ಹೊಳಲ್ಕೆರೆ: ತಾಲ್ಲೂಕು ಪತ್ರಕರ್ತರ ಸಂಘ-ಪತ್ರಿಕಾ ವಿತರಕರ ಸಂಘದಿಂದ ಗಾಂಧಿ ಜಯಂತಿ ಆಚರಣೆ
2024-10-04 07:01:33
ಹೊಳಲ್ಕೆರೆ: ಅಹಿಂಸೆ ಸಂದೇಶವನ್ನು ವಿಶ್ವಕ್ಕೆ ಸಾರಿದ ಭಾರತದ ಪಿತಾಮಹ ಮಹಾತ್ಮಗಾಂಧಿ ಚಿಂತನೆಗಳನ್ನು ಸಾಕಾರಗೊಳಿಸಲು ಸರಕಾರಗಳು ಗಾಂಧಿಜೀ ಹೆಸರಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೆಂದು ವಕೀಲ ಎಸ್.ವೇದಮೂರ್ತಿ ಅಭಿಪ್ರಾಯಪಟ್ಟರು.
ಅವರು ಹೊಳಲ್ಕೆರೆ ಪತ್ರಕರ್ತರ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರು ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತ್ಯಕ್ಕಾಗಿ ಹೋರಾಟ ಕೈಗೊಂಡ ಗಾಂಧಿಜೀ ದೇಶವನ್ನು ಅಂಗ್ಲರ ದಾಸ್ಯದಿಂದ ಬಿಡುಗಡೆಗೊಳಿಸಿ ಪ್ರಜಾಪ್ರಭುತ್ವ ಸಿದ್ದಾಂತದ ಭಾರತ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಜಾತಿ ಧರ್ಮ ಎನ್ನದೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ. ಅವರ ಅದರ್ಶಗಳು ಎಂದಿಗೂ ಚಿರಸ್ಥಾಯಿ ಎಂದರು.
ಸ್ವಚ್ಚ ಭಾರತ ಯೋಜನೆ ಕೇವಲ ರಸ್ತೆ, ಚರಂಡಿ ಸ್ವಚ್ಚತೆಯಲ್ಲ. ದೇಶದಲ್ಲಿರುವ ಭ್ರಷ್ಟಚಾರ ಸ್ವಚ್ಚವಾಗಬೇಕು. ಭಯೋತ್ಪಾದನೆ ನಿರ್ಮೂಲನೆ, ಜಾತಿ, ಮತ, ಪಥ, ಧರ್ಮ ತಾರತಮ್ಯ ನಿವಾರಣೆಯಾಗಬೇಕು. ದೇಶ ನಿವಾಸಿಗಳಿಗೆ ಸಮಾನ ಸೌಲಭ್ಯಗಳು ಸಿಕ್ಕಬೇಕು. ಬಡತನ, ನಿರುದ್ಯೋಗ ನಿವಾರಿಸಿ, ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಜಾಗತಿಕ ಮಟ್ಟದಲ್ಲಿ ಬೆಳೆದು ನಿಲ್ಲಬೇಕು. ಮಹಾತ್ಮ ಗಾಂಧಿ ದೇಶಕ್ಕೆ ತಂದುಕೊಟ್ಟು ಸ್ವಾತಂತ್ರ್ಯಕ್ಕೆ ಒಂದು ಆರ್ಥ ಬರಲಿದೆ ಎಂದರು.
ಬಳಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎ.ಜಯಣ್ಣ ಮಾತನಾಡಿ, ಶಿಕ್ಷಣದಲ್ಲಿ ಮಹಾತ್ಮ ಗಾಂಧೀಜಿಯವರ ಸಾಧನೆಗಳನ್ನು ಮಕ್ಕಳಿಗೆ ತಿಳಿಸುತ್ತಿದ್ದೇವೆ. ಗಾಂಧಿ ಆದರ್ಶಗಳನ್ನು ಮನುಕುಲ ಬದುಕಿಗೆ ಅಳವಡಿಸಿಕೊಳ್ಳಬೇಕು. ಪತ್ರಕರ್ತರು ತಾಲೂಕಿನ ಅಭಿವೃದ್ಧಿಗೆ ಸುದ್ದಿಗಳನ್ನು ಬರೆದು ಜಾಗೃತಿ ಮೂಡಿಸುತ್ತಿದ್ದಾರೆ. ಸರಿ, ತಪ್ಪುಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ತದನಂತರ ಹೊಳಲ್ಕೆರೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎ.ಚಿತ್ತಪ್ಪ ಮಾತನಾಡಿ, ಮಹಾತ್ಮ ಗಾಂಧಿ ಶಾಂತಿ ಸಂದೇಶ, ಸತ್ಯಾಗ್ರಹ ಸತ್ಯಕ್ಕಾಗಿ ಹೋರಾಟ ಕಲಿಸಿದರು. ಅಹಿಂಸೆಯ ಮಾರ್ಗ ವಿಶ್ವಕ್ಕೆ ಬೇಕು. ವಿಶ್ವದಲ್ಲಿ ಉಂಟಾಗಿರುವ ಅಶಾಂತಿ ಶಮನಕ್ಕೆ ಗಾಂಧೀಜಿಯವರ ಮಾರ್ಗ ಅಗತ್ಯ ಎಂದು ಆಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸುರೇಶ್ ಆವಿನಹಟ್ಟಿ, ನಾಗರಾಜ್, ಮಧು ನಾಗರಾಜ್ ಹದಡಿ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ತಿಪ್ಪೇರುದ್ರಪ್ಪ, ಗೌರವಾಧ್ಯಕ್ಷ ವಿರುಪಾಕ್ಷಪ್ಪ, ರವಿ, ಶಿವಣ್ಣ ಸೇರಿದಂತೆ ಹಲವಾರು ಪತ್ರಕರ್ತರು, ಪತ್ರಿಕಾ ವಿತರಕರು ಹಾಜರಿದ್ದರು.
comments
Log in to write reviews