ಆಗಸ್ಟ್ 20 ರಿಂದ ಈ ಜಿಲ್ಲೆಗಳಲ್ಲಿ ಭಾರಿ ಮಳೆ!
2024-08-19 10:12:32
ರಾಜ್ಯಾದ್ಯಂತ ಮಳೆಯು ನಾಳೆಯಿಂದ ಚುರುಕುಗೊಳ್ಳಲಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕೊಂಚ ಬಿಡುವು ಪಡೆದಿದ್ದು, ನಾಳೆಯಿಂದ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಹಾಸನ, ದಾವಣಗೆರೆ, ಚಾಮರಾಜನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿಯಲ್ಲಿ ಮಳೆಯಾಗಲಿದೆ. ಬರಗೂರು, ಜೋಯಿಡಾ, ಸಿದ್ದಾಪುರ, ಕದ್ರಾ, ಗೌರಿಬಿದನೂರು, ತೊಂಡೇಭಾವಿ, ಕಾರ್ಕಳ, ಮಂಠಾಳ, ಹಿರಿಯೂರು, ಕುಣಿಗಲ್, ಚಿಕ್ಕಬಳ್ಳಾಪುರ, ಯಲ್ಲಾಪುರ, ಕೋಟ, ಕುಂದಾಪುರ, ಸಂಕೇಶ್ವರ, ಕಲಬುರಗಿ, ಎನ್ಆರ್ಪುರ, ಮಿಡಿಗೇಶಿ, ಸಿರಾ, ಹೊನ್ನಾಳಿ, ತಿಪಟೂರು, ಮುಂಡಗೋಡು, ಗೇರುಸೊಪ್ಪ, ಕಾರವಾರ, ಭಾಲ್ಕಿ, ಸಿಂಧನೂರು, ಔರಾದ್, ಚನ್ನಗಿರಿ, ಬೆಳ್ಳೂರು, ಮಧುಗಿರಿ, ಚಾಮರಾಜನಗರ, ಪಾವಗಡದಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ನಿತ್ಯ ಸಂಜೆ ವೇಳೆ ಮಳೆಯಾಗುತ್ತಿದೆ.
comments
Log in to write reviews