ರಾಜ್ಯದಲ್ಲಿ ಬೆಳೆಗಳಿಗೆ ಮತ್ತೆ ಮಳೆ ಕೊರತೆ!

ರಾಜ್ಯದಲ್ಲಿ ಬೆಳೆಗಳಿಗೆ ಮತ್ತೆ ಮಳೆ ಕೊರತೆ!

2024-09-18 10:59:21

ಬೆಂಗಳೂರು, ಸೆ.18: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ, ಹೀಗಾಗಿ ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿ ಬೆಳೆಗಳಿಗೆ ಮಳೆ ನೀರಿನ ಕೊರತೆ ಉಂಟಾಗಿದೆ.
ಆದರೆ ಕರಾವಳಿ ಮತ್ತು ಮಲೆನಾಡು ಭಾಗದ 9ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಕಲಬುರಗಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ.

ಆದರೆ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ಧಾರವಾಡ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಬೀದರ್​ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಇಲ್ಲೆಲ್ಲಾ ಸುರಿದಿದೆ ಮಳೆ...
 
ಇಷ್ಟಾದರೂ ನಿನ್ನೆ ಪುತ್ತೂರು, ಕೋಟ, ಪಣಂಬೂರು, ಗೋಕರ್ಣ, ಅಂಕೋಲಾ, ಕಾರ್ಕಳ, ಕಾರವಾರ, ಮಂಕಿ, ಮಂಗಳೂರು, ಗೇರುಸೊಪ್ಪ, ಕುಮಟಾ, ಉಡುಪಿ,ಶಿರಾಲಿ, ಲಿಂಗನಮಕ್ಕಿ, ಶೃಂಗೇರಿ, ಸಿದ್ದಾಪುರ, ಸುಳ್ಯ, ಮೂಲ್ಕಿ, ಕುಂದಾಪುರ, ಧಾರವಾಡ, ಶಿರಹಟ್ಟಿ, ನರಗುಂದದಲ್ಲಿ ಮಳೆಯಾಗಿದೆ.

author single

L Ramprasad

Managing Director

comments

No Reviews