ನವೋದಯ ವಿದ್ಯಾಸಂಗದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಡಿ ಕಾಳೆನಹಳ್ಳಿ ಆನಂದ್ ಕುಮಾರ್ ಮತಯಾಚನೆ
2024-07-31 21:28:50
ಚನ್ನರಾಯಪಟ್ಟಣ: ನವೋದಯ ವಿದ್ಯಾ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಡಿ ಕಾಳೆನಹಳ್ಳಿ ಆನಂದ್ ಕುಮಾರ್ ಮತಯಾಚನೆ ಮಾಡಿದರು. ನನ್ನ ಕ್ರಮ ಸಂಖ್ಯೆ-5, ಪ್ರೆಷರ್ ಕುಕ್ಕರ್ ಗುರುತಿಗೆ ಮತ ನೀಡಿ, ನವೋದಯ ವಿದ್ಯಾ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲು ನವೋದಯ ವಿದ್ಯಾ ಸಂಸ್ಥೆಯ ಮತದಾರ ಬಂಧುಗಳು ಅಮೂಲ್ಯವಾದ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕಾಗಿ ವಿನಂತಿ ಮಾಡಿದರು.
ಇಂದು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಆನಂದ ಕುಮಾರ್ ಮಾತನಾಡಿ ಮುಂದಿನ ತಿಂಗಳು ಅಂದರೆ ದಿನಾಂಕ 4.8.2024ನೇ ಭಾನುವಾರದಂದು ಬೆಳಿಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ 3:00 ವರೆಗೆ ಚನ್ನರಾಯಪಟ್ಟಣ ನವೋದಯ ವಿದ್ಯಾ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆಯು ನಡೆಯಲಿದು,ಈ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ,ಸಹಕಾರ, ಪ್ರೋತ್ಸಾಹದೊಂದಿಗೆ ಆನಂದ್ ಕುಮಾರ್ ನಾನು ಸ್ಪರ್ಧಿಸಿದ್ದು ನವೋದಯ ವಿದ್ಯಾ ಸಂಘದ ಸಮಸ್ತ ಮತದಾರ ಬಂಧುಗಳು ಅಮೂಲ್ಯವಾದ ಮತವನ್ನು ನನ್ನ ಕ್ರಮ ಸಂಖ್ಯೆ 5, ಪ್ರೆಷರ್ ಕುಕ್ಕರ್ ಗುರುತಿಗೆ ಮತ ನೀಡಿ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲು ಜಯಶೀಲರನ್ನಾಗಿ ಮಾಡಬೇಕಾಗಿ ವಿನಂತಿ ಮಾಡಿದರು. ಪ್ರತಿಯೊಬ್ಬ ಮತದಾರರಿಗೂ 13 ಮತದಾನಗಳನ್ನು ಚಲಾಯಿಸುವ ಅಧಿಕಾರವಿರುತ್ತದೆ, ಈ 13 ಮತಗಳಲ್ಲಿ ಒಂದು ಮತವನ್ನು ನನಗೆ ಚಲಾಯಿಸಬೇಕೆಂದು ಮನವಿ ಮಾಡಿದರು. ನವೋದಯ ವಿದ್ಯಾ ಸಂಘದ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದು ಆ ಯೋಜನೆಗಳೆಂದರೆ ನವೋದಯ ವಿದ್ಯಾ ಸಂಘದ ಅತ್ಯುತ್ತಮ ಫಲಿತಾಂಶ ಪಡೆಯಲು ಎಲ್ಲಾ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಶ್ರಮಿಸುವುದು, ಅದೇ ರೀತಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ಮತ್ತು ಸಿಇಟಿ ತರಬೇತಿ ನೀಡುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ಶಿಕ್ಷಕರಿಂದ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ತರಬೇತಿ ಶಿಬಿರವನ್ನು ನಡೆಸುವುದು, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಅತ್ಯುತ್ತವಾಗಿ ರೂಪಿಸಲು ನುರಿತ ಶಿಕ್ಷಕರು ಹಾಗೂ ಉಪನ್ಯಾಸಕರಿಂದ ವಿವಿಧ ರೀತಿಯ ಕಾರ್ಯಗಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಹಳೆಯ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಸ್ಥೆಯ ದಾನಿಗಳಿಂದ ಸಂಸ್ಥೆಗೆ ನಿಧಿ ಸಂಗ್ರಹಿಸುವುದು, ಆ ನಿಧಿಯನ್ನು ಬ್ಯಾಂಕಿನಲ್ಲಿ ಠೇವಣಿ ಇಡುವುದು, ಅದರಿಂದ ಬರುವ ಬಡ್ಡಿ ಹಣದಲ್ಲಿ ಸಂಸ್ಥೆಯ ಅಭಿವೃದ್ಧಿಯನ್ನು ಮಾಡುವುದು, ಇನ್ಫೋಸಿಸ್ ಫೌಂಡೇಶನ್ ಮೂಲಕ ಸಂಸ್ಥೆಯ ಏಳಿಗೆಗೆ ಶ್ರಮಿಸುವುದು, ನವೋದಯ ವಿದ್ಯಾ ಸಂಸ್ಥೆಯ ನೌಕರರ ಸಮಸ್ಯೆಗಳಿಗೆ ಸ್ಪಂದನೆ ಮಾಡುವುದು, ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ಬಡ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡುವುದು, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಣೆ ಮಾಡುವುದು. ಈ ಮೇಲ್ಕಂಡ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿದರು.
ವರದಿ ಹರೀಶ್ ಉಲಿವಾಲ
comments
Log in to write reviews