ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ: ವಿಲ್ಸನ್ ಗಾರ್ಡನ್ ನಾಗ, ವೇಲುಗೆ 3 ದಿನ ಪೊಲೀಸ್ ಕಸ್ಟಡಿ
2024-09-19 09:52:55
ಬೆಂಗಳೂರು, ಸೆ.19: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್ ಗಾರ್ಡನ್ ನಾಗ ಮತ್ತು ವೇಲುಗೆ 3 ದಿನ ಪೊಲೀಸ್ ಕಸ್ಟಡಿ ನೀಡಿ ಬೆಂಗಳೂರಿನ 9ನೇ ಅಪರ ಮುಖ್ಯ ನ್ಯಾಯಾಧೀಶರ ಆದೇಶ ಹೊರಡಿಸಲಾಗಿದೆ.
ಇಂದಿನಿಂದ ಸೆ.21ರ ಸಂಜೆ 4.30ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದ್ದು, ಅಷ್ಟರೊಳಗೆ ಕೋರ್ಟ್ಗೆ ಹಾಜರುಪಡಿಸಲು ಸೂಚಿಸಲಾಗಿದೆ.
ನಾಗ ಮತ್ತು ವೇಲು ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಪೊಲೀಸರು, ಜೈಲಿನ ಒಳಗೆ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಮೊಬೈಲ್ಗಳು ಪತ್ತೆಯಾಗಿದೆ. ಇನ್ನೂ ಕೆಲ ಮೊಬೈಲ್ ಪತ್ತೆಮಾಡಬೇಕಿದೆ. ಹೀಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಜೈಲಿನ ಒಳಗೆ ನಡೆದಿರುವ ವಿಚಾರ ಹಾಗಾಗಿ ಜೈಲಿನ ಒಳಗೆ ವಿಚಾರಣೆ ನಡೆಯಲಿ. ಇವರನ್ನು ಹೊರ ಕರೆತಂದು ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ ಎಂದು ನಾಗನ ಪರ ವಕೀಲರು ಮನವಿ ಮಾಡಿದ್ದಾರೆ. ಈಗಾಗಲೇ ಬೆಳಗಾವಿ ಜೈಲಿಗೆ ವರ್ಗಾವಣೆ ಆದೇಶ ಆಗಿದೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸೆಷನ್ಸ್ ಕೋರ್ಟ್ ಆದೇಶ ಪ್ರತಿಯನ್ನು ನ್ಯಾಯಾಧೀಶರು ಕೇಳಿದ್ದಾರೆ. ಬಳಿಕ ಕೆಲಕಾಲ ವಿಚಾರಣೆಯನ್ನು 9ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೂಡಿದರು.
comments
Log in to write reviews