ಮುಡಾ ವಿಶೇಷ ಭೂಸ್ವಾಧೀನಾಧಿಕಾರಿ ಎತ್ತಂಗಡಿ!
2024-09-14 10:12:57
ಮೈಸೂರು, ಸೆ.14: ಮುಡಾ ಸೈಟ್ ಹಗರಣದ ಪ್ರಾಸಿಕ್ಯೂಶನ್ ನಿಂದ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ದಿನಗಣನೆ ಆರಂಭವಾಗಿದೆ. ಇದೀಗ ಸಿಎಂ ಸಿದ್ದರಾಮಯ್ಯ ಅಧಿಕಾರದ ಭವಿಷ್ಯ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿನ ಮೇಲೆ ಅವಲಂಬಿತವಾಗಿದೆ.
ಈ ನಡುವೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾದ) ವಿಶೇಷ ಭೂಸ್ವಾಧೀನಾಧಿಕಾರಿ ಆರ್. ಮಂಜುನಾಥ್ ಅವರನ್ನು ವರ್ಗಾವಣೆ ಮಾಡಿ ರಾಜ್ಯಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಆರ್. ಮಂಜುನಾಥ್ ಸೇರಿದಂತೆ 8 ಜನ ಕೆಎಎಸ್ ಅಧಿಕಾರಿಗಳ ವರ್ಗಾವಣೆ:
1.ವೀಣಾ ಆರ್.–ಮುಖ್ಯ ಆಡಳಿತಾಧಿಕಾರಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು
2.ಗೀತಾ ಈ. ಕೌಜಲಗಿ – ಕುಲಸಚಿವರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ-ಹುಬ್ಬಳ್ಳಿ
3.ಮಹೇಶ್ ಜೆ.–ಮೈಸೂರು ಮಹಾನಗರ ಪಾಲಿಕೆ ಆಯುಕ್ತ
4.ಮಂಜುನಾಥ್ ಆರ್.– ವಿಶೇಷ ಭೂಸ್ವಾಧೀನಾಧಿಕಾರಿ ಕಬಿನಿ ಜಲಾಶಯ ಯೋಜನೆ, ಮೈಸೂರು
5.ಜಗನ್ನಾಥ ರೆಡ್ಡಿ–ಆಯುಕ್ತರು, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ, ಬಸವಕಲ್ಯಾಣ
6.ಅರುಣಕುಮಾರ್ ಕುಲಕರ್ಣಿ –ವಿಶೇಷ ಭೂಸ್ವಾಧಿನಾಧಿಕಾರಿ ಕಾರಂಜಾ ಯೋಜನೆ, ಬೀದರ್
7.ಅನುರಾಧ ವಸ್ತ್ರ– ಕುಲಸಚಿವರು (ಆಡಳಿತ) ಬಾಗಲಕೋಟೆ ವಿ.ವಿ, ಜಮಖಂಡಿ
8.ಮೊಹಮ್ಮದ್ ಶಕೀಲ್– ಉಪ ವಿಭಾಗಾಧಿಕಾರಿ, ಬೀದರ್ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
comments
Log in to write reviews