ಸಿಎಂ ಸಿದ್ದರಾಮಯ್ಯ ಪರಮಾಪ್ತನ ಮನೆ ಮೇಲೂ ಇಡಿ ದಾಳಿ

ಸಿಎಂ ಸಿದ್ದರಾಮಯ್ಯ ಪರಮಾಪ್ತನ ಮನೆ ಮೇಲೂ ಇಡಿ ದಾಳಿ

2024-10-28 07:20:40

ಮೈಸೂರು/ಬೆಂಗಳೂರು, ಅ. 28: ಮುಡಾ ಹಗರಣ ಪ್ರಕರಣಕ್ಕೆ ಇಡಿ ಅಧಿಕಾರಿಗಳು ಮುಡಾ ಮಾಜಿ ಆಯುಕ್ತರ ಮನೆಗಳ ಮೇಲೆ ದಾಳಿ ನಡೆಸಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯನವರ ಪರಮಾಪ್ತ ರಾಕೇಶ್ ಪಾಪಣ್ಣ ಮನೆ ಮೇಲೂ ಸಹ ದಾಳಿಯಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ರಾಕೇಶ್ ಪಾಪಣ್ಣ ಅವರ ಮೈಸೂರಿನ ಹಿನ್‌ಕಲ್ ಗ್ರಾಮದಲ್ಲಿನ ಮನೆ ಮೇಲೆ ಇಡಿ ದಾಳಿ ಮಾಡಿದೆ. 50-50 ನಿಯಮದಲ್ಲಿ 20ಕ್ಕೂ ಹೆಚ್ಚು ಮುಡಾ ಸೈಟ್​ ಪಡೆದಿದ್ದ ಆರೋಪ ರಾಕೇಶ್ ಪಾಪಣ್ಣ ಅವರ ವಿರುದ್ಧ ಕೇಳಿಬಂದಿದೆ. ಹೀಗಾಗಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ರಾಕೇಶ್ ಪಾಪಣ್ಣ ಇರಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಮುಡಾ 50-50 ಹಗರಣದಲ್ಲಿ ಕೇಳಿ ಬಂದಿದ್ದ ರಾಕೇಶ್ ಪಾಪಣ್ಣ ಹೆಸರು ಕೇಳಿಬಂದಿತ್ತು. 50-50 ನಿಯಮದಲ್ಲಿ 20ಕ್ಕೂ ಹೆಚ್ಚು ನಿವೇಶನಗಳನ್ನು ಪಡೆದಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಅಲ್ಲದೇ ವಿಜಯನಗರ 2ನೇ ಹಂತದಲ್ಲಿ ಸಿದ್ದರಾಮಯ್ಯ ಪಡೆದ ನಿವೇಶದ ವಿಚಾರದಲ್ಲೂ ಪಾಪಣ್ಣ ಕುಟುಂಬದ ಹೆಸರು ಕೇಳಿ ಬಂದಿತ್ತು. ಸಿದ್ದರಾಮಯ್ಯ ಅವರು ಪಾಪಣ್ಣ ಕುಟುಂಬದಿಂದ 10 ಗುಂಟೆ ಜಾಗ ಪಡೆದು ಮನೆ ಕಟ್ಟಿದ್ದರು. ಈ ವಿಚಾರದಲ್ಲಿ ಅಕ್ರಮ ಆರೋಪ ಕೇಳಿ ಬಂದಿತ್ತು. ನಂತರ ಸಿದ್ದರಾಮಯ್ಯನವರು ಆ ಮನೆ ಮಾರಾಟ ಮಾಡಿದ್ದು, ಸದ್ಯ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದೆ.

ಈ ಎಲ್ಲಾ ಆರೋಪಗಳು ಕೇಳಿಬಂದಿದ್ದರಿಂದ ಇಂದು (ಅಕ್ಟೋಬರ್ 28) ಇಡಿ ಅಧಿಕಾರಿಗಳು ರಾಕೇಶ್ ಪಾಪಣ್ಣ ಅವರ ಮನೆ ಮೇಲೆ ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಬಗ್ಗೆ ರಾಕೇಶ್ ಪಾಪಣ್ಣ ಅವರ ಬಳಿಯೂ ಮಾಹಿತಿ ಕಲೆಹಾಕುತ್ತಿದ್ದಾರೆ.

ಮುಡಾ ಮಾಜಿ ಆಯುಕ್ತರುಗಳ ಮನೆ ಮೇಲೆ ದಾಳಿ
ರಾಕೇಶ್ ಪಾಪಣ್ಣ ಅವರ ಮನೆ ಮೇಲೆ ಇಡಿ ಅಧಿಕಾರಿಗಗಳು ದಾಳಿ ಮಾಡುವ ಮುನ್ನ ಮುಡಾದ ಮಾಜಿ ಆಯುಕ್ತರುಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.  ಬೆಂಗಳೂರಿನ ಜೆ.ಪಿ‌.ನಗರದಲ್ಲಿರುವ ಬಿಲ್ಡರ್​ ಎನ್​. ಮಂಜುನಾಥ್​ ಮನೆ ಮೇಲೆ ದಾಳಿ ಮಾಡಿದೆ. ಬಳಿಕ ಮುಡಾ ಮಾಜಿ ಆಯುಕ್ತ ನಟೇಶ್ ಮನೆ ಮೇಲೆ ಸಹ ಇಡಿ ದಾಳಿಯಾಗಿದ್ದು, ಇದೀಗ ಮತ್ತೋರ್ವ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಮನೆ ಮೇಲೂ ದಾಳಿಯಾಗಿದೆ.

ಜಿ.ಟಿ.ದಿನೇಶ್ ಕುಮಾರ್ ಅವರ ಹೆಬ್ಬಾಳದ ಬಾಣಸವಾಡಿ ರಸ್ತೆಯಲ್ಲಿರುವ ದೀಪಿಕಾ ರಾಯಲ್ ಅಪಾರ್ಟ್​ಮೆಂಟ್​ ಮೇಲೆ ದಾಳಿ ಮಾಡಲಾಗಿದೆ. ಬೆಳಗ್ಗೆ ದಾಳಿ ಮಾಡಿದಾಗ ದಿನೇಶ್ ಕುಮಾರ್ ಎಸ್ಕೇಪ್ ಆಗಿದ್ದರು. ಬೆಳಗ್ಗೆ ವಾಕಿಂಗ್ ಹೋಗಿದ್ದಾಗ ದಾಳಿ ಮಾಡಿದ್ದರು. ಆದ್ರೆ, ಇಡಿ ದಾಳಿಯ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಹಾಗೇ ದಿನೇಶ್​​ ನಾಪತ್ತೆಯಾಗಿದ್ದರು.

author single

L Ramprasad

Managing Director

comments

No Reviews