ಮುಡಾ ಕೇಸ್ ವಿಚಾರಣೆ ಹಿನ್ನೆಲೆ: ಸಿಎಂ ಮೈಸೂರು ಪ್ರವಾಸದ ಸಮಯ ಬದಲಾವಣೆ
2024-09-01 11:01:43
ಬೆಂಗಳೂರು, ಸೆ.1: ನಾಳೆ ಸೋಮವಾರ ಮಧ್ಯಾಹ್ನ 2:30 ರಿಂದ ಹೈಕೋರ್ಟ್ ನ ಏಕಸದಸ್ಯ ಪೀಠದಲ್ಲಿ ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಶನ್ ಬಗ್ಗೆ ವಿಚಾರಣೆ ನಡೆಯಲಿದೆ.
ಇದುವರೆಗೆ 2 ಬಾರಿ ಹೈಕೋರ್ಟ್ನಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಸಂಬಂಧದ ವಿಚಾರಣೆ ಮುಂದೂಡಿಕೆಯಾಗಿದೆ. ಆದರೆ ನಾಳೆ ಸಿಎಂ ಸಿದ್ದರಾಮಯ್ಯಗೆ ಪ್ರಮುಖ ದಿನವೆಂದು ಹೇಳಬಹುದು. ನಾಳೆ ಹೈಕೋರ್ಟ್ನಲ್ಲಿ ಪ್ರಾಸಿಕ್ಯೂಷನ್ ಕುರಿತು ಅರ್ಜಿ ವಿಚಾರಣೆ ಹಿನ್ನಲೆ ನಾಳಿನ ಸಿಎಂ ಮೈಸೂರು ಪ್ರವಾಸದಲ್ಲಿ ಬದಲಾವಣೆ ಆಗಿದ್ದು, ಬೆಳಗ್ಗೆ ಬದಲಾಗಿ ಸಂಜೆ ಮೈಸೂರಿಗೆ ತೆರಳಲಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ನಾಳೆ ಹೈಕೋರ್ಟ್ನಲ್ಲಿ ಪ್ರಾಸಿಕ್ಯೂಷನ್ ಕುರಿತ ಅರ್ಜಿ ವಿಚಾರಣೆ ನಡೆಯಲಿದೆ. ಆಗಸ್ಟ್ 19 ಮತ್ತು ಆ.31ರಂದು ಹೈಕೋರ್ಟ್ನಲ್ಲಿ ನಡೆದಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿತ್ತು.
ಹೀಗಾಗಿ ಹೈಕೋರ್ಟ್ನಲ್ಲಾಗುವ ಬೆಳವಣಿಗೆಗಳ ಮೇಲೆ ಸಿಎಂ ನಿಗಾ ಇಡಲಿದ್ದಾರೆ. ಹಾಗಾಗಿ ಮನೆಯಲ್ಲೇ ವಾದ, ಪ್ರತಿವಾದದ ಮೇಲೆ ನಿಗಾ ಇಡಲಿದ್ದಾರೆ. ನಾಳೆ ಸಂಜೆ 5 ಗಂಟೆಯವರೆಗೆ ಸಿಎಂ ಸಿದ್ದರಾಮಯ್ಯ ಯಾವುದೇ ಕಾರ್ಯಕ್ರಮ ಇಟ್ಟುಕೊಂಡಿಲ್ಲ. ಇದೇ ಕಾರಣಕ್ಕೆ ನಾಳೆ ಕೈಗೊಂಡಿದ್ದ ಸಿಎಂ ಮೈಸೂರು ಪ್ರವಾಸದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ನಾಳಿನ ಮೈಸೂರು ಪ್ರವಾಸದಲ್ಲಿ ಬದಲಾವಣೆ
ನಾಳೆ ಸೋಮವಾರ ಬೆಳಗ್ಗೆ ಬದಲಾಗಿ ಸಂಜೆ ಮೈಸೂರಿಗೆ ತೆರಳುವ ಸಿದ್ದರಾಮಯ್ಯ, ನಾಳೆ ರಾತ್ರಿ ಮೈಸೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಮಂಗಳವಾರ ಬೆಳಗ್ಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ವಿಶೇಷ ಪೂಜೆ ಬಳಿಕ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಾಡಿದ್ದು ನಡೆಯುವ ಚಾಮುಂಡಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಭೆ ಬಳಿಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ನಿನ್ನೆಯಷ್ಟೇ ಹೈಕೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಸಂಬಂಧ ಅರ್ಜಿ ವಿಚಾರಣೆ ನಡೆದಿತ್ತು. ಸರಿ ಸುಮಾರು ಐದಾರು ಗಂಟೆ ಕಾಲ ವಾದ-ಪ್ರತಿವಾದ ಜೋರಾಗಿಯೇ ಇತ್ತು. ದೂರುದಾರ ಸ್ನೇಹಮಯಿ ಕೃಷ್ಣ ಅರ್ಜಿ ಪರ ವಕೀಲರು ವಾದಕ್ಕೆ ಸಮಯ ಕೇಳುತ್ತಿದ್ದಂತೆ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿದ್ದರು. ಹೀಗಾಗಿ ನಾಳೆ ಹೈಕೋರ್ಟ್ನಲ್ಲಿ ಮತ್ತೊಮ್ಮೆ ವಿಚಾರಣೆ ನಡೆಯಲಿದೆ. ನಾಳೆ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಭವಿಷ್ಯ ಬಹುತೇಕ ನಿರ್ಧಾರವಾಗಲಿದ್ದು, ನಾಳೆ ಸಂಜೆ ಅಥವಾ ಮಂಗಳವಾರ ನ್ಯಾ. ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ನ ಏಕಸದಸ್ಯ ಪೀಠ ತನ್ನ ತೀರ್ಪನ್ನು ನೀಡುವ ಸಂಭವ ಇದೆ
comments
Log in to write reviews