ಮುಡಾ ಕೇಸ್: ಇ.ಡಿ.ಗೆ ಸ್ನೇಹಮಯಿ ಕೃಷ್ಣ ದೂರು!

ಮುಡಾ ಕೇಸ್: ಇ.ಡಿ.ಗೆ ಸ್ನೇಹಮಯಿ ಕೃಷ್ಣ ದೂರು!

2024-09-28 08:51:28

ಸಿಎಂ ಸಿದ್ದರಾಮಯ್ಯ ಹಾಗೂ ಮತ್ತವರ ಕುಟುಂಬದ ವಿರುದ್ಧದ ಮುಡಾ ಪ್ರಕರಣದ ತನಿಖೆ ಮಾಡಲು ಲೋಕಾಯಕ್ತ ಅಧಿಕಾರಿಗಳ ಒಟ್ಟು 4 ತಂಡಗಳು ರಚನೆಯಾಗಿವೆ.

ಇದರ ನಡುವೆಯೇ ಸಿಎಂಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಈ ಮೊದಲು ಸಿಎಂ ವಿರುದ್ಧ ದೂರು ನೀಡಿದ್ದ ಆರ್​​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು, ಮುಡಾ ಪ್ರಕರಣದಲ್ಲಿ ತನಿಖೆ ಮಾಡಬೇಕು ಎಂದು EDಗೆ ಇ-ಮೇಲ್ ಮೂಲಕ ಸಿಎಂ ವಿರುದ್ಧ ದೂರು ನೀಡಿದ್ದಾರೆಂದು ತಿಳಿದುಬಂದಿದೆ.

ಅಧಿಕಾರ ದುರ್ಬಳಕೆಯಿಂದ 14 ಸೈಟ್​​ಗಳನ್ನು ಮುಡಾದಿಂದ ಅಕ್ರಮವಾಗಿ ಪಡೆಯಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕು ಎಂದು ಸ್ನೇಹಮಯಿ ಕೃಷ್ಣ ಅವರು ದೂರು ನೀಡಿದ್ದಾರೆ.

author single

L Ramprasad

Managing Director

comments

No Reviews