ರಾಜ್ಯದ 12 ಜಿಲ್ಲೆಗಳಲ್ಲಿ ಮುಂದಿನ 3 ದಿನ ಮಳೆ

ರಾಜ್ಯದ 12 ಜಿಲ್ಲೆಗಳಲ್ಲಿ ಮುಂದಿನ 3 ದಿನ ಮಳೆ

2024-10-08 12:09:01

ಬೆಂಗಳೂರು, ಅ.8: ಕೊಡಗು, ಚಿಕ್ಕಮಗಳೂರು ಸೇರಿ ಕರ್ನಾಟಕದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್...

ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ...
ಬಾಗಲಕೋಟೆ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ವಿಜಯನಗರ ಜಿಲ್ಲೆಗಳಲ್ಲಿಯೂ ಸಹ ಮುಂದಿನ 3 ದಿನ ಸಾಧಾರಣ ಮಳೆಯಾಗಲಿದೆ.

ಈ ಪ್ರದೇಶಗಳಲ್ಲಿ ಸುರಿದಿದೆ ಮಳೆ...
ಪುತ್ತೂರು, ನಾಪೋಕ್ಲು, ಉಪ್ಪಿನಂಗಡಿ, ಪಣಂಬೂರು, ಮಾಣಿ, ಕೃಷ್ಣರಾಜಪೇಟೆ, ಕನಕಪುರ, ತಿಪಟೂರು, ಹಿರೇಕೆರೂರು, ಆಗುಂಬೆ, ಕಳಸ, ಮೂಡಿಗೆರೆ, ಕೊಟ್ಟಿಗೆಹಾರ, ಕೊಪ್ಪ, ಬೇಲೂರು, ಬೆಳ್ಳೂರು, ಭದ್ರಾವತಿ, ಗೇರುಸೊಪ್ಪ, ಬನವಾಸಿ, ಬೆಳ್ತಂಗಡಿ, ಧರ್ಮಸ್ಥಳ, ಕದ್ರಾ, ಗುತ್ತಲ್, ಹಿಡಕಲ್, ಚನ್ನರಾಯಪಟ್ಟಣ, ಎಚ್​.ಡಿ ಕೋಟೆ, ಕುಶಾಲನಗರ, ಕುಣಿಗಲ್, ತ್ಯಾಗರ್ತಿ, ಗುಂಡ್ಲುಪೇಟೆಯಲ್ಲಿ ನಿನ್ನೆ ಮಳೆಯಾಗಿದೆ.

author single

L Ramprasad

Managing Director

comments

No Reviews