ತಮ್ಮ ವಿರುದ್ಧ ಆಸ್ತಿ ಕಬಳಿಕೆ ಬಗ್ಗೆ ಸಿರಿಗೆರೆ ಮಠದ ಸ್ವಾಮೀಜಿ ಸ್ಪಷ್ಟನೆ
2024-09-03 10:30:08
ಚಿತ್ರದುರ್ಗ: ಸಿರಿಗೆರೆ ಮಠದ ಶ್ರೀಗಳ ವಿರುದ್ಧ ಕೋಟ್ಯಂತರ ಆಸ್ತಿ ಕಬಳಿಕೆ ಆರೋಪ ಕೇಳಿಬಂದಿದೆ. ಸ್ವಾಮೀಜಿ ವಿರುದ್ಧ ಈಗಾಗಲೇ ಹೋರಾಟ ತೀವ್ರಗೊಂಡಿದ್ದು, ಸಮಾಜದ ಮತ್ತು ರಾಜಕೀಯ ನಾಯಕರು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧದ ಭಕ್ತರಿಂದ ಕರಪತ್ರ ಬಿಡುಗಡೆ ಮಾಡಲಾಗಿದೆ.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಸಾಧು ಫಫಪವೀರಶೈವ ಸಮಾಜದ ಜಾಗೃತಿಗಾಗಿ ಒಂದುಗೂಡೋಣ ಪಎಂಬ ಹೆಸರಿನಲ್ಲಿ ಕರಪತ್ರಗಳನ್ನು ಬಿಡುಗಡೆ ಮಾಡಲಾಗಿದೆ. 6 ಪುಟಗಳ ಕರಪತ್ರದಲ್ಲಿ ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸರ್ವಾಧಿಕಾರಿ ಧೋರಣೆಯ ನಲಲಫ
ಮಠದ ಟ್ರಸ್ಟ್ ಡೀಡ್ ಪ್ರಕರಣದ ವಿಚಾರ ಕರಪತ್ರದಲ್ಲಿ ಮುದ್ರಿಸಲಾಗಿದೆ. ಬೆಂಗಳೂರು ತರಳುಬಾಳು ಧಾರ್ಮಿಕ ಕೇಂದ್ರದ ಕಾರ್ಯದರ್ಶಿ ಡಾ. ಸಿದ್ದಯ್ಯ ಅವರನ್ನ ಅಮಾನವೀಯವಾಗಿ ಸ್ವಾಮೀಜಿ ಕಿತ್ತಾಕ್ಕಿದ್ದು, ಇದೇ ವಿಚಾರ ಸ್ವಾಮೀಜಿ ಮಠದ ಟ್ರಸ್ಟ್ ತಮ್ಮ ಹೆಸರಿನಲ್ಲಿ ಮಾಡಿಕೊಂಡ ವಿಚಾರ ಬಯಲಾಗಿದೆ. ಸ್ವಾಮೀಜಿ ಪೀಠ ತ್ಯಾಗ ಮಾಡುವಂತೆ ಕರಪತ್ರ ಸಂಪೂರ್ಣ ಮಾಹಿತಿ ನೀಡಿ ಹಳ್ಳಿ ಹಳ್ಳಿಗಳಿಗೆ ಭಕ್ತರು ಹಂಚುತ್ತಿದ್ದಾರೆ.
ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ ಹೇಳಿದ್ದಿಷ್ಟು:
ಚಿತ್ರದುರ್ಗ ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠದಲ್ಲಿ 2 ಸಾವಿರ ಕೋಟಿ ರೂ. ಆಸ್ತಿ ಕಬಳಿಕೆ ಆರೋಪ ವಿಚಾರವಾಗಿ ಸ್ಪಷ್ಟನೆ ನೀಡಿದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ, ನಾವು ಕೆಲ ಆಸ್ತಿಗಳನ್ನು ಖರೀದಿಸಿದ್ದೇವೆ. ನಮ್ಮ ಹೆಸರಿಗೆ, ಮಠದ ಹೆಸರಿಗೆ, ಶಿಷ್ಯರ ಹೆಸರಿಗೆ ಮಾಡಿಸಿದ್ದೇವೆ. ಮಠಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿ ಮಠಕ್ಕೆ ಸೇರಿದ್ದು. ಮಠದ ಕಾರ್ಯದರ್ಶಿ ಆಗಿದ್ದ ಸಿದ್ದಯ್ಯ ಹೆಸರಿಗೂ ಆಸ್ತಿ ಮಾಡಿಸಿದ್ದೆವು. ಆಸ್ತಿ ತನಗೆ ಸೇರಿದ್ದು ಎಂದು ಮಾಜಿ ಕಾರ್ಯದರ್ಶಿ ಸಿದ್ದಯ್ಯ ಕೋರ್ಟ್ ಗೆ ಹೋಗಿದ್ದರು. ಕೋರ್ಟ್ನಲ್ಲಿ ಸಿದ್ದಯ್ಯನ ಅರ್ಜಿ ವಜಾ ಆಯಿತು. ಮಠದ ಆಸ್ತಿ ಕಬಳಿಸಲು ಯತ್ನಿಸಿದ್ದ ಸಿದ್ದಯ್ಯ ವಿರುದ್ಧ ಹೋರಾಡಿ, ಇದೀಗ ನಮ್ಮ ವಿರುದ್ಧ ಅಲ್ಲ ಎಂದಿದ್ದಾರೆ.
