ಚಿತ್ರದುರ್ಗ ನಗರಸಭೆ ಚುನಾವಣೆ: ಕಾಂಗ್ರೆಸ್ ಬೆಂಬಲಿತರಿಗೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ!

ಚಿತ್ರದುರ್ಗ ನಗರಸಭೆ ಚುನಾವಣೆ: ಕಾಂಗ್ರೆಸ್ ಬೆಂಬಲಿತರಿಗೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ!

2024-08-26 05:01:58

ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ 2ನೇ ಅವಧಿಗೆ ಅಧಿಕಾರ ಹಿಡಿಯಲು ಕಳೆದ ಬಾರಿಯಂತೆ ಈ ಬಾರಿ ಬಿಜೆಪಿಗೆ ಸಾಧ್ಯವಾಗಿಲ್ಲ. ಬದಲಿಗೆ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಚ್ಚರಿ ಎಂಬಂತೆ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗೆದ್ದು ಬೀಗಿದ್ದಾರೆ.

ಚಿತ್ರದುರ್ಗ ನಗರಸಭೆಯಲ್ಲಿ ಒಟ್ಟು 35 ಸ್ಥಾನಗಳ ಪೈಕಿ ಬಿಜೆಪಿ 17 ಸ್ಥಾನ ಹೊಂದಿತ್ತು.
ಜೆಡಿಎಸ್ 6 ಸ್ಥಾನ, ಕಾಂಗ್ರೆಸ್ 5 ಮತ್ತು ಇತರರು 7 ಸ್ಥಾನಗಳನ್ನು ಹೊಂದಿದ್ದರು. 
ಆದರೆ ಈ ಪೈಕಿ 15ನೇ ವಾರ್ಡ್ ಕಾಂಗ್ರೆಸ್ ಕಾರ್ಪೊರೇಟರ್ ಡಿ.ಮಲ್ಲಿಕಾರ್ಜುನ ಅವರು ಅಕಾಲಿಕ ಮರಣ ಹೊಂದಿದ ನಂತರ ಕಾಂಗ್ರೆಸ್ ಕೇವಲ 4 ಸ್ಥಾನಗಳಿಗೆ ಮಾತ್ರ ಸೀಮಿತವಾಗಿತ್ತು. ಇದರಿಂದ ಈ ಬಾರಿಯೂ ಬಿಜೆಪಿ ಮಿತ್ರಪಕ್ಷ ಜೆಡಿಎಸ್ ಬೆಂಬಲದಿಂದ ನಗರಸಭೆ ಅಧಿಕಾರ ಹಿಡಿಯಲಿದೆ ಎಂದು ಗಾಳಿ ಬೀಸಿತ್ತು. ಆದರೆ ನಗರಸಭೆ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆ ಸಾಮಾನ್ಯ ವರ್ಗದ ಮಹಿಳೆ ಮತ್ತು ಉಪಾಧ್ಯಕ್ಷ ಹುದ್ದೆ ಹಿಂದುಳಿದ ವರ್ಗಗಳ ಮಹಿಳೆಗೆ ಮೀಸಲಾದ ಬೆನ್ನಲ್ಲೇ ಸ್ಥಳೀಯ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರು ತೀವ್ರ ಲಾಬಿ ನಡೆಸಿದರು.
ಆದಾಗ್ಯೂ ಇಂದು ಸೋಮವಾರ ಆಗಸ್ಟ್ 26 ರಂದು ಚಿತ್ರದುರ್ಗ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಚುನಾವಣೆ ಪ್ರಕ್ರಿಯೆಗೆ ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ನಾಮಪತ್ರಗಳ ಸಲ್ಲಿಕೆ ಕಾರ್ಯ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.29ರ ಸದಸ್ಯೆ ಬಿ.ಎನ್.ಸುನೀತಾ ಹಾಗೂ ವಾರ್ಡ್ ನಂ.32 ರ ಸದಸ್ಯೆ ಎಸ್.ಸಿ.ತಾರಕೇಶ್ವರಿ ಅವರು ನಾಮಪತ್ರ ಸಲ್ಲಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂಬರ್ 33 ಸದಸ್ಯೆ ಶ್ರೀದೇವಿ ಜಿ.ಎಸ್ ಹಾಗೂ ವಾರ್ಡ್ ನಂ.22 ರ ಸದಸ್ಯೆ ಬಿ.ಎಸ್.ರೋಹಿಣಿ ನಾಮಪತ್ರ ಸಲ್ಲಿಸಿದರು.

