ರೇಣುಕಾಸ್ವಾಮಿ ಕೊಲೆ ಕೇಸ್: ಜಾಮೀನು ಪಡೆದ ಎ-8 ಆರೋಪಿ ರವಿಶಂಕರ್!
2024-10-14 07:15:09
ಬೆಂಗಳೂರು, ಅ.14: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-8 ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ರವಿಶಂಕರ್ ಗೆ ನಗರದ 57ನೇ ಸಿಸಿಎಚ್ ಕೋರ್ಟ್ ಜಾಮೀನು ನೀಡಿದೆ.
ನಟಿ ಪವಿತ್ರಾಗೌಡ ಅವರಿಗೆ ಮೊಬೈಲ್ ಮೂಲಕ ನನ್ನ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರು, ತಿಂಗಳಿಗೆ 10 ಸಾವಿರ ರೂಪಾಯಿ ಕೊಡ್ತೇನೆ ಎಂದು ಆಫರ್ ನೀಡಿದ್ದ. ರೇಣುಕಾಸ್ವಾಮಿಯ ಈ ಕಾಟ ತಡೆಯಲಾರದೆ ಪವಿತ್ರಾಗೌಡ ಅವರು ತಮ್ಮ ಆಪ್ತರಾಗಿದ್ದ ನಟ ದರ್ಶನ್ ತೂಗುದೀಪ್ ಅವರಿಗೆ ಎಲ್ಲವನ್ನೂ ಹೇಳಿ ರೇಣುಕಾಸ್ವಾಮಿಗೆ ತಕ್ಕ ಪಾಠವನ್ನು ಕಲಿಸಲು ಹೇಳಿದ್ದರು. ನಂತರ ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ತಕ್ಷಣವೇ ಚಿತ್ರದುರ್ಗದಿಂದ ಕರೆತರಲು ರವಿಶಂಕರ್ ರಿಸ್ಕ್ ತೆಗೆದುಕೊಂಡಿದ್ದ. ಅದರಂತೆ ರವಿಶಂಕರ್ ಚಿತ್ರದುರ್ಗದಿಂದ ಬೈಕ್ ನಲ್ಲಿ ರೈಡ್ ಮಾಡಿಕೊಂಡೇ ಬೆಂಗಳೂರಿಗೆ ಬರಲು ರೇಣುಕಾಸ್ವಾಮಿಗೆ ತಾಕೀತು ಮಾಡಿದ್ದರು. ಅದರಂತೆ ರೇಣುಕಾಸ್ವಾಮಿ ಸಹ ಬೈಕ್ ಓಡಿಸಿಕೊಂಡೇ ಜೂನ್ 7 ರಂದು ಬೆಂಗಳೂರಿಗೆ ಬಂದಿದ್ದ. ರೇಣುಕಾಸ್ವಾಮಿಯ ಬೈಕ್ ರೈಡ್ ಮಾಡಿದ್ದಾಗ ಆತನರೇಣುಕಾ ಸ್ವಾಮಿಯನ್ನು ಹಿಂದೆಯೇ ಕಾರಿನಲ್ಲಿ ರವಿಶಂಕರ್ ಮತ್ತಾತನ ಗೆಳೆಯರು ಬೆಂಗಳೂರಿನವರೆಗೆ ಫಾಲೋ ಮಾಡಿಕೊಂಡು ದರ್ಶನ್ ಸುಪರ್ದಿಗೆ ರೇಣುಕಾಸ್ವಾಮಿಯನ್ನು ಒಪ್ಪಿಸಿದ್ದರು.
ಇದೀಗ ಸಂಜೆ ಎ-8 ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ರವಿಶಂಕರ್ 57ನೇ ಸಿಸಿಎಚ್ ಕೋರ್ಟ್ ನಿಂದ ಜಾಮೀನು ಪಡೆಯಲು ಯಶಸ್ವಿಯಾಗಿದ್ದಾರೆ.
comments
Log in to write reviews