ದಾವಣಗೆರೆ ರೆಸಾರ್ಟ್ನಲ್ಲಿ ಸಭೆ ಮಾಡಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬಾಯಿ ಮುಚ್ಚಿಕೊಂಡು ತೆಪ್ಪಗಿದ್ದಾಗಲೇ ಈ ವಿಚಾರಕ್ಕೆ ಕೊನೆ. ಸಭೆ ಮಾಡಿದವರು ಗ್ರಾಮಗಳಿಗೆ ಹೋಗುತ್ತೇವೆಂದು ಹೇಳಿದ್ದರು. ಗ್ರಾಮಗಳಿಗೆ ಹೋದರೆ ಚಕ್ರವ್ಯೂಹದಲ್ಲಿ ಸಿಲುಕುತ್ತಾರೆ. ವಿವಿಧ ಗ್ರಾಮಗಳ ಜನರು ಇಂದು ನಮ್ಮನ್ನು ಬೆಂಬಲಿಸಿ ಪತ್ರ ನೀಡಿದ್ದೀರಿ. ಎಲ್ಲಾ ಪತ್ರಗಳು ಬಹುತೇಕ ಒಂದೇ ಮಾದರಿಯಲ್ಲಿವೆ. ನಾವೇ ಡ್ರಾಫ್ಟ್ ಮಾಡಿಸಿ ಪತ್ರ ಸ್ವೀಕರಿಸಿದ್ದೇವೆಂಬ ಆರೋಪ ಬರಬಹುದು ಎಂದು ಹೇಳಿದ್ದಾರೆ.
ನಮ್ಮ ಜನಕ್ಕೆ ಲೇಖನಿಗಿಂತ ಕಣಿಗೆ, ಕುಡುಗೋಲು ಗೊತ್ತು. ನಮ್ಮ ಗುರುಗಳು ಅರವತ್ತು ವರ್ಷಕ್ಕೆ ನಿವೃತ್ತಿ ಘೋಷಿಸಿ ತ್ಯಾಗ ಪತ್ರ ನೀಡಿದ್ದರು. ಮಠದ ಬೈಲಾದಲ್ಲಿ ನಿವೃತ್ತಿ ಬಗ್ಗೆ ನಿಯಮ ಇಲ್ಲ. 2012ರಲ್ಲಿ ನಾವು ಸಹ ನಿವೃತ್ತಿ ಬಯಸಿದ್ದೆವು, ತ್ಯಾಗಪತ್ರ ನೀಡಿಲ್ಲ. ಈ ಹಿಂದೆ ಗುರುಶಾಂತಶ್ರೀ 48 ವರ್ಷದವರಿದ್ದಾಗ ಕೊಲೆಗೀಡಾಗಿದ್ದರು. ನಮಗೂ ಅಂಥದ್ದೇ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ನಮ್ಮ ಗುರುಗಳು ಮಠದ ವಿರುದ್ಧವಿದ್ದವರ ಕೈಕಾಲು ಮುರಿಸುತ್ತಿದ್ದರು. ಈಗ ಅಂಥ ಪರಿಸ್ಥಿತಿ ಇಲ್ಲ, ಕಾನೂನಾತ್ಮಕವಾಗಿ ಹೋಗಬೇಕು ಎಂದಿದ್ದಾರೆ ಸಿರಿಗೆರೆ ಮಠದ ಶ್ರೀಗಳು.
comments
Log in to write reviews