಕಾರ ಕೊಡುತ್ತದೆ ಎಂಬುದೇ ಎಲ್ಲರ ಅಭಿಪ್ರಾಯವಾಗಿದೆ.
2023ನೇ ಸಾಲಿನ ಗೌರವಾನ್ವಿತ ಮುಖ್ಯಮಂತ್ರಿಗಳ ಪದಕಕ್ಕೆ. ಶಿಫಾರಸ್ಸಾಗಿದ್ದ ಜಾವೀದ್ ಇನಾಂದಾರ್ ಅವರ ವಿರುದ್ಧ ಭ್ರಷ್ಟಾಚಾರದ ಸೇರಿದಂತೆ ಹಲವಾರು ಆರೋಪಗಳಿದ್ದು, ಘನವೆತ್ತ ಸರ್ಕಾರದ ಪ್ರಮುಖ ಬಿಟ್ಟಿ ಭಾಗ್ಯಗಳಲ್ಲಿ ಒಂದಾದ ಅನ್ನ ಭಾಗ್ಯದ ಆಹಾರಧಾನ್ಯಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಿಸದೇ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವಂತಹ ದಂಧೆಕೋರರ ಜೊತೆಗೆ ಶಾಮೀಲಾಗಿರುವ ಗಂಭೀರ ಆರೋಪಗಳಿವೆ. ಇದೆಲ್ಲವೂ ಒಂದಾಂದರೆ, ಇದೇ ಅಧಿಕಾರಿ 2021ರಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ ಉಪ ವಿಭಾಗದ ಪೊಲೀಸ್ ಉಪಾಧೀಕ್ಷರಾಗಿದ್ದಂತಹ ಸಂದರ್ಭದಲ್ಲಿ, ಯಮಕನಮರಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನದ ಕಳ್ಳ ಸಾಗಣೆ ಪ್ರಕರಣದಲ್ಲಿ, ಅಪರಾಧವನ್ನು ತಡೆಗಟ್ಟಬೇಕಾದಂತಹ ಇದೇ ಪೊಲೀಸ್ ಅಧಿಕಾರಿಯೇ ಕಳ್ಳರ ಜೊತೆ ಭಾಗಿಯಾಗಿ ಸುಮಾರು 4.9 ಕೆ.ಜಿಯಷ್ಟು ಚಿನ್ನವನ್ನು ಅಪಹರಿಸಿದ ವಿಷಯ ಬಹಿರಂಗವಾಗಿ ರಾಜ್ಯ ಸರ್ಕಾರವೇ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದು ಆದು ಇನ್ನೂ ತನಿಖಾ ಹಂತದಲ್ಲೇ ಇರುವಾಗ, ಆ ಕಳಂಕಿತ ಅಧಿಕಾರಿಯನ್ನು ಅಮಾನತ್ತು ಮಾಡದೇ, ವರ್ಗಾವಣೆ ಮಾಡುವ ಮೂಲಕ ರಕ್ಷಿಸಿದ್ದಲ್ಲದೇ, ಈಗ ಆತನ ಬಂಧು ಬಾಂಧವರ ಓಟ್ ಆಸೆಗಾಗಿ ಅವೆಲ್ಲವನ್ನೂ ಸದ್ದಿಲ್ಲದೇ, ಮರಮಾಚಿ ಆಂತಹ ದೇಶದ್ರೋಹಿಯನ್ನು ಮುಖ್ಯಮಂತ್ರಿ ಸೇವಾ ಪದಕಕ್ಕೆ ಶಿಫಾರಸು ಮಾಡುವಂತಹ ದೈನೇಸಿ ಸ್ಥಿತಿಗೆ ಈ ಸರ್ಕಾರ ತಲುಪಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಅಣಕ ಮಾಡುವಂತಿದೆ.
