ದರ್ಶನ್ ನೋಡಲು ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಫ್ಯಾನ್ಸ್ ತವಕ!
2024-08-28 11:17:52
ಬೆಂಗಳೂರು/ಬಳ್ಳಾರಿ, ಆ.28: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರೂ ಸಹ ಸಿಗರೇಟ್, ಟೀ ಕುಡಿಯುತ್ತಾ ಖೈದಿಗಳೊಂದಿಗೆ ಹರಟೆ ಹೊಡೆಯುತ್ತಿದ್ದ ಫೋಟೋ ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಫುಲ್ ವೈರಲ್ ಆಯಿತೊ ಆಗಲೇ ಕನ್ನಡದ ಸೂಪರ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರಿಗೆ ಸಂಕಷ್ಟ ಶುರುವಾಯಿತು.
ನಿನ್ನೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿಯೇ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪೊಲೀಸರು ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರನ್ನು ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡುತ್ತಿದ್ದಾರೆ. ಈಗಾಗಲೇ ಬೆಂಗಳೂರು ಬಿಟ್ಟು ಭದ್ರತಾ ವಾಹನದಲ್ಲಿ ದರ್ಶನ್ ಅವರನ್ನು ಬಳ್ಳಾರಿಯ ಸೆಂಟ್ರಲ್ ಜೈಲಿನತ್ತ ಸಾಗಿಸಲಾಗುತ್ತಿದೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಫುಲ್ ಫ್ಯಾನ್ಸ್!
ಇತ್ತ ಬಳ್ಳಾರಿಯ ಸೆಂಟ್ರಲ್ ಜೈಲಿಗೆ ತಮ್ಮ ಫೇವರಿಟ್ ಹೀರೋ ದರ್ಶನ್ ತೂಗುದೀಪ್ ಅವರು ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೇ ಭಾರಿ ಸಂಖ್ಯೆಯ ಕಟ್ಟಾ ಅಭಿಮಾನಿಗಳು ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಂದ ಕಳೆದ ರಾತ್ರಿಯೇ ಬಳ್ಳಾರಿಯ ಸೆಂಟ್ರಲ್ ಜೈಲಿನ ಸಮೀಪ ಕಾದು ಕುಳಿತಿದ್ದಾರೆ.
ಇಂದು ಬುಧವಾರ ಸರಿಯಾಗಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ದರ್ಶನ್ ಅವರನ್ನು ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಕರೆತರಲಾಗುತ್ತಿದೆ. ಇದರಿಂದ ದರ್ಶನ್ ಅವರನ್ನು ನೋಡಲೇಬೇಕೆಂದು ಸಾಕಷ್ಟು ಅಭಿಮಾನಿಗಳು ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಊರುಗಳಿಂದ ತಂಡೋಪ ತಂಡಗಳಾಗಿ ಬೈಕ್, ಕಾರು, ಬಸ್, ರೈಲುಗಳಲ್ಲಿ ಬಳ್ಳಾರಿಯ ಸೆಂಟ್ರಲ್ ಜೈಲಿನ ಬಳಿಯ ಗೇಟ್ ಬಳಿ ಬಕಪಕ್ಷಿಯಂತೆ ದರ್ಶನ್ ನೋಡಲು ಕಾದುಕುಳಿತಿದ್ದಾರೆ.
ಮಧ್ಯಾಹ್ನ 1 ಗಂಟೆ ವೇಳೆಗೆ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಪೊಲೀಸರು ಅನಿವಾರ್ಯವಾಗಿ ದರ್ಶನ್ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿದರೂ ಆಶ್ಚರ್ಯವಿಲ್ಲ ಎನ್ನುತ್ತವೆ ನಮ್ಮ ಬಳ್ಳಾರಿಯ ಸುದ್ದಿ ಮೂಲಗಳು.
ಸದ್ಯ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಅಟ್ಯಾಚ್ ಟಾಯ್ಲೆಟ್, ಬಾತ್ ರೂಂ ಇರುವ ಸೆಲ್ ನಲ್ಲಿ ದರ್ಶನ್ ಅವರನ್ನು ಇರಿಸಲು ಎಲ್ಲವೂ ಸಿದ್ಧವಾಗಿದೆ. ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಈ ಮುನ್ನ ಇದ್ದಕ್ಕಿದ್ದಂತಲೂ ಹೆಚ್ಚಿನ ಶುಚಿತ್ವ, ಸಾಮಾನ್ಯ ಖೈದಿಗಳಿಗೆ ನೀಡುವ ಊಟದ ವ್ಯವಸ್ಥೆಯನ್ನು ಬಹಳ ಜಾಗ್ರತೆಯಿಂದ ಮಾಡಿ ಶುಚಿತ್ವ ಕಾಪಾಡಿಕೊಳ್ಳಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಡಿಜಿಪಿ-ಐಜಿಪಿ ಸೂಚನೆ ಮೇರೆಗೆ ಬಳ್ಳಾರಿಯ ಸೆಂಟ್ರಲ್ ಜೈಲಾಧಿಕಾರಿಗಳು ಜಾಗ್ರತೆ ವಹಿಸಿ ಶುಚಿತ್ವಕ್ಕೆ ಮಹತ್ವ ನೀಡುತ್ತಿದ್ದಾರೆ.
comments
Log in to write reviews