ರಾಜ್ಯದ 16 ಜಿಲ್ಲೆಗಳಲ್ಲಿ ಅ.15 ರವರೆಗೂ ಹಿಂಗಾರು ಮಳೆ!
2024-10-11 08:51:04
ಬೆಂಗಳೂರು, ಅ.11: ರಾಜ್ಯದ 16ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಅಕ್ಟೋಬರ್ 15ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ
ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ಕೊಡಗು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ.
ಈ ಪ್ರದೇಶಗಳಲ್ಲಿ ನಿನ್ನೆ ಮಳೆ
ಶಿಗ್ಗಾಂವ್, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಬೆಳಗಾವಿ, ಕುಂದಗೋಳ, ಬೈಲಹೊಂಗಲ, ಭದ್ರಾವತಿ, ಗೇರುಸೊಪ್ಪ, ಹಳಿಯಾಳ, ಸಿದ್ದಾಪುರ, ಮುರಗೋಡ, ನಿಪ್ಪಾಣಿ, ಹರಪನಹಳ್ಳಿ, ಹಾವೇರಿ, ಬಾದಾಮಿ, ಲಕ್ಷ್ಮೇಶ್ವರ, ಬಿಳಗಿ, ಶಿರಹಟ್ಟಿ, ತರೀಕೆರೆ, ಗುಂಡ್ಲುಪೇಟೆ, ಕಳಸ, ಹುಂಚದಕಟ್ಟೆ, ಧರ್ಮಸ್ಥಳದಲ್ಲಿ ಮಳೆಯಾಗಿದೆ.
ಯಲ್ಲಾಪುರ, ಮುಂಡಗೋಡು, ಚಿಕ್ಕೋಡಿ, ರಬಕವಿ, ಅಣ್ಣಿಗೆರೆ, ಗದಗ, ಹಿರೇಕೆರೂರು, ಯಡವಾಡ, ಸೇಡಬಾಳ, ಸಂಕೇಶ್ವರ, ಹುಕ್ಕೇರಿ, ತಾವರಗೇರಾ, ನಾಯಕನಹಟ್ಟಿ, ಸೋಮವಾರಪೇಟೆ, ಹೊನ್ನಾಳಿ, ದಾವಣಗೆರೆಯಲ್ಲಿ (ಭಾರಿ ಮಳೆ) ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಸಾಧಾರಣ ಮಳೆಯಾಗುತ್ತಿದೆ.
comments
Log in to write reviews