ಹರ್ಯಾಣ ರಾಜ್ಯದ ವಿಧಾನಸಭೆ ಚುನಾವಣೆ: ಆಡಳಿತಾರೂಢ ಬಿಜೆಪಿ ಅಧಿಕಾರದತ್ತ ಹೆಜ್ಜೆ!

ಹರ್ಯಾಣ ರಾಜ್ಯದ ವಿಧಾನಸಭೆ ಚುನಾವಣೆ: ಆಡಳಿತಾರೂಢ ಬಿಜೆಪಿ ಅಧಿಕಾರದತ್ತ ಹೆಜ್ಜೆ!

2024-10-08 01:29:36

ಚಂಡೀಗಢ: ಹರ್ಯಾಣ ರಾಜ್ಯದ ವಿಧಾನಸಭೆ ‌ಚುನಾವಣೆ-2024 ಫಲಿತಾಂಶಕ್ಕೆ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಭರದಿಂದ ಸಾಗಿದೆ. 

ಹರ್ಯಾಣ ರಾಜ್ಯದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 
ಆಡಳಿತಾರೂಢ ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 
ವಿರೋಧ ಪಕ್ಷ ಕಾಂಗ್ರೆಸ್ ಸಹ 36 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ರಾಷ್ಟ್ರೀಯ ಲೋಕದಳ ಪಕ್ಷ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಇನ್ನು ಪಕ್ಷೇತರರು ಸಹ 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬಹುಮತಕ್ಕೆ 46 ಕ್ಷೇತ್ರಗಳು ಬೇಕಿರುವ ಕಾರಣ ಆಡಳಿತಾರೂಢ ಬಿಜೆಪಿ ಮತ್ತೊಂದು ಬಾರಿ ಹರ್ಯಾಣ ರಾಜ್ಯದ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.

ಆದರೆ ಚುನಾವಣೋತ್ತರ ಸಮೀಕ್ಷೆಗಳು ಹರ್ಯಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಬಹುದು ಎಂದು ಹೇಳಿದ್ದವು. ಆದರೆ ಬಿಜೆಪಿ ಈ ಸಮೀಕ್ಷೆಗಳ ಭವಿಷ್ಯವನ್ನು ತಲೆಕೆಳಗಾಗಿಸಿ ಹರ್ಯಾಣ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವತ್ತ ದಿಟ್ಟ ಹೆಜ್ಜೆ ಹಾಕಿದೆ.

author single

L Ramprasad

Managing Director

comments

No Reviews