ಮುಡಾ ಕೇಸ್ ತನಿಖೆ: ಇಂದಿನ ಬೆಳವಣಿಗೆಗಳು....

ಮುಡಾ ಕೇಸ್ ತನಿಖೆ: ಇಂದಿನ ಬೆಳವಣಿಗೆಗಳು....

2024-10-04 05:39:15

ಮೈಸೂರು, ಅ.4: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ವಿಚಾರವಾಗಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಮುಡಾ ಹಗರಣದ ತನಿಖೆ ಚುರುಕುಗೊಂಡಿದೆ.

ನಿನ್ನೆ (ಅ.03) ಇಡಿ ಸ್ನೇಹಮಯಿ ಕೃಷ್ಣ ಅವರನ್ನ ಕರೆಸಿಕೊಂಡು ಬರೋಬ್ಬರಿ 500 ಪುಟಗಳ ದಾಖಲೆ ಮತ್ತು ಮಾಹಿತಿ ಸಂಗ್ರಹಿಸಿತ್ತು. ಮತ್ತೊಂದೆಡೆ ಲೋಕಾಯುಕ್ತ ಪೊಲೀಸರು ಮೈಸೂರಿನ ಮುಡಾ ಕಚೇರಿಗೆ ಆಗಮಿಸಿದ ದಾಖಲೆಗಳನ್ನ ಪರಿಶೀಲಿಸಿದ್ರು. ಇವತ್ತು ಲೋಕಾಯುಕ್ತ ಎಸ್‌ಪಿ ಉದೇಶ್ ನೇತೃತ್ವದ ತಂಡ ಸ್ಥಳ ಮಹಜರು ನಡೆಸಿದೆ. 2 ದಿನಗಳ ಹಿಂದೆ ಮೈಸೂರಿನ ಕೆಸರೆ ಗ್ರಾಮದ ಜಮೀನಿಗೆ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನ ಕರೆದೊಯ್ದು ಮಹಜರು ನಡೆಸಿದ್ದ ಅಧಿಕಾರಿಗಳು, ಇಂದು ಸಿಎಂ ಪತ್ನಿ ಪಾರ್ವತಿಗೆ ನೀಡಲಾಗಿದ್ದ ಅಂದ್ರೆ, ವಿಜಯನಗರ ಬಡಾವಣೆಯ 14 ಸೈಟ್‌ಗಳಲ್ಲಿ ಸ್ಥಳ ಮಹಜರು ನಡೆಸಿದೆ.

ಅಂದಹಾಗೆ, ಸಿಎಂ ಸಿದ್ದರಾಮಯ್ಯ ಪತ್ನಿ ಈಗಾಗಲೇ ಮುಡಾಗೆ ಸೈಟ್ ವಾಪಸ್ ಕೊಟ್ಟಿದ್ದಾರೆ. ಸದ್ಯ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ದೂರುದಾರ ಸ್ನೇಹಮಯಿ ಕೃಷ್ಣ, ಸೈಟ್ ವಾಪಸ್ ಕೊಟ್ಟಿರೋದೇ ಪ್ರಕರಣಕ್ಕೆ ಮಹತ್ವದ ಸಾಕ್ಷಿಯಾಗಲಿದೆ ಎಂದಿದ್ದಾರೆ. ಮತ್ತೊಂದೆಡೆ ನಿನ್ನೆ ಶಾಸಕ ಜಿ.ಟಿ.ದೇವೇಗೌಡ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಸ್ನೇಹಮಯಿ ಕೃಷ್ಣ, ಮುಡಾದಲ್ಲಿ ಜಿ.ಟಿ.ದೇವೇಗೌಡರ ಅಕ್ರಮ ಇರಬಹುದು. ಅದಕ್ಕಾಗೇ ಹೀಗೆ ಮಾತಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ನಿನ್ನೆ ಜಿ.ಟಿ ದೇವೆಗೌಡರ ಹೇಳಿಕೆಯನ್ನ ಸಚಿವ ಕೃಷ್ಣಭೈರೇಗೌಡ ಸಮರ್ಥಿಸಿಕೊಂಡಿದ್ದಾರೆ. 40 ವರ್ಷದಿಂದ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಇದ್ದಾರೆ. ಜಿ.ಟಿ ದೇವೇಗೌಡರು ಸಿದ್ದರಾಮಯ್ಯ ಜೊತೆಗೆ, ಎದುರಾಳಿಯಾಗಿ, ವಿರೋಧಿಯಾಗಿ ಇದ್ದವರು. ಅವರ ಅನುಭವದ ಮಾತನ್ನ ಹೇಳಿದ್ದಾರೆ ಎಂದಿದ್ದಾರೆ. ಆದ್ರೆ, ಬಿಜೆಪಿ ಶಾಸಕ ಶ್ರೀವತ್ಸ ಮುಡಾದಲ್ಲಿ ಸರ್ಕಾರ ಮೇಲಿಂದ ಮೇಲೆ ತಪ್ಪು ಮಾಡ್ತಿದೆ, ತರಾತುರಿಯಲ್ಲಿ ನಿವೇಶನ ವಾಪಸ್‌ ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ. ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಸಚಿವ ಶಿವರಾಜ್ ತಂಗಡಗಿ, ಮುಡಾದಲ್ಲಿ ರಾಜಕೀಯ ಕುತಂತ್ರ ನಡೆದಿದೆ ಎಂದಿದ್ದಾರೆ

ಒಟ್ಟಾರೆ ಮೂಡಾ ಹಗರಣದ ವಿಚಾರವಾಗಿ ಒಂದಡೆ ತನಿಖೆ ಚುರುಕಾಗಿದ್ರೆ, ಮತ್ತೊಂದಡೆ, ರಾಜಕೀಯ ಜಟಾಪಟಿಯೂ ತಾರಕಕ್ಕೇರಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಗೆ ಬರಲಿದೆ.

author single

L Ramprasad

Managing Director

comments

No Reviews