ಕಾರಾಗೃಹ ಇಲಾಖೆಯಲ್ಲಿ ಆಪರೇಷನ್ ಟ್ರಾನ್ಸ್ ಫರ್!

ಕಾರಾಗೃಹ ಇಲಾಖೆಯಲ್ಲಿ ಆಪರೇಷನ್ ಟ್ರಾನ್ಸ್ ಫರ್!

2024-09-14 07:34:30

ಬೆಂಗಳೂರು, ಸೆ.14: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಕಾರಾಗೃಹದ 43 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.

ರಾಜ್ಯಸರ್ಕಾರ ಕಾರಾಗೃಹ ಇಲಾಖೆಗೆ ಸರ್ಜರಿ ಮಾಡಿದ್ದು, ಜೈಲರ್‌ಗಳು, ಮುಖ್ಯ ವೀಕ್ಷಕರು, ವೀಕ್ಷಕರು, ವಾರ್ಡರ್‌ ಸೇರಿದಂತೆ 43 ಮಂದಿ ಸಿಬ್ಬಂದಿಗಳನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ವರ್ಗಾವಣೆ ಮಾಡಿದೆ.

ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಫೋಟೊಗಳು ಬಹಿರಂಗವಾಗುತ್ತಿದ್ದಂತೆ ರಾಜ್ಯಸರ್ಕಾರ ಭಾರಿ ಮುಜುಗರಕ್ಕೆ ಈಡಾಗಿತ್ತು. ಈ ನಡುವೆ ಕಾರಾಗೃಹದ 9 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಲೆದಂಡವು ಆಗಿದೆ.

ಬಳಿಕ ನಟ ದರ್ಶನ್‌ರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಹಾಗೂ ಇತರರನ್ನು ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದ್ದು, ದರ್ಶನ್‌ ಜಾಮೀನಿಗಾಗಿ ಸದ್ಯದಲ್ಲೇ ಅರ್ಜಿ ಸಲ್ಲಿಸಲಿದ್ದಾರೆ.

author single

L Ramprasad

Managing Director

comments

No Reviews