ಹೊಳಲ್ಕೆರೆ ಪಟ್ಟಣ ಶಾಖೆಯ ರೈತಸಂಘದ ಹೋರಾಟದ ಫಲವಾಗಿ ಹಿರೇಕೆರೆ ಏರಿ ಅಭಿವೃದ್ದಿ
2024-09-01 10:59:45
ಹೊಳಲ್ಕೆರೆ ಪಟ್ಟಣ ಶಾಖೆಯ ರೈತ ಸಂಘದ ವತಿಯಿಂದ ಪಟ್ಟಣದ ಹಿರೇಕೆರೆ ಹೂಳೆತ್ತುವ ಹಾಗೂ ಏರಿ ಎತ್ತರಿಸಿ ಕಲ್ಲುಕಟ್ಟಡ ಕೆಲಸ 2019-20 ನೇ ಸಾಲಿನಲ್ಲಿ ಕಾಮಗಾರಿ ಕಳಪೆ ಆಗಿರುವ ಕುರಿತು ಸಣ್ಣ ನೀರಾವರಿ ಇಲಾಖೆಯ ನೂತನ AEE ನಾಗರಾಜ್ ಅವರಿಗೆ 15 ದಿನಗಳ ಹಿಂದೆ ಮನವಿ ಮಾಡಲಾಗಿತ್ತು.
ಹೊಳಲ್ಕೆರೆ ಪಟ್ಟಣ ಶಾಖೆಯ ರೈತ ಸಂಘದ ಹೋರಾಟ ಹಾಗೂ ಮನವಿಗೆ ತಕ್ಷಣ ಸ್ಪಂದಿಸಿ ವಾರದೊಳಗೆ ಇಟಾಚಿ, ಲಾರಿಗಳ ಮುಖಾಂತರ ವಾರದಿಂದ ಕೆಲಸ ಮಾಡುತ್ತಿದ್ದಾರೆ. ಹಿರೇಕೆರೆ ಹಿನ್ನೀರಿನ ಕಾಲ್ಕೆರೆ ಪರಮೇಶ್ವರಪ್ಪರ ತೋಟದಿಂದ ಶಫಿ ತೋಟದವರೆಗೆ 4 ಅಡಿ ಗ್ರಾವೆಲ್ ಮಣ್ಣು ಹೊಡೆದು ಹಿನ್ನೀರಿನ ಸುಮಾರು 50 ಎಕರೆ ಜಮೀನು ಮುಳುಗಡೆ ಆಗುವುದನ್ನು ತಪ್ಪಿಸಿದ್ದಾರೆ. ಹೊಳಲ್ಕೆರೆ ಪಟ್ಟಣ ಶಾಖೆಯ ರೈತ ಸಂಘ ಹಾಗೂ ಹಿನ್ನೀರಿನ ಜಮೀನುದಾರರು ಈ ಕೆಲಸವನ್ನ ಶ್ಲಾಘಿಸಿದ್ದಾರೆ,
ಈ ವೇಳೆ ರೈತಸಂಘದ ಅಧ್ಯಕ್ಷ ಎಸ್.ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಜಯ್, ಖಜಾಂಚಿ ಶಿವಮೂರ್ತಿ, ಸಣ್ಣಕ್ಕಿ ಪ್ರಭಾಕರ್, ಲೋಕಮಾನ್ಯ, ತಿಲಕ್, ಕೆ,ಶ್ರೀಧರ್, ದುಕ್ಕಡ್ಲೆ ರಾಜಪ್ಪ, ರವಿಕುಮಾರ್, ವಿಶ್ವನಾಥಯ್ಯ, ಸಂಜೀವಪ್ಪ, ದೇವರ ಮನೆ ದರ್ಶನ್,ಪ್ರದೀಪ್, ಸಣ್ಣಕ್ಕಿ ಶಶಿಕುಮಾರ್, ಲೋಕೇಶ್, ವೃಷಬೇಂದ್ರಪ್ಪ, ವಿರೂಪಾಕ್ಷಪ್ಪ ಹಾಜರಿದ್ದರು.
comments
Log in to write reviews