ಭಾರತದ ನಾಗರೀಕ ಎನ್ನುವುದರ ಪುರಾವೆಗಾಗಿ ಪಾಸ್ ಪೋರ್ಟ್ ಮಾಡಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯರ ಹಕ್ಕಾಗಿದ್ದು, ಅಂತಹ ಪಾಸ್ ಪೋರ್ಟ್ ಕೊಡುವ ಮುನ್ನಾ ಅತನ ನಡೆತೆಯ ಕುರಿತಾಗಿ ಸೂಕ್ತವಾದ ವಿವರಣೆಗಳನ್ನು ನೀಡಬೇಕೆಂದು ಇದೇ ಸ್ಥಳೀಯ ಪೋಲೀಸ್ ಇಲಾಖೆಯನ್ನು ಕೇಳಿಕೊಳ್ಳುತ್ತದೆ. ಕೇವಲ ಪಾಸ್ ಪೋರ್ಟ್ ಪಡೆಯುವ ಸಲುವಾಗಿಯೇ ಅಷ್ಟೊಂದು ತನಿಖೆ ಮಾಡಿಸುವಾಗ (ಅಲ್ಲಿಯೂ ಸಹಾ ಅಲ್ಲಿನ ಪೋಲೀಸ್ ಪೇದೆಯ ಕೈಯ್ಯಲ್ಲಿ Rs.500-1000/- ಕೊಟ್ಟಲ್ಲಿ ಮಾತ್ರವೇ ಆತ ಧೃಢೀಕರಿಸುತ್ತಾನೆ. ಇಲ್ಲದೇ ಹೋದಲ್ಲಿ, ನಾಲ್ಕಾರು ತಿಂಗಳುಗಳ ಕಾಲ ನಾನಾ ಸಬೂಬು ಹೇಳುತ್ತಾ ಅಲೆದಾಡಿಸುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ) ಮುಖ್ಯಮಂತ್ರಿ ಸೇವಾ ಪದಕ ನೀಡುವಾಗ ಸೂಕ್ತವಾಗಿ ಹಿನ್ನಲೆಯನ್ನು ಗಮನಿಸುವುದಿಲ್ಲಾ ಎನ್ನುವುದು ಹಾಸ್ಯಾಸ್ಪದವಾಗಿದೆ.
ಅದ್ಯಾವುದೋ ಎರಡು ದೇಶದಲ್ಲಿ ಯುದ್ಧಗಳು ನಡೆಡು, ಆ ದೇಶಕ್ಕೆ ಹೊಟ್ಟೆಪಾಡಿಗೆ ಹೋದ ಭಾರತೀಯರು ಮೃತ್ಯುವಾದಲ್ಲಿ, ಅಥವಾ ದೇಶದ ಯಾವುದೋ ಮೂಲೆಯಲ್ಲಿ ಅತೀವೃಷ್ಟಿ ಮತ್ತು ಎಗ್ಗಿಲ್ಲದ ಪರಿಸರದ ಮೇಲಿನ ಧಾಳಿಯಿಂದ ಗುಡ್ಡಗಳು ಸರಿದು ನೂರಾರು ಜನ ಸತ್ತಲ್ಲಿ, ಸೂಕ್ತವಾದ ನಿರ್ವಹಣೆ ಇಲ್ಲದೇ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಯ ಗೇಟ್ ಕೊಚ್ಚಿಕೊಂಡು ಹೋಗಿ ನೂರಾರು ಕ್ಯೂಸೆಕ್ಸ್ ನೀರು ಸೋರಿಕೆಯಾಗಿ ಸಾವಿರಾರು ಅಮಾಯಕ ಜನರ ಆಸ್ತಿಪಾಸ್ತಿಗಳನ್ನು ಹಾಳುಮಾಡಿದ್ದಕ್ಕೆಲ್ಲಾ ಮೋದಿಯವರೇ ನೇರ ಹೊಣೆ ಎಂದು ಬಾಯಿಗೆ ಬಂದಂತೆ ಮಾತನಾಡುವ ಇದೇ ಕಾಂಗ್ರೇಸ್ ಸರ್ಕಾರದ ಮಂತ್ರಿಗಳು ಈಗ ಅವರದ್ದೇ ಸರ್ಕಾರದ ಪೋಲೀಸ್ ಇಲಾಖೆಯಲ್ಲಿ ಕರ್ತವ್ಯ ಲೋಪ ಮತ್ತು ಕಳ್ಳತನದ ಪ್ರಕರಣದಲ್ಲಿ ಭಾಗಿಯಾದವನಿಗೆ ಕೇವಲ ಆತನ ಧರ್ಮದ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದಲ್ಲದೇ ಆತನ ಪರವಾಗಿ ಸಮರ್ಥನೆಗೆ ಇಳಿದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದ್ದು ಇದು ತುಷ್ಟೀಕರಣದ ಪರಾಕಾಷ್ಠೆ ಆಗಿದೆ ಅಲ್ವೇ?
ಎನಂತೀರೀ?
ಸೃಷ್ಟಿಕರ್ತ ಉಮಾಸುತ
comments
Log in to write reviews