ಶ್ರೀರಂಗಪಟ್ಟಣ ದಸರಾ: ಪೂರ್ವ ತಯಾರಿ ಬಗ್ಗೆ ಪರಿವೀಕ್ಷಣೆ: ಶೇಕ್ ತನ್ವೀರ್ ಆಸಿಫ್

ಶ್ರೀರಂಗಪಟ್ಟಣ ದಸರಾ: ಪೂರ್ವ ತಯಾರಿ ಬಗ್ಗೆ ಪರಿವೀಕ್ಷಣೆ: ಶೇಕ್ ತನ್ವೀರ್ ಆಸಿಫ್

2024-09-03 05:44:41

 ಮಂಡ್ಯ.ಸೆ.03:- ಇಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಶೇಕ್ ತನ್ವೀರ್ ಆಸಿಫ್ ಅವರು ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಬನ್ನಿಮಂಟಪಕ್ಕೆ ಭೇಟಿ ನೀಡಿ ದಸರಾ ಹಬ್ಬದ ಪೂರ್ವ ತಯಾರಿ ಬಗ್ಗೆ ಪರಿವೀಕ್ಷಣೆ ನಡೆಸಿದರು.

ಅಕ್ಟೋಬರ್ ಮಾಹೆಯಲ್ಲಿ ಶ್ರೀರಂಗಪಟ್ಟಣ ದಸರಾ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ದಸರಾ ಉದ್ಘಾಟನೆಯಾಗಲಿರುವ ಬನ್ನಿಮಂಟಪ ಆವರಣದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಿ. ಅಲ್ಲದೆ ಐತಿಹಾಸಿಕ ಕೊಳಕ್ಕೆ ಸುಣ್ಣಬಣ್ಣ ಮಾಡಿಸುವುದು ಮಂಟಪದ ಮುಂದಿನ ಭಾಗದಲ್ಲಿ ಗೇಟ್ ಹಾಗೂ ಬೇಲಿಯನ್ನು ಅಳವಡಿಸುವುದು ಹಾಗೂ ನೀರಿನ ವ್ಯವಸ್ಥೆ ಮಾಡಲು ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಟಿ.ಎ.ಪ್ರಶಾಂತ್ ಬಾಬು ರವರಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಎ.ಬಿ ವೇಣುರವರು ಹಾಗೂ ಸಹಾಯಕ ನಿರ್ದೇಶಕರಾದ ಮೃತ್ಯುಂಜಯ ರವರು ಹಾಜರಿದ್ದರು
ನಂತರ, ಮದ್ದೂರು ತಾಲ್ಲೂಕು ಪಂಚಾಯಿತಿ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಕಚೇರಿ ಕಾರ್ಯಕ್ಷಮತೆ, ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿ ವಿಷಯವಾರು ವಿಷಯನಿರ್ವಾಹಕರ ಹಂತದಲ್ಲಿ ಬಾಕಿ ಇರುವ ಕಡತಗಳ ಮಾಹಿತಿ ಪಡೆದು, ಸದರಿ ಕಡತಗಳ ವಿಲೇವಾರಿಗೆ ಸಂಬAಧಿಸಿದAತೆ ಯಾವುದೇ ದೂರುಗಳು ಬಂದಲ್ಲಿ ಸಂಬAಧಪಟ್ಟ ವಿಷಯನಿರ್ವಾಹಕರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ತದನಂತರ ಭಾರತೀನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾರತೀನಗರ ಎ.ಜಿ.ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಆವರಣದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳವಂತೆ ಹಾಗೂ 1ನೇ ತರಗತಿಗೆ ಹೆಚ್ಚಿನ ಮಕ್ಕಳು ದಾಖಲಾಗುವಂತೆ ಅಗತ್ಯ ಕ್ರಮವಹಿಸಲು ಸೂಚಿಸಿದರು. ಸದರಿ ಗ್ರಾಮದಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಿ ಶೀರ್ಘವಾಗಿ ಮುಕ್ತಾಯಗೊಳಿಸುವಂತೆ ಭಾರತೀನಗರ ಗ್ರಾ.ಪಂ. ಪಿ.ಡಿ.ಓ.ಗೆ ತಿಳಿಸಿದರು.

ತರುವಾಯ ಮಣಿಗೆರೆ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ ಕಾಲೇಜು ಆವರಣದ ಅಭಿವೃದ್ಧಿ ಕಾಮಗಾರಿ ಹಾಗೂ ಕುಡಿಯುವ ನೀರು ಸಂಪರ್ಕ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲು ಕ್ರಮವಹಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಮಳವಳ್ಳಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಕಾರ್ಯಕ್ಷಮತೆ ಬಗ್ಗೆ ಪರಿಶೀಲಿಸಿ, ಲೋಕಾಯುಕ್ತ, ನ್ಯಾಯಾಲಯ ಪ್ರಕರಣಗಳು, ಸಕಾಲ ಯೋಜನೆ, ಮಹಾತ್ಮಗಾಂಧಿ ನರೇಗಾ, ಎನ್.ಆರ್.ಎಲ್.ಎಂ., ಕುಡಿಯುವ ನೀರು, ವಸತಿ ಮತ್ತು ನಿವೇಶನ ಯೋಜನೆಗಳ ಬಗ್ಗೆ ಪರಿಶೀಲಿಸಿದರು.

ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಬರುವ ದೂರು ಹಾಗೂ ಸರ್ಕಾರದಿಂದ ಬರುವ ಇನ್ನಿತರೆ ಪತ್ರಗಳಿಗೆ ಸಂಬAಧಿಸಿದAತೆ ನಿಯಮಾನುಸಾರ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳುವಂತೆ ಹಾಗೂ ವಿವಿಧ ಯೋಜನೆಗಳಡಿ ನಿಗದಿತ ಗುರಿಗನುಗುಣವಾಗಿ ಪ್ರಗತಿ ಸಾಧಿಸುವಂತೆ ಹಾಜರಿಂದ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.

author single

L Ramprasad

Managing Director

comments

No Reviews