ದರ್ಶನ್ ಆರೋಗ್ಯವಾಗಿದ್ದಾರೆ, ವದಂತಿಗಳಿಗೆ ಕಿವಿಗೊಡಬೇಡಿ: ಬಳ್ಳಾರಿ ಎಸ್ಪಿ ಶೋಭಾರಾಣಿ

ದರ್ಶನ್ ಆರೋಗ್ಯವಾಗಿದ್ದಾರೆ, ವದಂತಿಗಳಿಗೆ ಕಿವಿಗೊಡಬೇಡಿ: ಬಳ್ಳಾರಿ ಎಸ್ಪಿ ಶೋಭಾರಾಣಿ

2024-08-29 11:36:49

ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಗೃಹದಲ್ಲಿ ನಟ ದರ್ಶನ್ ಸೆರೆ ಹಿನ್ನೆಲೆ ಜೈಲಿಗೆ ಎಸ್ಪಿ ಶೋಭಾ ರಾಣಿ ಭೇಟಿ ನೀಡಿದರು. 
ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಶೋಭಾ ರಾಣಿ ಹೀಗೆಂದರು: 'ದರ್ಶನ್ ಅನಾರೋಗ್ಯ ವದಂತಿ ಸುಳ್ಳು, ಯಾವುದೇ ಸಮಸ್ಯೆ ಇಲ್ಲ. ವದಂತಿಗಳಿಗೆ ಕಿವಿಕೊಡಬೇಡಿ ಎಂದಿದ್ದಾರೆ.

ದರ್ಶನ್ ಜೈಲಿಗೆ ಬಂದಾಗ ಕಡಗ, ದಾರ, ಚೇನ್ ಗಳನ್ನ ಬಿಚ್ಚಿಸಲಾಗಿದೆ. ದರ್ಶನ್ ಹಾಕಿಕೊಂಡಿದ್ದು, ಕೂಲಿಂಗ್ ಗ್ಲಾಸ್ ಅಲ್ಲ, ಪಾಯಿಂಟೆಡ್ ಗ್ಲಾಸ್ ಅಂತಾ ಹೇಳಲಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಬ್ರಾಂಡೆಡ್ ಟೀ ಶರ್ಟ್ ಧರಿಸಿ ಜೈಲಿಗೆ ಹಂಟ್! ನಿಯಮ ಏನು ಹೇಳುತ್ತೆ? ಕೈಗೆ ಬೇಡಿ ಹಾಕಿದ್ರಾ? ಎನ್ನವ ವಿಚಾರಕ್ಕೆ ಸ್ಪಂದಿಸಿದ ಎಸ್ಪಿ, ದರ್ಶನ್ ಅವರಿಗೆ ಬೇಡಿ ಹಾಕಿಲ್ಲ. ಕೈಗೆ ನೋವಾಗಿರೋದ್ರಿಂದ ಬಟ್ಟೆ ಕಟ್ಟಿಕೊಂಡಿದ್ದರು. ದರ್ಶನ್ ಗೆ ಊಟ ನೀಡಲಾಗಿದೆ. ಜೈಲಿನ ನಿಯಮಗಳನ್ನ ಪಾಲನೆ ಮಾಡುತ್ತಿದ್ದಾರೆ. ಕುಟುಂಬಸ್ಥರಿಗೆ ಭೇಟಿಗೆ ಅವಕಾಶ ಇರುತ್ತದೆ. ಸದ್ಯ ಯಾರು ಅವರ ಭೇಟಿಗೆ ಬರುತ್ತಾರೆಂಬ ಮಾಹಿತಿ ಇಲ್ಲ ಎಂದರು.

ಬ್ಯಾಂಡ್ ಬಟ್ಟಿ ಧರಿಸಿದ ವಿಚಾರಕ್ಕೆ ಪ್ರತಿಕ್ರಯಿಸಿ, ವಿಚಾರಣಾಧೀನ ಕೈದಿ ಯಾವುದೇ ರೀತಿಯ ಬಟ್ಟೆ ಹಾಕಿಕೊಳ್ಳಬಹುದು. ಆದರೆ ಶಿಕ್ಷೆಯಾಗಿರೋ ಕೈದಿಗೆ ಅ ರೀತಿಯಲ್ಲಿ ಅವಕಾಶ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೂಲಿಂಗ್ ಗ್ಲಾಸ್‌ ಧರಿಸಿ ಮತ್ತೆ ನಿಯಮ ಮುರಿದ್ರಾ ದರ್ಶನ್
ಪೊಲೀಸರು ಕೊಲೆ ಆರೋಪಿ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಕರೆದೊಯ್ಯುವ ವೇಳೆ ಅವರಿಗೆ ಕೂಲಿಂಗ್‌ ಗ್ಲಾಸ್‌ ಧರಿಸಲು ಅವಕಾಶ ಕೊಟ್ಟು ಕರ್ತವ್ಯ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಉತ್ತರ ವಲಯ ಡಿಐಜಿ ಟಿ.ಪಿ.ಶೇಷ ಅವರು ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ. ಆರೋಪಿ ದರ್ಶನ್‌ಗೆ ಕೂಲಿಂಗ್‌ ಗ್ಲಾಸ್‌ ಧರಿಸಲು ಅವಕಾಶ ನೀಡಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಡಿಐಜಿ ಶೇಷ ಅವರು ಡಿಜಿಪಿಗೆ ವರದಿ ನೀಡಿದ್ದಾರೆ.

ದರ್ಶನ್‌ ರನ್ನು ಬಳ್ಳಾರಿ ಜೈಲಿಗೆ ಕರೆತಂದಾಗ ಕೂಲಿಂಗ್‌ ಗ್ಲಾಸ್‌ ಧರಿಸಿದ್ದರು. ಇದು ಜೈಲಿನ ನಿಯಮಗಳಿಗೆ ವಿರುದ್ಧವಾದುದು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದ್ದು, ಇದರಿಂದ ಇಲಾಖೆಯ ಘನತೆಗೆ ಧಕ್ಕೆ ಬಂದಿದೆ. ದರ್ಶನ್‌ ಸೆಲೆಬ್ರಿಟಿ ಆಗಿದ್ದರಿಂದ ಈ ಪ್ರಕರಣದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿತ್ತು. ಈಗಾಗಲೇ ಆರೋಪಿ ಕುರಿತ ಸಣ್ಣ ತಪ್ಪುಗಳು ಸಹ ದೊಡ್ಡ ಸುದ್ದಿಗಳಾಗುತ್ತಿವೆ. ಹೀಗಾಗಿ, ಯಾವುದೇ ಸಣ್ಣ ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕಾಗಿತ್ತು. ಆದರೆ, ಬೆಂಗಳೂರಿನಿಂದ ಆರೋಪಿಯನ್ನು ಕರೆತಂದ ಬೆಂಗಾವಲು ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿತ್ತು.
 

author single

L Ramprasad

Managing Director

comments

No Reviews