ಮುಡಾ ಹಗರಣ: ಸಿದ್ದರಾಮಯ್ಯರ ನೈತಿಕ ರಾಜಕಾರಣ ಠುಸ್!
2024-09-25 10:15:30
ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಡಿನೋಟಿಫಿಕೇಷನ್, ಕಾನೂನುಬಾಹಿರ ಕೃಷಿ ಭೂಮಿ ಪರಿವರ್ತನೆಗೆ ಪ್ರಭಾವ ಬೀರಿದ ಆರೋಪವಿದೆ. 2013 ರಲ್ಲಿ ಸಿಎಂ ಆದ ಬಳಿಕ 50 50 ಅಡಿಯಲ್ಲಿ ಸಿಎಂ ಪತ್ನಿ ಬದಲಿ ನಿವೇಶನ ಕೇಳಿದ್ದರು. ಸಿಎಂ ಪುತ್ರ ಪಾಲ್ಗೊಂಡಿದ್ದ ಮುಡಾ ಸಭೆಯಲ್ಲಿ 50 50 ನಿವೇಶನ ಹಂಚಿಕೆಗೆ ಅನುಮೋದನೆ ನೀಡಲಾಗಿದೆ. ಅಲ್ಲದೇ ಭೂಸ್ವಾಧೀನವಾದ ದೇವನೂರು ಬಡಾವಣೆ ಬಿಟ್ಟು ಬೆಲೆಬಾಳುವ ವಿಜಯನಗರ ಬಡಾವಣೆಯಲ್ಲಿ 14 ಬದಲಿ ನಿವೇಶನ ಪಡೆಯಲಾಗಿದೆ. ಸಿದ್ದರಾಮಯ್ಯ ವಿರುದ್ಧ ಮೇಲ್ನೋಟಕ್ಕೆ ತನಿಖೆ ಅಗತ್ಯವೆಂದು ಹೈಕೋರ್ಟ್ ಕೂಡಾ ಅಭಿಪ್ರಾಯಪಟ್ಟಿದೆ.
ಮುಖ್ಯಮಂತ್ರಿಯಾದವರು ತನಿಖೆಗೆ ಹಿಂಜರಿಯಬಾರದೆಂದು ಹೈಕೋರ್ಟ್ ಹೇಳಿದೆ. ದೂರಿನಲ್ಲಿನ ಅಂಶಗಳನ್ನು ಗಮನಿಸಿದರೆ ತನಿಖೆ ಅಗತ್ಯವೆಂದು ಕಂಡುಬಂದಿದೆ. ಗೋವಾ, ಡಿಯು ಡಮನ್ ಪ್ರದೇಶಗಳು ಭಾರತಕ್ಕೆ ಸೇರಿದ ನಂತರವೂ ಹಳೆಯ ಅಪರಾಧಗಳಿಗೆ ಪೋರ್ಚುಗೀಸ್ ಪ್ರೊಸೀಜರ್ ಕೋಡ್ ಅನ್ವಯಿಸಲಾಗುತ್ತಿತ್ತು. ಇದನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿ ಹಿಡಿದಿದೆ. ಈ ಪ್ರಕರಣದಲ್ಲಿಯೂ ಎಲ್ಲಾ ಆರೋಪಗಳೂ ಜುಲೈ 1ಕ್ಕೂ ಹಳೆಯ ಕೃತ್ಯಗಳಾಗಿರುವುದರಿಂದ ಸಿಆರ್‌ಪಿಸಿ 156 (3) ಅಡಿಯಲ್ಲಿಯೇ ತನಿಖೆ ನಡೆಸುವುದು ಸೂಕ್ತ. ಹೀಗಾಗಿ ಮೈಸೂರಿನ ಲೋಕಾಯುಕ್ತ ಎಸ್‌ಪಿ ತನಿಖೆ ನಡೆಸಿ ಡಿಸೆಂಬರ್ 24 ರೊಳಗೆ ವರದಿ ಸಲ್ಲಿಸಬೇಕೆಂದು ಆದೇಶಿಸುತ್ತಿದ್ದೇನೆ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದಾರೆ.
