ಹೊಳಲ್ಕೆರೆ ತಾಲ್ಲೂಕಿನಲ್ಲೂ ವಕ್ಫ್ ಬೋರ್ಡ್ ಮಾಫಿಯಾಕ್ಕೆ ಬಲಿಯಾಯ್ತು ಹಿಂದೂ ರುದ್ರಭೂಮಿ!
2024-11-08 10:31:46
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರು ಗ್ರಾಮದ 5 ಎಕರೆ ಹಿಂದೂ ರುದ್ರಭೂಮಿಯನ್ನು ಏಕಾಏಕಿ ವಕ್ಫ್ ಬೋರ್ಡ್ ಒತ್ತುವರಿ ಮಾಡಿಕೊಂಡಿದೆ. ಈ ಬಗ್ಗೆ ಇಡೀ ಚಿತ್ರದುರ್ಗ ಜಿಲ್ಲೆಯ ಜನತೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 1965 ರಲ್ಲಿ ಈ 5 ಎಕರೆ ಜಾಗ ಸ್ಮಶಾನವಾಗಿತ್ತು. ಬಳಿಕ ಆದರೆ 2017-18 ರಲ್ಲಿ ಈ ಹಿಂದೂ ರುದ್ರಭೂಮಿಯನ್ನು ಮುಸ್ಲಿಂ ಧರ್ಮದ ವಕ್ಫ್ ಬೋರ್ಡ್ ಗೆ ಸೇರಿಸಲಾಗಿತ್ತು. ಇದಕ್ಕೂ ಮುನ್ನ ಅಲ್ಲಿನ ಗ್ರಾಮಸ್ಥರು ಹುಲ್ಲಿನ ಬಣವೆ ಹಾಕಿಕೊಂಡು ಕಣವನ್ನಾಗಿ ಮಾಡಿಕೊಂಡಿದ್ದರು. ಇದೀಗ ಜಾಗ ವಕ್ಫ್ ಬೋರ್ಡ್‌ಗೆ ಸೇರಿದೆ ಎಂದಾಗ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಈ ಜಾಗದ ವಿಚಾರದಲ್ಲಿ ವಾದ-ವಿವಾದಗಳು ಶುರುವಾಗಿವೆ. ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಜಾಗದ ದಾಖಲೆಗಳನ್ನು ಪರಿಶೀಲಿಸಿ, ಏನಾಗಿದೆ? ಎಂಬುದನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
comments
Log in to write reviews