ಸಂಡೂರು ಬೈಎಲೆಕ್ಷನ: ರೆಡ್ಡಿಯ ಬಿಜೆಪಿ ಕುದುರೆಗೆ ಗೆಲುವು ಗ್ಯಾರಂಟಿ!
2024-11-09 10:15:55
ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಇದೇ ನವೆಂಬರ್ 13 ರಂದು ನಡೆಯಲಿದೆ.
ಈ 3 ವಿಧಾನಸಭಾ ಕ್ಷೇತ್ರಗಳ ಪೈಕಿ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ನವೆಂಬರ್ 23 ರಂದು ಫಲಿತಾಂಶ ಏನಾಗಲಿದೆ? ಎಂಬುದನ್ನು ಈಗಲೇ ಬಹಿರಂಗಗೊಳಿಸುತ್ತಿದ್ದೇವೆ.
ಸಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ, ಸಚಿವರಾಗಿದ್ದ ಗಣಿ ಉದ್ಯಮಿ, ರಾಜ ಮನೆತನದ ದಿವಂಗತ ಎಂ.ವೈ ಘೋರ್ಪಡೆ ಅವರು ಸತತವಾಗಿ ಶಾಸಕರಾಗಿ ಆಯ್ಕೆಯಾದ ಕ್ಷೇತ್ರವಿದು. ನಂತರ ಜಾತ್ಯತೀತ ಜನತಾದಳ ಪಕ್ಷದಿಂದ ಸಂತೋಷ್ ಲಾಡ್ ಅತಿ ಕಿರಿಯ ವಯಸ್ಸಿನ ಶಾಸಕರಾಗಿ ಸಂಡೂರು ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. ಇದಾದ ಬಳಿಕ 2008 ರಿಂದ 2013, 2018, 2023 ರ ಚುನಾವಣೆಗಳಲ್ಲಿ ಸತತ 4 ಸಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇ. ತುಕರಾಂ ಅವರು ಸಂಡೂರು ಶಾಸಕರಾಗಿ ಆಯ್ಕೆಯಾದರು. ಆದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾದ ಇ.ತುಕರಾಂ ಹೈಕಮಾಂಡ್ ಆದೇಶದಂತೆ ಸಂಡೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪರಿಣಾಮ ಖಾಲಿಯಾದ ಸಂಡೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ.
ಆದರೆ ಸಂಡೂರು ಕ್ಷೇತ್ರದಲ್ಲಿ ಗೆಲುವಿನ ಅಭ್ಯರ್ಥಿ ಸಿಗದ ಕಾರಣ ಸಂಸದ ಇ. ತುಕರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಕೈ ಟಿಕೆಟ್ ನೀಡಿ ಉಪಚುನಾವಣೆಯಲ್ಲಿ ಕಣಕ್ಕಿಳಿಸಲಾಗಿದೆ. ನಿಜಕ್ಕೂ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿಯಾಗಿ ಇ. ಅನ್ನಪೂರ್ಣ ಪ್ರಚಾರದಲ್ಲಿ ತೊಡಗಿದ್ದಾರೆ.
ಮತ್ತೊಂದೆಡೆ ಬಿಜೆಪಿ ಹೈಕಮಾಂಡ್ ಸಂಡೂರು ಉಪಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಬಿ.ಶ್ರೀರಾಮುಲು ಅವರಿಗೆ ಟಿಕೆಟ್ ನೀಡದೆ ನಟ ಬಂಗಾರು ಹನುಮಂತು ಅವರಿಗೆ ನೀಡಲಾಗಿದೆ.
ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ಮಗನಾದ ಬಂಗಾರು ಹನುಮಂತು, ಬಿಜೆಪಿಯ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದಾರೆ. 2018ರ ಸಂಡೂರು ವಿಧಾನಸಭಾ ಚುನಾವಣೆಯಲ್ಲಿ ಇವರು ಟಿಕೆಟ್ ತಪ್ಪಿದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 7,191 ಮತ ಪಡೆದಿದ್ದರು. ಆದರೆ 2023ರ ಚುನಾವಣೆಯಲ್ಲೂ ಬಂಗಾರು ಹನುಮಂತು ಅವರಿಗೆ ಬಿಜೆಪಿ
ಟಿಕೆಟ್ ಸಿಗಲಿಲ್ಲ.
