ಚಿತ್ರದುರ್ಗ ಜಿಲ್ಲೆಯಾದ್ಯಂತ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ದೂರು ಸ್ವೀಕಾರ

ಚಿತ್ರದುರ್ಗ ಜಿಲ್ಲೆಯಾದ್ಯಂತ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ದೂರು ಸ್ವೀಕಾರ

2024-08-25 01:00:23

ಚಿತ್ರದುರ್ಗ: ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ವಿಭಾಗದ ಅಧಿಕಾರಿಗಳು ಇದೇ ಆಗಸ್ಟ್ 27 ಮತ್ತು 28 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರಿಂದ ದೂರು ಹಾಗೂ ಅವಹಾಲು ಸ್ವೀಕರಿಸುತ್ತಾರೆ.

ಇದೇ ಆಗಸ್ಟ್ 27ರಂದು ಮಂಗಳವಾರ ಮಧ್ಯಾಹ್ನ 10.30ರಿಂದ 1.30ರವರೆಗೆ ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ ಹಾಗೂ ಹೊಸದುರ್ಗ ಪುರಸಭೆ ಹಾಗೂ 2.30ರಿಂದ ಸಂಜೆ 5.30ರವರೆಗೆ ಚಳ್ಳಕೆರೆ ನಗರಸಭೆ ಹಾಗೂ ಹೊಳಲ್ಕೆರೆ ನಗರಸಭೆಯಲ್ಲಿ ಅಹವಾಲು ಸ್ವೀಕರಿಸುವರು.

ಆಗಸ್ಟ್ 28 ರಂದು ಬುಧವಾರ ಬೆಳಿಗ್ಗೆ 10.30 ರಿಂದ 1.30 ರಿಂದ ಹಿರಿಯೂರು ನಗರಸಭೆ ಕಚೇರಿಯಲ್ಲಿ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಚಿತ್ರದುರ್ಗ ನಗರಸಭೆ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಲು ಅಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳ ಲಂಚಾವತಾರ ಬೇಡಿಕೆ, ಯೋಜನೆಗಳ ಅನುಷ್ಠಾನದಲ್ಲಿ ಅನಾವಶ್ಯಕ ವಿಳಂಬ, ಕರ್ತವ್ಯ ನಿರ್ಲಕ್ಷತನ, ತಾರತಮ್ಯ, ಅರ್ಹರಿಗೆ ಯೋಜನೆಗಳ ಸರಿಯಾದ ರೀತಿಯಲ್ಲಿ ತಲುಪಿಸದೇ ಇರುವ ಸಾರ್ವಜನಿಕರಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ದೂರು ಸಲ್ಲಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಪ್ರಕಟಣೆ ಹೊರಡಿಸಿದ್ದಾರೆ.

ಆ.27ರಂದು ಹೊಳಲ್ಕೆರೆ ಪುರಸಭೆಯಲ್ಲಿ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

ಇದೇ ಆಗಸ್ಟ್ 27 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಹಾಗೂ ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ಹೊಳಲ್ಕೆರೆ ಪುರಸಭೆಯಲ್ಲಿ ಸಾರ್ವಜನಿಕರ ತಮ್ಮ ದೂರುಗಳನ್ನು ಮತ್ತು ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ ಎಂದು ಚಿತ್ರದುರ್ಗ ಲೋಕಾಯಕ್ತ ವಿಭಾಗ ತಿಳಿಸಿದೆ.
 

author single

L Ramprasad

Managing Director

comments

No Reviews