ಚುನಾವಣಾ ಅಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ನಾಮಪತ್ರ ಸ್ವೀಕರಿಸಿದರು. ಮಧ್ಯಾಹ್ನ 1 ಗಂಟೆಯಿಂದ 1 ಗಂಟೆ 5 ನಿಮಿಷದವರೆಗೆ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಿತು. ನಂತರ 1 ಗಂಟೆ 5 ನಿಮಿಷದಿಂದ 1 ಗಂಟೆ 15 ನಿಮಿಷದವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿತ್ತು. ಆದರೆ ಯಾರೂ ನಾಮಪತ್ರ ಹಿಂಪಡೆಯದ ಕಾರಣ ಮಧ್ಯಾಹ್ನ 1 ಗಂಟೆ 20 ನಿಮಿಷಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ನಾಮಪತ್ರ ಸಲ್ಲಿಕೆ ವೇಳೆ ತಹಶೀಲ್ದಾರ್ ಡಾ.ನಾಗವೇಣಿ ಹಾಗೂ ನಗರಸಭೆ ಆಯುಕ್ತೆ ರೇಣುಕಾ.ಎಂ ಉಪಸ್ಥಿತರಿದ್ದರು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸ್ವರ್ಧೆ ಮಾಡಿದ್ದವರು ಪಡೆದ ಮತಗಳ ವಿವರ...

ಅಧ್ಯಕ್ಷ ಸ್ಥಾನ 

ಬಿ.ಎನ್. ಸುಮಿತ(ಕಾಂಗ್ರೆಸ್)- 22  ಮತ

ತಾರಕೇಶ್ವರಿ(ಬಿಜೆಪಿ) -13 ಮತ

ಗೆಲುವಿನ ಅಂತರ-9 ಮತ

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ
ಶ್ರೀದೇವಿ ಚಕ್ರವರ್ತಿ ಅವರಿಗೆ 22 ಮತಗಳು ಸಿಕ್ಕರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ರೋಹಿಣಿ ನವೀನ್ ಅವರಿಗೆ 13 ಮತಗಳು ಮಾತ್ರ ದೊರಕಿತು. ಈ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀದೇವಿ ಚಕ್ರವರ್ತಿ ಅವರು 9 ಮತಗಳ ಅಂತರದಿಂದ ಚಿತ್ರದುರ್ಗ ನಗರಸಭೆಯ ಅಧ್ಯಕ್ಷೆಯಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ವರ್ಧೆ ಮಾಡಿದ್ದ ಬಿಜೆಪಿ ನಗರಸಭೆ ಸದಸ್ಯೆ ಶ್ರೀದೇವಿ ಚಕ್ರವರ್ತಿ 22 ಮತಗಳನ್ನು ಪಡೆದು ಬಿಜೆಪಿ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ವರ್ಧೆ ಮಾಡಿ 13 ಮತಗಳನ್ನು ಗಳಿಸಿದ ರೋಹಿಣಿ ನವೀನ್ ವಿರುದ್ಧ 9 ಮತಗಳಿಂದ ಗೆಲುವು ಸಾಧಿಸಿದರು.
ಈ ಮೂಲಕ ರೋಹಿಣಿ ಚಕ್ರವರ್ತಿ ಅವರು ಉಪಾಧ್ಯಕ್ಷೆಯಾಗಿ ಹಿಂದುಳಿದ ವರ್ಗಗಳ ಮಹಿಳಾ ವಿಭಾಗದಿಂದ ಆಯ್ಕೆಯಾದರು.
ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ ಬಹುಮತ ಇಲ್ಲದೆ ಅಲ್ಪ ಮತ ಹೊಂದಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸ್ಥಳೀಯ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ (ಹಿರಿಯ ಚಿತ್ರ ನಟ ದೊಡ್ಡಣ್ಣ ಅವರ ಅಳಿಯ) ಅವರ ನೇತೃತ್ವದಲ್ಲಿ ಕಾಂಗ್ರೆಸ್ ಈ ಬಾರಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಚಿತ್ರದುರ್ಗ ನಗರಸಭೆ ಅಧಿಕಾರ ಹಿಡಿಯಿತು.

author single

L Ramprasad

Managing Director

comments

No Reviews