ದಾವಣಗೆರೆಯಲ್ಲಿ ಭಾರಿ ಮಳೆ!
2024-09-30 04:06:25
ದಾವಣಗೆರೆ, ಸೆ.30: ಜಿಲ್ಲೆಯಲ್ಲಿ ಇಂದು ಸೋಮವಾರ ಬೆಳ್ಳಂಬೆಳಗ್ಗೆ ಗುಡುಗು ಸಹಿತ ಮಳೆ ಸುರಿದಿದೆ.
ಇದರಿಂದ ನಗರದ ಹಳ್ಳ-ಕೊಳ್ಳಗಳು ತುಂಬಿ ಹರಿದವು.
ಸೋಮವಾರ ಬೆಳಗಿನ ಜಾವ 3:15ಕ್ಕೆ ಆರಂಭವಾದ ಮಳೆ ಸತತ ಒಂದು ಗಂಟೆ ಕಾಲ ಬಿರುಸಾಗಿ ಸುರಿಯಿತು. ಪರಿಣಾಮ ನಗರದ ಆವರಗೆರೆ ಸರ್ಕಾರಿ ಶಾಲೆಯ ಎದುರು ಮಳೆ ನಿಂತಿದ್ದರಿಂದ ಬೆಳಗ್ಗೆ ಶಾಲೆಗೆ ತೆರಳಲು ಶಾಲಾಮಕ್ಕಳು ಪ್ರಯಾಸಪಟ್ಟರು.
ಜೊತೆಗೆ ನಗರದ ಬೇತೂರು ರಸ್ತೆಯ ವೆಂಕಟೇಶ್ವರ ನಗರದ ತಗ್ಗುಪ್ರದೇಶಗಳ ಮನೆಗಳ ಸುತ್ತ ನೀರು ತುಂಬಿತು.
ದಾವಣಗೆರೆ ನಗರ, ಚನ್ನಗಿರಿ, ಹರಿಹರ, ಮಾಯಕೊಂಡ ಸುತ್ತುಮುತ್ತ ಸೋಮವಾರ ಬೆಳಗಿನ ಜಾವ ಹಲವಡೆ ಮಳೆಯಾಗಿದೆ. ಇದರಿಂದ ಈ ಭಾಗದ ಜಮೀನುಗಳಲ್ಲಿ ನೀರು ತುಂಬಿದ್ದರಿಂದ ಮೆಕ್ಕೆಜೋಳ ಸೇರಿ ಇತರೆ ಬೆಳೆಗಳು ಜಲಾವೃತಗೊಂಡಿವೆ.
ಅದರಲ್ಲೂ ಫಸಲಿಗೆ ಬರುತ್ತಿದ್ದ ಮೆಕ್ಕೆಜೋಳ ಬೆಳೆ ಜಿಲ್ಲೆಯಲ್ಲಿ ಮಳೆ ನೀರಿನಲ್ಲಿ ನೆನೆದ ಪರಿಣಾಮ ರೈತರು ಕೊಂಚ ಆತಂಕಕ್ಕೀಡಾಗಿದ್ದಾರೆ.
comments
Log in to write reviews