ಬಿಎ, ಬಿ.ಎಡ್ ಪದವಿ ಪದವೀಧರರಾಗಿರುವ ಬಂಗಾರು ಹನುಮಂತು ಅವರು ತಾಯಿ ಬಂಗಾರು ಹುಲಿಗೆಮ್ಮ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸದಸ್ಯೆಯಾಗಿದ್ದಾರೆ. 1998ರಲ್ಲಿ ಎಬಿವಿಪಿಯಲ್ಲಿ ಬಂಗಾರು ಹನುಮಂತು ಸಕ್ರಿಯ ಕಾರ್ಯಕರ್ತರಾಗಿದ್ದು, 2004ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ನಂತರ 2006-09ರವರೆಗೆ ಕೂಡ್ಲಿಗಿ ಮಂಡಲದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ,2017-19ರವರೆಗೆ ಬಿಜೆಪಿ ಜಿಲ್ಲಾ ಮೋರ್ಚಾದ ಸದಸ್ಯರಾಗಿ, 2020-22ರವರೆಗೆ ಜಿಲ್ಲಾ ಎಸ್ಪಿ ಮೋರ್ಚಾ ಅಧ್ಯಕ್ಷರಾಗಿ, 2022-23ರಲ್ಲಿ ಎಸ್ಪಿ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದಾರೆ. ರಾಜಕೀಯ ಪ್ರವೇಶಕ್ಕೂ ಮುನ್ನ ಕೆಲ ವರ್ಷ 'ಮನಗೆದ್ದ ಬಂಗಾರು', 'ಆರ್ಯಪುತ್ರ' ಸೇರಿ 3 ಚಲನಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದರು.
ಬಿಜೆಪಿಯಲ್ಲಿ ಟಿಕೆಟ್ ಅಸಮಾಧಾನಿತರ ಬಂಡಾಯ ಶಮನ!
ಸಂಡೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಒಟ್ಟು 19 ಜನ ಆಕಾಂಕ್ಷಿಗಳಿದ್ದರು. ಈ ಪೈಕಿ ಮಾಜಿ ಸಂಸದ ವೈ.ದೇವೇಂದ್ರಪ್ಪ, ಕೆ.ಎಸ್.ದಿವಾಕರ್, ಎನ್.ಸೋಮಪ್ಪ ಸೇರಿದಂತೆ ಅನೇಕರು ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ, ಬಂಗಾರು ಹನುಮಂತು ಅವರಿಗೆ ಅಂತಿಮವಾಗಿ ಬಿಜೆಪಿ ಮಣೆ ಹಾಕಿದ್ದು, ಇನ್ನುಳಿದ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಜನಾರ್ದನ ರೆಡ್ಡಿ ಅವರ ಕಡೆಯ ದಿನಗಳ ಮನವೊಲಿಕೆಯಿಂದ ಬಿಜೆಪಿ ಟಿಕೆಟ್ ವಂಚಿತರ ಸಿಟ್ಟು, ಭಿನ್ನಮತ ಶಮನವಾಗಿದೆ. ಜೊತೆಗೆ ಮಾಜಿ ಸಚಿವ ಶ್ರೀರಾಮುಲು ಅವರು ಹಿಂದಿನಂತೆ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಸಂಡೂರು ಬಿಜೆಪಿ ಟಿಕೆಟ್ ಘೋಷಣೆ: ಜನಾರ್ದನ ರೆಡ್ಡಿ ಬಯಸಿದ್ದು ಹಾಲು ಅನ್ನ, ಅಮಿತ್ ಶಾ ಕೊಟ್ಟಿದ್ದೂ ಅದನ್ನೇ..
ಸಂಡೂರಿನಲ್ಲಿ ಒಂದು ಕಾಲದ ಸ್ಯಾಂಡಲ್ ವುಡ್ ನಟರಾಗಿದ್ದ, 6.4 ಅಡಿ ನೀಳಕಾಯದ ಬಂಗಾರು ಹನುಮಂತು ಅವರಿಗೆ ಟಿಕೆಟ್ ಸಿಕ್ಕಿರುವುದರಿಂದ, ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿ ಅವರ ಮಾತಿಗೆ ಮನ್ನಣೆ ಸಿಕ್ಕಂತಾಗಿದೆ. ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಜನಾರ್ದನ ರೆಡ್ಡಿ ಹಠ ತೊಟ್ಟಿದ್ದಾರೆ.
