ಮುಡಾ ಸೈಟ್ ಹಂಚಿಕೆ ಪಟ್ಟಿ ಲಭ್ಯ: ಒಬ್ಬರಿಗೇ 26 ಸೈಟ್ ಹಂಚಿಕೆ!

ಮುಡಾ ಸೈಟ್ ಹಂಚಿಕೆ ಪಟ್ಟಿ ಲಭ್ಯ: ಒಬ್ಬರಿಗೇ 26 ಸೈಟ್ ಹಂಚಿಕೆ!

2024-11-09 06:43:28

ಮೈಸೂರು, ನ.9: 50:50 ಅನುಪಾತದಲ್ಲಿ ಹಂಚಿಕೆ ಮಾಡಿದ್ದ ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಿಂಪಡೆದಿತ್ತು. ಮುಡಾದ ಈ ನಿರ್ಧಾರದಿಂದ ನಿವೇಶನ ಪಡೆದವರಿಗೆ ಸಂಕಷ್ಟ ಶುರುವಾಗಿದೆ. ಇನ್ನು, ಮುಡಾ ಹಂಚಿಕೆ ಮಾಡಿದ್ದ 211 ನಿವೇಶನಗಳ ಪಟ್ಟಿ ಲಭ್ಯವಾಗಿದ್ದು, ಯಾರಿಗೆ ಎಷ್ಟು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ಒಟ್ಟು 241 ಮುಡಾ ನಿವೇಶನಗಳು ಮಂಜೂರಾಗಿದ್ದು, ಇದರಲ್ಲಿ 211 ನಿವೇಶನಗಳ ಬಗ್ಗೆ ಮಾತ್ರ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಅಬ್ದುಲ್ ವಾಜಿದ್ ಎಂಬುವರಿಗೆ ಅಕ್ರಮವಾಗಿ ಬರೋಬ್ಬರಿ 26 ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ಯಾವತ್ತೋ ವಶಪಡಿಸಿಕೊಂಡ ಭೂಮಿಗಳಿಗೆ 2020 ರಿಂದ 2023ರ ಅವಧಿಯಲ್ಲಿ ಮುಡಾ ಆಯುಕ್ತರ ತೀರ್ಮಾನದಂತೆ ಸೈಟ್ ಹಂಚಿಕೆ ಮಾಡಲಾಗಿದೆ.

ಮುಡಾ 50-50 ನಿಯಮದಡಿ ಸೈಟ್ ಪಡೆದವರ ಪಟ್ಟಿ:

1.ಎಂ.ಸಿ.ಪದ್ಮಾ ಮಕ್ಕಳಾದ ಬ್ರಿಜೇಸ್ ಅರಸ್ –5.

2.ಸುಶೀಲ ಮಕ್ಕಳಾದ ಸುಮಂತ್ ಅರಸ್, ಜಯಂತ್ ಅರಸ್ – 6.

3.ಮನು ಅರಸ್, ಜಯಂತ್, ಅರ್ಚನಾ, ಸುಮಂತ್ – 4

4.ಪೊ.ಮಹದೇವ್ ಮತ್ತು ಗೀತಾ –12.

5.ಅಬ್ದುಲ್ ವಾಜಿದ್ –26

6.ಸೈಯದ್ ಯುಸಫ್ –21

7.ರೂಪ –3

8.ಪ್ರೇಮಾ- 2

9.ಕನಕ -3

10.ಲೋಕೇಶ್- 2

11.ರವಿ – 2

12.ನಿಂಗಪ್ಪ- 2

13.ಲಕ್ಷಿ- 1

14.ವೈರಮುಡಿ- 7

15.ಮಲ್ಲಪ್ಪ- 19

16.ಸುರೇಶಮ್ಮ- 11

17.ಮಹದೇವಮ್ಮ -1

18.ವಿಷಕಂಠ – 4

19.ಸಿದ್ದಯ್ಯ – 4

20.ಕಮಲಮ್ಮ – 1

21.ಕೆ.ಪಿ.ಶಿವಪ್ರಸಾದ್ – 1

22.ಸೈಯದ್ ನುಸ್ರುತ – 4

23.ವೈಶಾಲಿ – 1

24.ಪ್ರವೀಣ್ – 2

25.ಸಿ.ಕೆ.ಭಾಸ್ಕರ್ – 1

26.ಸಿ.ಜೆ.ರಾಜರಾಮ್ –1

27.ಚೌಡಯ್ಯ – 7

28.ಕ್ಯಾಥಡ್ರಲ್ ಸೊಸೈಟಿ ಕಾರ್ಯದರ್ಶಿ ಅಲಮೇಡಾ–6

29.ಸುನಂದ – 1

30.ಎಸ್.ಜಿ. ಶಿವಶಂಕರ್ – 1

31.ಕೆ.ರಘುವೀರ್ ಕಾಮತ್-1

32.ವಿಮಲಾ – 1

33.ನಾಗರತ್ನ – 1

34.ವೆಂಕಟಪ್ಪ – 17

35.ದೇವಮ್ಮ – 16

36.ಆಲನಹಳ್ಳಿ ಗೃಹನಿರ್ಮಾಣ ಸಹಕಾರ ಸಂಘ-ಅಧ್ಯಕ್ಷ/ಕಾರ್ಯದರ್ಶಿ–13 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕ ತಂದಿಟ್ಟಿರುವ ಮುಡಾ ನಿವೇಶನ ಹಂಚಿಕೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಜುಲೈನಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದ ಆಯೋಗ ರಚಿಸಿದ್ದು, ಅವರಿಗೆ ವರದಿ ಸಲ್ಲಿಕೆಗೆ 6 ತಿಂಗಳ ಕಾಲಾವಕಾಶ ನೀಡಲಾಗಿದೆ.

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದರು. ಲೋಕಾಯುಕ್ತ ಅಧಿಕಾರಿಗಳು ಬರೊಬ್ಬರಿ 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಅಧಿಕಾರದಲ್ಲಿದ್ದಾಗಲೇ ಲೋಕಾಯುಕ್ತ ವಿಚಾರಣೆಗೆ ಹಾಜರಾದ ಮೊದಲ ಮುಖ್ಯಮಂತ್ರಿ ಎಂಬ ಅಪಖ್ಯಾತಿಗೂ ಸಿದ್ದರಾಮಯ್ಯ ಭಾಜನರಾದರು.

author single

L Ramprasad

Managing Director

comments

No Reviews