ಸಿಎಂ ಸಿದ್ದರಾಮಯ್ಯಗೆ ಬಂಡೆಯಿಂದಲೇ ಡೇಂಜರ್: ಕೇಂದ್ರ ಸಚಿವ ಎಚ್.ಡಿ.ಕೆ
2024-08-18 11:06:15
ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಬಂಡೆಯಿಂದಲೇ ಡೇಂಜರ್ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೆಸರೇಳದೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಮೊನ್ನೆ ಕೇರಳದಲ್ಲಿ ಮಳೆ ಬಂದು ಭೂಕುಸಿತ ಆಗಿದೆಯಲ್ಲಾ, ಆವಾಗ ಬಂಡೆಗಳಿಂದ ಡೇಂಜರ್ ಆಗಿದ್ದು ಎಂದು ಟಾಂಗ್ ಕೊಟ್ಟಿದ್ದಾರೆ.
ನಿಮ್ಮ ಹಾಗೆ ನಮ್ಮ ಕಾರ್ಯಕರ್ತರು ಬೀದಿಯಲ್ಲಿ ಬೆಂಕಿ ಹಾಕಿ ಎನ್ನಲಿಲ್ಲ. ಜಂತಕಲ್ ಮೈನಿಂಗ್ ಪ್ರಕರಣದ ಬಗ್ಗೆ ಹೈಕೋರ್ಟ್ ಆದೇಶ ನೀಡಿದೆ. ಸಾಯಿ ವೆಂಕಟೇಶ್ವರ ಹಗರಣದ ಬಗ್ಗೆಯೂ ತನಿಖೆ ಮಾಡಿ ಅಂದ್ರು. ಬೇಕಾದರೆ ಸುಪ್ರೀಂಕೋರ್ಟ್ಗೆ ಹೋಗಬಹುದು, ಯಾರೂ ಬೇಡ ಅಂದ್ರು. ನನ್ನನ್ನು ಹೆದರಿಸಲು ಮಾತನಾಡುತ್ತಿದ್ದೀರಿ, ಯಾಕೆ ಈ ಡ್ರಾಮಾಗಳು ಎಂದು ಕಿಡಿಕಾರಿದ್ದಾರೆ.
ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಕ್