ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಕೇಸ್: ಸುಪ್ರೀಂಕೋರ್ಟ್ ನಲ್ಲೂ ಕೇವಿಯಟ್ ಸಲ್ಲಿಕೆ!
2024-08-19 12:15:59
ಹೊಸದಿಲ್ಲಿ: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ್ದವರಲ್ಲಿ ಒಬ್ಬರಾಗಿರುವ ಸ್ನೇಹಮಯಿ ಕೃಷ್ಣ ಅವರು ದೆಹಲಿಯ ಸುಪ್ರೀಂಕೋರ್ಟ್ ನಲ್ಲಿಯೂ ಅರ್ಜಿ ಸಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ಇಂದು ಆಗಸ್ಟ್ 19ರಂದು ಬೆಳಗ್ಗೆ ಕೇವಿಯಟ್ ಅರ್ಜಿಯನ್ನು ಕೃಷ್ಣ ಅವರು ಸಲ್ಲಿಸಿದ್ದಾರೆ. ಇತ್ತೀಚೆಗೆ, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈ ಮೊದಲು ದೂರು ಸಲ್ಲಿಸಿದ್ದ ಪ್ರದೀಪ್ ಅವರು, ಕರ್ನಾಟಕ ಹೈಕೋರ್ಟ್ ನಲ್ಲಿ ಶುಕ್ರವಾರವೇ (ಆ.16 ರಂದು) ಅರ್ಜಿ ಸಲ್ಲಿಸಿದ್ದರು.
ಸ್ನೇಹಮಯಿ ಕೃಷ್ಣರ ಈ ನಡೆ, ಹೈಕೋರ್ಟ್ ನಿಂದ ಈ ಕೇಸ್ ಸುಪ್ರೀಂಕೋರ್ಟ್ ಗೆ ಹೋದಾಗ ಅಲ್ಲಿ ಸಿಎಂ
ಸಿದ್ದರಾಮಯ್ಯನವರ ಅರ್ಜಿಗೂ ಮೊದಲೇ ದೂರುದಾರರ ಅರ್ಜಿಯ ವಿಚಾರಣೆಯನ್ನು ನಡೆಸುವಂತೆ ಮಾಡಲು ಮೊದಲೇ ಈ ನಡೆ ಅನುಸರಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಇಂದು (ಆ.19ರ) ಮಧ್ಯಾಹ್ನ 2.30ರ ಸುಮಾರಿಗೆ ವಿಚಾರಣೆಗೆ ಬರಲಿದೆ.
ಕೇವಿಯಟ್ ಅರ್ಜಿಯು ಒಂದು ನಿರ್ದಿಷ್ಟ ಪ್ರಕರಣದಲ್ಲಿ ಯಾವುದೇ ಆದೇಶಗಳು ಅಥವಾ ತೀರ್ಪುಗಳನ್ನು ಜಾರಿಗೊಳಿಸುವ ಮೊದಲು ಅವರಿಗೆ ನೋಟಿಸ್ ನೀಡುವಂತೆ ವಿನಂತಿಸಲು ನ್ಯಾಯಾಲಯದಲ್ಲಿ ವ್ಯಕ್ತಿ ಅಥವಾ ಪಕ್ಷವು ಸಲ್ಲಿಸಬಹುದಾದ ಕಾನೂನಾತ್ಮಕ ಮನವಿ. ಯಾವುದೇ ಪ್ರಕರಣದಲ್ಲಿ ಪ್ರತಿವಾದಿಗಳು ಅರ್ಜಿಯನ್ನು ಸಲ್ಲಿಸಿ, ಆ ಅರ್ಜಿಯ ವಿಚಾರಣೆಯನ್ನು ಆರಂಭಿಸುವ ಮೊದಲು ತಮ್ಮ ವಾದವನ್ನು ಆಲಿಸಬೇಕು ಎಂದು ಅದೇ ಪ್ರಕರಣದ ಮತ್ತೊಂದು ಕಕ್ಷಿದಾರರು ನ್ಯಾಯಾಲಯಕ್ಕೆ ಮನವಿ ಮಾಡುವುದ್ದಾಗಿದೆ.
comments
Log in to write reviews