ಬಿಜೆಪಿಯಲ್ಲಿ ಬಹುದೊಡ್ದದಾಗಿದ್ದ ಟಿಕೆಟ್ ಆಕಾಂಕ್ಷಿಗಳು ಬಂಗಾರುಗೆ ಮನ್ನಣೆ
ಜನಾರ್ದನ ರೆಡ್ಡಿ ಮಾತಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸಂಡೂರು ಕ್ಷೇತ್ರದಲ್ಲಿ, ರಾಜ್ಯ ಬಿಜೆಪಿಯ ಎಸ್ಟಿ ಮೋರ್ಚಾದ ಅಧ್ಯಕ್ಷ ಬಂಗಾರು ಹನುಮಂತು ಅವರಿಗೆ ಟಿಕೆಟ್ ದಕ್ಕಿದೆ.
ಸಂಡೂರಿನಲ್ಲಿ ಒಂದು ಕಾಲದ ಸ್ಯಾಂಡಲ್ ವುಡ್ ನಟರಾಗಿದ್ದ, 6.4 ಅಡಿ ನೀಳಕಾಯದ ಬಂಗಾರು ಹನುಮಂತು ಅವರಿಗೆ ಟಿಕೆಟ್ ಸಿಕ್ಕಿರುವುದರಿಂದ, ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿ ಅವರ ಮಾತಿಗೆ ಮನ್ನಣೆ ಸಿಕ್ಕಂತಾಗಿದೆ. ಬಂಗಾರು ಹನುಮಂತು ಅಥವಾ ಕೆ.ಎಸ್.ದಿವಾಕರ್ ಈ ಇಬ್ಬರ ಪೈಕಿ ಒಬ್ಬರಿಗೆ ಟಿಕೆಟ್ ಸಿಗಬೇಕು ಎನ್ನುವುದು ರೆಡ್ಡಿ ಲಾಬಿಯಾಗಿತ್ತು.
ಬಳ್ಳಾರಿಗೆ ಪ್ರವೇಶಿಸಲು ಅನುಮತಿ ಸಿಕ್ಕಿದ ನಂತರ, ಗಣಿನಾಡಿಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಜನಾರ್ದನ ರೆಡ್ಡಿ, ಮರುದಿನವೇ ಸಂಡೂರಿನಲ್ಲಿ ಪ್ರಚಾರಕ್ಕೆ ಧುಮುಕಿದ್ದರು. ಸಂಡೂರಿನಲ್ಲಿ ಸಂಪೂರ್ಣ ಪಕ್ಷದ ಸೋಲು/ಗೆಲುವು ಬಹುತೇಕ ರೆಡ್ಡಿ ತಲೆಯ ಮೇಲಿದೆ. ಬಹುತೇಕ ಪ್ರತೀದಿನ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೆಡ್ಡಿಗೆ, ಪಕ್ಷದ ಇತರ ನಾಯಕರ ಬೆಂಬಲ ಸಿಗುವುದು ಬೇಕಿದೆ.
ಸಾಮಾನ್ಯ ಕ್ಷೇತ್ರವಾಗಿದ್ದ ಸಂಡೂರು ಅಸೆಂಬ್ಲಿ
2008ರಲ್ಲಿ ಕ್ಷೇತ್ರ ಮರುವಿಂಗಡಣೆ ಆಗುವ ಮುನ್ನ ಸಾಮಾನ್ಯ ಕ್ಷೇತ್ರವಾಗಿದ್ದ ಸಂಡೂರು, ಈಗ ಎಸ್ಟಿ ಸಮುದಾಯಕ್ಕೆ ಮೀಸಲಾಗಿರುವ ಕ್ಷೇತ್ರ. ಹಾಗಾಗಿ, ಇಲ್ಲಿ ಆ ಸಮುದಾಯದ ಮತಗಳೇ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅದರೆ ಬಿಜೆಪಿ ಸಂಡೂರು ಕ್ಷೇತ್ರದಲ್ಲಿ ಒಮ್ಮೆಯೂ ಗೆದ್ದಿಲ್ಲ.
ಸಂಡೂರು ಗೆಲ್ಲಲೇಬೇಕೆಂದ ಜನಾರ್ದನ ರೆಡ್ಡಿ ಹಠ!
