ನಾಗಮಂಗಲ ಕೋಮುಗಲಭೆಗೆ  ಪೊಲೀಸರ ನಿರ್ಲಕ್ಷ್ಯವೇ ಕಾರಣ: ಕೇಂದ್ರ ಸಚಿವ ಎಚ್.ಡಿ.ಕೆ ಆರೋಪ

ನಾಗಮಂಗಲ ಕೋಮುಗಲಭೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ಕೇಂದ್ರ ಸಚಿವ ಎಚ್.ಡಿ.ಕೆ ಆರೋಪ

2024-09-13 12:39:18

ಮಂಡ್ಯ, ಸೆ.13: ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಘಟಿಸಿದ ಅನಾಹುತಗಳನ್ನು ಕಣ್ಣಾರೆ ಕಂಡು ಮಾಜಿ ಸಿಎಂ ಹಾಗೂ ಸ್ಥಳೀಯ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಾಗಮಂಗಲದ ಬದರಿಕೊಪ್ಪೆ ಬಳಿಯ ಮಸೀದಿಯೊಂದರ ಮುಂದೆ ಸಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆಯಲ್ಲಿ ಜೋರಾಗಿ ಗಣೇಶನ ಭಕ್ತಿ ಗೀತೆಗಳನ್ನು ಹಾಕಿ ಕುಣಿದಾಡುತ್ತಿದ್ದಂತೆ ಉದ್ರಿಕ್ತರಾದ ಅನ್ಯ ಕೋಮಿನ ಕಿಡಿಗೇಡಿಗಳು ಗಣೇಶ ಮೂರ್ತಿ ಹೊತ್ತ ಮೆರವಣಿಗೆ ಮೇಲೆ ಚಪ್ಪಲಿ, ಕಲ್ಲುತೂರಿದ್ದಾರೆ‌. ಕಳೆದ  ಸೆಪ್ಟೆಂಬರ್ 11 ರ ರಾತ್ರಿ ನಡೆದ ಈ ಗಲಭೆ ಎರಡು ಕೋಮುಗಳ ನಡುವೆ ಯುದ್ಧಕ್ಕೂ ಕಾರಣವಾಯಿತು. ಕ್ರಮೇಣ ನಾಗಮಂಗಲದ 1.5 ಲಕ್ಷ ರೂಪಾಯಿ ಮೌಲ್ಯದ ಹಣ್ಣಿನ ಅಂಗಡಿಗಳು, ಕೆಲವು ಬಟ್ಟೆ ಅಂಗಡಿಗಳು ಗಲಭೆಕೋರರಿಂದ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. 
ಈ ಕೋಮುಗಲಭೆ ಬಳಿಕ ನಿನ್ನೆ ನ್ಯಾಯಾಲಯದ ಆದೇಶದಂತೆ ಬಂಧಿತ 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 
ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಗಲಭೆಯಲ್ಲಿ ಸುಟ್ಟ ಬಟ್ಟೆ ಶೋ ರೂಂ, ಹಣ್ಣಿನ ಅಂಗಡಿಗಳು ಹಾಗೂ ಗುಜರಿ ಅಂಗಡಿಗಳನ್ನು ಪರಿಶೀಲಿಸಿ ಅವುಗಳ ಮಾಲೀಕರ ಅಳಲನ್ನು  ಆಲಿಸಿದರು.
ನಂತರ ಹೇಳಿಕೆ ನೀಡಿದ ಕೇಂದ್ರ ಸಚಿವ ಕುಮಾರಸ್ವಾಮಿ ' ಈ ನಾಗಮಂಗಲ ಸರ್ಕಲ್ ಬಳಿಯ ಮಸೀದಿ ಎದುರು ಮಂಗಳವಾರ ಇಳಿಸಂಜೆ ಬಂದಾಗ ಗಲಾಟೆ ಶುರುವಾದಾಗ ಪೊಲೀಸರು ಇರಬೇಕಿತ್ತು. ಮೊದಲೇ ಈ ಬಗ್ಗೆ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಡಿಜಿಪಿ‌ ಸೂಕ್ತ ಬಂದೋಬಸ್ತ್ ಕಲ್ಪಿಸಿ ಗಣೇಶನ ಮೂರ್ತಿಯ ವಿಸರ್ಜನೆ ವೇಳೆ ಕೋಮುಗಲಭೆ ಆಗದಂತೆ ಮುಂಜಾಗ್ರತಾ ವಹಿಸಬೇಕಿತ್ತು. ಇಷ್ಟೆಲ್ಲಾ ಕೋಮುಗಲಭೆ ನಡೆದರೂ ಗೃಹ ಸಚಿವರು ಮಾತ್ರ ನಾಗಮಂಗಲದಲ್ಲಿ ನಡೆದಿರುವುದು ಒಂದು ಆಕಸ್ಮಿಕ ಘಟನೆ ಅಷ್ಟೇ ಎಂದು ಹೇಳಿದ್ದಾರೆ. ಆದರೆ ಇಲ್ಲಿ ನೋಡಿದಾಗ ಕನಿಷ್ಠ 25 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟ ಉಂಟಾಗಿದೆ. ಇದಕ್ಕೆ ಮೊದಲೇ ಅಂದಾಜಿಸಿ ಕಿಡಿಗೇಡಿಗಳು ಕೋಮುಗಲಭೆ ಸೃಷ್ಟಿಸಲು ಪೂರ್ವ ಯೋಜಿತ ಕೃತ್ಯ ನಡೆಸಲು ಮುಂದಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಸ್ಥಳೀಯ ಶಾಸಕರೂ ಆದ ಚೆಲುವರಾಯಸ್ವಾಮಿ ಅವರ ನಿರ್ಲಕ್ಷ್ಯವೂ ಕಾರಣ ಎಂದು ವಾಗ್ದಾಳಿ ನಡೆಸಿದರು.

author single

L Ramprasad

Managing Director

comments

No Reviews