ನಾಳೆ(ಸೆಪ್ಟೆಂಬರ್ 26) ಈ ಆದೇಶದ ಪ್ರತಿ ಲಭ್ಯವಾಗುವ ಹಿನ್ನೆಲೆಯಲ್ಲಿ ನಾಳೆಯೇ ಮೈಸೂರಿನ ಲೋಕಾಯುಕ್ತ ಪೊಲೀಸರು ಸಿಎಂ ವಿರುದ್ಧ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ. ಎಫ್‌ಐಆರ್ ದಾಖಲಾದರೆ ತನಿಖಾಧಿಕಾರಿಗೆ ಬಂಧನ ಸೇರಿದಂತೆ ಎಲ್ಲ ಅಧಿಕಾರಗಳೂ ಇದ್ದು ಆರೋಪಿ ಸ್ಥಾನದಲ್ಲಿ ಸಿದ್ದರಾಮಯ್ಯ ನಿಲ್ಲುತ್ತಾರೆ. ವಿಚಾರಣೆಗೆ ಕರೆದಾಗ ತನಿಖಾಧಿಕಾರಿ ಮುಂದೆ ಸಿದ್ದರಾಮಯ್ಯ ಹಾಜರಾಗಬೇಕಿದೆ. ಇನ್ನು ಸಿದ್ದರಾಮಯ್ಯಗೆ ಎರಡು ದಿನಗಳಲ್ಲಿ ಎರಡು ಹಿನ್ನಡೆಗಳಾಗಿದ್ದರೂ ಕೂಡಾ ಕಾನೂನು ಹೋರಾಟಕ್ಕೆ ಸಿದ್ದರಾಗಿದ್ದಾರೆ.
ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದ ಸಿದ್ದರಾಮಯ್ಯ!
ಹೌದು, 2011 ರಲ್ಲಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಸಿಲುಕಿ ಲೋಕಾಯುಕ್ತ ತನಿಖೆಯಲ್ಲಿ ಆರೋಪಿಯಾಗಿದ್ದ ಅಂದಿನ ಸಿಎಂ ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಬಲವಾಗಿ ಒತ್ತಾಯಿಸಿದ್ದರು. ಆಗ ಸಿಎಂ ಆಗಿದ್ದ ಯಡಿಯೂರಪ್ಪ ಅವರು ನಿಕ್ಷಪಕ್ಷಪಾತ ತನಿಖೆಗಾಗಿ ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಬಲವಾಗಿ ಒತ್ತಾಯಿಸಿ ಹೇಳಿಕೆ ನೀಡಿದ್ದರು. ಆದರೆ ಈಗ ಮುಡಾ ಸೈಟ್ ಹಗರಣದಲ್ಲಿ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಶನ್ ಅನುಮತಿ ಸರಿ ಎಂದು ಹೈಕೋರ್ಟ್ ಆದೇಶ ನೀಡಿದೆ ಮತ್ತು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಹ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಸೈಟ್ ಹಗರಣದ ತನಿಖೆ ನಡೆಸಲು ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್ಪಿಗೆ ಆದೇಶ ನೀಡಿ ಇನ್ನು 3 ತಿಂಗಳ ಒಳಗಾಗಿ ವರದಿ ನೀಡುವಂತೆ ಆದೇಶಿಸಿದೆ.
ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಕಾನೂನಿನ ಕುಣಿಕೆಯಿಂದ ಒಂದಿಷ್ಟು ಬಿಡಿಸಿಕೊಳ್ಳಬಹುದು. ನಂತರ ಯಡಿಯೂರಪ್ಪ ಅವರ ರೀತಿ ಮತ್ತೊಂದು ಬಾರಿ ತನಿಖೆ ಎದುರಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ಆದರೆ ಅಧಿಕಾರಕ್ಕೆ ಅಂಟಿಕೊಂಡು ಕೂತಿರುವ ಸಿದ್ದರಾಮಯ್ಯ ಅವರನ್ನು ದೇಶದ ಯಾವುದೇ ಕೋರ್ಟ್ ಮತ್ತು ಸುಪ್ರೀಂಕೋರ್ಟ್ ಕೂಡ ರಕ್ಷಿಸಲಾರದು! ಏಕೆಂದರೆ ಈವರೆಗೆ ದೇಶದ ಯಾವುದೇ ರಾಜ್ಯದ ಮುಖ್ಯಮಂತ್ರಿ ರಾಜ್ಯಪಾಲರ ಪ್ರಾಸಿಕ್ಯೂಶನ್ ಗೆ ಕೋರ್ಟ್ ತಡೆಯಾಜ್ಞೆ ತರಲು ಸಾಧ್ಯವೇ ಆಗಿಲ್ಲ. ಹಾಗಾಗಿ ಎಐಸಿಸಿ ತಕ್ಷಣವೇ ಮಧ್ಯಪ್ರವೇಶಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸಿದ್ದರಾಮಯ್ಯ ಅವರನ್ನು ಮನವೊಲಿಸಬೇಕಿದೆ.
comments
Log in to write reviews