ಸಂಡೂರು ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಈಗ ಸಂಡೂರು ಗೆಲ್ಲಲೇಬೇಕೆಂದು ಹಠ ತೊಟ್ಟಿದ್ದಾರೆ. ಜೊತೆಗೆ, ಸಿಎಂ ಸಿದ್ದರಾಮಯ್ಯನವರೇ ನನ್ನ ಜೈಲುವಾಸಕ್ಕೆ ಕಾರಣ ಮತ್ತು ಬಳ್ಳಾರಿಗೆ ಬರದಂತೆ ಮಾಡಲು ಸಿದ್ದರಾಮಯ್ಯನವರೇ ಕಾರಣ ಎಂದು ಜನಾರ್ದನ ರೆಡ್ಡಿ ಅವರು ತಮ್ಮ ಬಿಜೆಪಿಯ ಇತರ ನಾಯಕರ ಜೊತೆಗೆ ಪೈಪೋಟಿಗೆ ಬಿದ್ದಂತೆ ಪಕ್ಷದ ಪರವಾಗಿ ಹಗಲುರಾತ್ರಿ ಎನ್ನದೇ ರಣತಂತ್ರ ರೂಪಿಸುತ್ತಿದ್ದಾರೆ. ಸಂಡೂರು ಉಪಚುನಾವಣೆಯಲ್ಲಿ ಶತಾಯಗತಾಯ ಕಾಂಗ್ರೆಸ್ ಸೋಲಿಸುವ ಮೂಲಕ, ಸಿಎಂ ಸಿದ್ದರಾಮಯ್ಯನವರಿಗೆ ಹಿನ್ನಡೆ ತರುವುದು ಜನಾರ್ದನ ರೆಡ್ಡಿಯವರ ಉದ್ದೇಶವಾಗಿದೆ.
ಇನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸ್ಥಳೀಯರೇ ಆಗಿ ಹಿಂದೊಮ್ಮೆ ಶಾಸಕರಾಗಿ ಜನಪ್ರಿಯರಾಗಿರುವುದು ಒಂದು ಕಡೆಯಾದರೆ ಮತ್ತು ಅವರ ರಣತಂತ್ರಕ್ಕೆ ಪ್ರತಿತಂತ್ರ ರೂಪಿಸಲು, ಜನಾರ್ದನ ರೆಡ್ಡಿಯವರು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ಬಹುವಾಗಿ ನೆಚ್ಚಿಕೊಂಡಿದ್ದಾರೆ. ಪಕ್ಕದ ಕೂಡ್ಲಿಗಿ ತಾಲೂಕಿನ ಬಂಗಾರು ಹನುಮಂತು ಅವರ ಆಯ್ಕೆ, ಬಿಜೆಪಿಯಲ್ಲಿ ಭಿನ್ನಮತಕ್ಕೂ ಕಾರಣವಾಗಿತ್ತು. ಯಾಕೆಂದರೆ, ಬಿಜೆಪಿಯ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಲು ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರ ಅಣ್ಣಪ್ಪ, ಕಳೆದ ಬಾರಿಯ ಪರಾಜಿತ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ, ಕಳೆದ ಬಾರಿಯ ಪರಾಜಿತ KRPP(ಜನಾರ್ದನ ರೆಡ್ಡಿ) ಪಕ್ಷದ ಕೆ.ಎಸ್.ದಿವಾಕರ್ ಮತ್ತು ಬಂಗಾರು ಹನುಮಂತು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ರಾಜ್ಯ ಬಿಜೆಪಿಯ ಎಸ್ಟಿ ಮೋರ್ಚಾದ ಅಧ್ಯಕ್ಷ ಬಂಗಾರದ ಹನುಮಂತು ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದವರು ಜೊತೆಗೆ ಮಾಜಿ ಡಿಸಿಎಂ ಬಿ.ಶ್ರೀರಾಮುಲು ಅವರು ಉಪಚುನಾವಣೆಯಲ್ಲಿ ಒಗ್ಗೂಡಿ ಪ್ರಚಾರ ನಡೆಸುವುದಿಲ್ಲ ಎಂಬ ಲೆಕ್ಕಾಚಾರವಿತ್ತು. ಆದರೆ ಕಡೆಯ ದಿನಗಳಲ್ಲಿ ರೆಡ್ಡಿ-ಶ್ರೀರಾಮುಲು ಜೋಡಿ ಹಿಂದಿನಂತೆ ಒಂದಾಗಿ ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಬಳ್ಳಾರಿ ಸಂಸದ ಇ.ತುಕರಾಂ ಅವರಿಗೆ ಭಾರೀ ಮುಖಭಂಗ ಉಂಟುಮಾಡಬೇಕೆಂದು ಕೆಚ್ಚೆದೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ-ಮಹಿಳಾ ವೋಟ್ ಬ್ಯಾಂಕ್ ಆಧಾರ
ಬಳ್ಳಾರಿ ಸಂಸದ ಹಾಗೂ ನಿಕಟಪೂರ್ವ ಸಂಡೂರು ಶಾಸಕರಾದ ಇ.ತುಕರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಕೈ ಟಿಕೆಟ್ ನೀಡಲಾಗಿದೆ.
