ಈರುಳ್ಳಿ ಬೆಳೆಗೆ ಥ್ರಿಪ್ಸ್ ನುಸಿ ಕೀಟ ಬಾಧೆ-ರೈತರು ಕಂಗಾಲು
2024-08-19 10:27:12
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ 1777 ಹೆಕ್ಟೇರ್ ನಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೋಡ ಮುಚ್ಚಿದ ಹವಾಮಾನದಲ್ಲಿ ಎಡಬಿಡದೆ ಸುರಿದ ಜಿಟಿಜಿಟಿ ಮಳೆಯಿಂದ ತಾಲ್ಲೂಕಿನ ಅನೇಕ ಕಡೆ ಮಣ್ಣಿನ ತೇವಾಂಶ ಹೆಚ್ಚಿ ಈರುಳ್ಳಿ ಬೆಳೆಗೆ ಥ್ರಿಪ್ಸ್ ನುಸಿ ಕೀಟ ಮತ್ತು ನೇರಳೆ ಎಲೆ ಮಚ್ಚೆ ರೋಗ ಹೆಚ್ಚಾಗಿದೆ. ಆದ್ದರಿಂದ ರೋಗ ಮತ್ತು ಕೀಟ ಬಾಧೆಯಿಂದ ಈರುಳ್ಳಿ ಬೆಳೆಯನ್ನು ರಕ್ಷಿಸಿ, ರೋಗ ನಿರ್ವಹಣೆ ಮಾಡಲು ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಲಹೆ ನೀಡಲಾಗಿದೆ.
ಇಷ್ಟಾದರೂ ನಾಳೆ ಆಗಸ್ಟ್ 20 ರಿಂದ ಹೊಳಲ್ಕೆರೆ ತಾಲ್ಲೂಕಿನಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ವಿಪರೀತ ಮಳೆ ಸುರಿಯುವ ಸಾಧ್ಯತೆ ಇದೆ. ಇದರಿಂದ ತಾಲ್ಲೂಕಿನ ಈರುಳ್ಳಿ ಬೆಳೆಗಾರರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
comments
Log in to write reviews