ನಾಗಮಂಗಲ ಕೋಮುಗಲಭೆ: ಸಂತ್ರಸ್ತರಿಗೆ ಪರಿಹಾರ ವಿತರಿಸಿದ ಕೇಂದ್ರ ಸಚಿವ ಎಚ್.ಡಿ.ಕೆ

ನಾಗಮಂಗಲ ಕೋಮುಗಲಭೆ: ಸಂತ್ರಸ್ತರಿಗೆ ಪರಿಹಾರ ವಿತರಿಸಿದ ಕೇಂದ್ರ ಸಚಿವ ಎಚ್.ಡಿ.ಕೆ

2024-09-13 02:03:03

ನಾಗಮಂಗಲ, ಸೆ.13: ಸ್ಥಳೀಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ನಾಗಮಂಗಲ‌ ಕೋಮುಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಗಣೇಶನ ಮೂರ್ತಿ ವಿಸರ್ಜನೆ ಮಾಡುವಾಗ ನಡೆದಿದ್ದ ಕೋಮುಗಲಭೆಯಿಂದ ಸುಮಾರು 25 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಈಗಾಗಲೇ ಕೋರ್ಟ್ ಈ ಕೋಮುಗಲಭೆಯ ಬಂಧಿತ 52 ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ‌.
ಈ ಗಲಭೆ ನಂತರ ಇಂದು ಬೆಳಗ್ಗೆ ಮಂಡ್ಯ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಾಗಮಂಗಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗಲಭೆ ಪೀಡಿತ ಸಂತ್ರಸ್ತರಿಗೆ ತಲಾ 2 ಸಾವಿರದಿಂದ 2 ಲಕ್ಷ ರೂ.ವರೆಗೆ ವೈಯಕ್ತಿಕವಾಗಿ ಪರಿಹಾರ ಧನ ವಿತರಿಸಿದ್ದಾರೆ.

ಬುಧವಾರ ತಡರಾತ್ರಿ ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 20ಕ್ಕೂ ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಭಸ್ಮ ಮಾಡಿದ್ದರು. ಇದರಿಂದ ಅಂಗಡಿ ಮಾಲೀಕರು ತಮ್ಮ ಜೀವನೋಪಾಯಕ್ಕೆ ಆತಂಕ ವ್ಯಕ್ತಪಡಿಸಿದ್ದರು.

ಇಂದು ಬೆಳಿಗ್ಗೆ ಗಲಭೆ ನಡೆದಿದ್ದ ಜಾಗಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಸುಟ್ಟುಹೋಗಿರುವ ಅಂಗಡಿಗಳ ಬಳಿ ಪರಿಶೀಲಿಸಿದರು. ನಂತರ ಅಂಗಡಿ ಮಾಲೀಕರ ಜೊತೆ ಚರ್ಚಿಸಿ ಮಾಹಿತಿ ಪಡೆದರು. ವಿವಿಧ ಕಡೆ ಹಾನಿಯಾಗಿರುವುದನ್ನು, ವಾಹನಗಳನ್ನು ಸುಟ್ಟುಹೋಗಿರುವುದನ್ನು ಪರಿಶೀಲಿಸಿದರು. ಬಳಿಕ ಪರಿಹಾರದ ಮೊತ್ತವನ್ನು ವಿತರಣೆ ಮಾಡಿದರು.

ಈ ಕೋಮುಗಲಭೆಯಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಎಚ್.ಡಿ.ಕೆ ಅವರು ತಲಾ 25 ಸಾವಿರ ರೂಪಾಯಿಯಿಂದ 2 ಲಕ್ಷ ರೂ.ವರೆಗೂ ಪರಿಹಾರ ವಿತರಣೆ ಮಾಡಿದರು. ನಷ್ಟ ಆಧರಿಸಿ ಪರಿಹಾರ ವಿತರಣೆ ಮಾಡಿದರು. ಎಲ್ಲಾ ಸಂತ್ರಸ್ತರನ್ನು ಮಾಜಿ ಶಾಸಕ ಸುರೇಶ್ ಗೌಡರ ಮನೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಪರಿಹಾರ ಮೊತ್ತ ವಿತರಿಸಿದರು. ಇದೇ ವೇಳೆ ಕಷ್ಟ ಹೇಳಿಕೊಂಡು ಬಂದವರಿಗೂ ಕುಮಾರಸ್ವಾಮಿ ಸಣ್ಣಮಟ್ಟದ ಆರ್ಥಿಕ ನೆರವು ನೀಡಿದರು.

ನಾಗಮಂಗಲ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಗಲಾಟೆಯಲ್ಲಿ ಹಾನಿಯಾದ ಅಂಗಡಿ ಮಾಲೀಕರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದೇನೆ. ಆದರೆ ರಾಜ್ಯಸರ್ಕಾರ ಕೂಡಲೇ ಪರಿಹಾರ ನೀಡಿ ಅಂಗಡಿ ಮಾಲೀಕರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

author single

L Ramprasad

Managing Director

comments

No Reviews