ಸಚಿವ ಸಂತೋಷ್ ಲಾಡ್ ಕಚೇರಿಯಲ್ಲಿ ಹಿಂದೆ ನೌಕರರಾಗಿದ್ದ, ಹಾಲೀ ಸಂಸದ ಇ.ತುಕರಾಂ ಅವರ ಪತ್ನಿ ಅನ್ನಪೂರ್ಣ ಅಥವಾ ಅವರ ಪುತ್ರಿ ಸೌಪರ್ಣಿಕಾ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿತ್ತು. ಆದರೆ ಮತ್ತೆ ಇ.ತುಕರಾಂ ಅವರ ಸುಪರ್ದಿಗೆ ಕೈ ಟಿಕೆಟ್ ಒಲಿದಿರುವುದು ಟಿಕೆಟ್ ಆಕಾಂಕ್ಷಿಗಳನ್ನು ರೊಚ್ಚಿಗೇಳಿಸಿದೆ.
ಹಾಗಾಗಿ, ಕಾಂಗ್ರೆಸ್ ನಲ್ಲಿನ ಭಿನ್ನಮತೀಯರನ್ನು ಜನಾರ್ದನ ರೆಡ್ಡಿ ಅವರು ಬಿಜೆಪಿಯತ್ತ ಸೆಳೆಯುವ ಸಾಧ್ಯತೆಯಿದೆ.
ಕ್ಷೇತ್ರದ ಹಲವು ಸಮಸ್ಯೆಗಳು ಬಿಜೆಪಿಗೆ ಲಾಭ ಆಗಬಹುದು
ಕ್ಷೇತ್ರದ ಸಮಸ್ಯೆಯಾಗಿರುವ ಜಿಂದಾಲ್ ಸಂಸ್ಥೆಗೆ ನೀಡಿರುವ ಜಮೀನಿಗೆ ಸಿಗದ ಸೂಕ್ತಬೆಲೆ ಹಾಗೂ ಒಳಮೀಸಲಾತಿಗೆ ಸಿಗದ ಮನ್ನಣೆ, ವಾಲ್ಮೀಕಿ ನಿಗಮದ ಭ್ರಷ್ಟಾಚಾರ, ಹೀಗೆ ಹಲವಾರು ವಿಚಾರಗಳು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ. ಕಾಂಗ್ರೆಸ್, ಪಂಚ ಗ್ಯಾರಂಟಿಯನ್ನು ಅವಲಂಬಿತವಾಗಿದೆ.
ಮತ್ತೊಂದೆಡೆ ಗಾಲಿ ಜನಾರ್ದನ ರೆಡ್ಡಿ ಟಿಕೆಟ್ ಬಯಸಿದ್ದು ಕೆ.ಎಸ್.ದಿವಾಕರ್ ಅಥವಾ ಬಂಗಾರು ಹನುಮಂತು ಅವರಿಗೆ. ಈ ಪೈಕಿ ಒಬ್ಬರಿಗೆ ಟಿಕೆಟ್ ಸಿಗಬೇಕು ಎನ್ನುವುದು ಗಣಿಧಣಿ ಜನಾರ್ದನ ರೆಡ್ಡಿ ಬಯಕೆಯಾಗಿತ್ತು. ಅದರಂತೆ ಬಿಜೆಪಿ ಹೈಕಮಾಂಡ್ ರೆಡ್ಡಿ ಅವರ ಲಾಬಿಗೆ ಮಣೆಹಾಕಿದೆ. ಹಾಗಾಗಿ, ರೆಡ್ಡಿ ಬಯಸಿದ್ದು ಹಾಲು ಅನ್ನ, ಅಮಿತ್ ಶಾ ಕೊಟ್ಟಿದ್ದು ಹಾಲು ಅನ್ನವೇ ಎಂದು ವಿಶ್ಲೇಷಿಸಲಾಗುತ್ತಿದೆ.
ಕಡೆಯ ದಿನಗಳಲ್ಲಿ ಮತ್ತೆ ಎಂದಿನಂತೆಯೇ ಗಾಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಒಂದಾಗಿ ನಮ್ಮದು ಜನಶ್ರೀ ಜೋಡಿ ಎಂದು ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷ ಕಸಿವಿಸಿಗೊಂಡಿದೆ.
ಆದರೆ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಾಗಬಲ್ಲ ವಕ್ಫ್ ಬೋರ್ಡ್ ಆಸ್ತಿ ಒತ್ತುವರಿ ವಿಚಾರ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ವಕ್ಫ್ ಬೋರ್ಡ್ ಉಪಚುನಾವಣೆ ವೇಳೆ ರೈತರ ಬೆಲೆ ಬಾಳುವ ಮತ್ತು ಅಮೂಲ್ಯ ಜೀವನಾಡಿಯಾದ ಕೃಷಿ ಜಮೀನುಗಳನ್ನು ರಾಜ್ಯಾದ್ಯಂತ ಅಕ್ರಮವಾಗಿ ಕಬಳಿಸುವ ಹುನ್ನಾರ ನಡೆಸಿದೆ. ಜೊತೆಗೆ ಹಿಂದೂ ರುದ್ರಭೂಮಿ, ಸರ್ಕಾರಿ ಆಸ್ಪತ್ರೆ ಮುಂತಾದ ಸರ್ಕಾರಿ ಭೂಮಿಯನ್ನು ವಕ್ಫ್ ಬೋರ್ಡ್ ಕಬಳಿಸಲು ಮುಂದಾಗಿದೆ. ಈಗಾಗಲೇ ವಿಜಯಪುರ, ಬಾಗಲಕೋಟೆ, ಬೀದರ್, ಕಲಬುರಗಿ, ಗದಗ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಉತ್ತರ ಕನ್ನಡ, ಮೈಸೂರು, ಹಾಸನ ಮುಂತಾದ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ರೈತರ ಜಮೀನುಗಳನ್ನು ಕಬಳಿಸಲು ನೋಟಿಸ್ ನೀಡಿದೆ. ಈ ಕೆಲಸ ಆಗಿರುವುದು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕುಮ್ಮಕ್ಕಿನಿಂದಲೇ ಎಂದು ರಾಜ್ಯಾದ್ಯಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವಿವಾದ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಎಲ್ಲಾ ಸಾಧ್ಯತೆಗಳು ಇವೆ. ಏಕೆಂದರೆ ವಕ್ಫ್ ಬೋರ್ಡ್ ಅಕ್ರಮ ಭೂ ಒತ್ತುವರಿ ನಿಲ್ಲಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮುಂದಾಗಿದ್ದಾರೆ.
ಪರಿಣಾಮ ಸಂಡೂರು ಉಪಚುನಾವಣೆಯಲ್ಲಿ ರೈತರ ವೋಟ್ ಬ್ಯಾಂಕ್ ಕಾಂಗ್ರೆಸ್ ಕೈ ತಪ್ಪುವ ಸಾಧ್ಯತೆ ನಿಚ್ಚಳವಾಗಿದೆ.
ಜೊತೆಗೆ ಕ್ಷೇತ್ರದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮತದಾರರು ರಾಜ್ಯ ಬಿಜೆಪಿಯ ಎಸ್ಟಿ ಮೋರ್ಚಾದ ಅಧ್ಯಕ್ಷ ಬಂಗಾರು ಹನುಮಂತು ಅವರತ್ತ ವಾಲಿದೆ. ಇದರಿಂದ ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಭಾರೀ ಬಹುಮತದಿಂದ ಗೆಲ್ಲುವ ಸಾಧ್ಯತೆಗಳು ಗೋಚರಿಸಿವೆ.
comments
Log in to write reviews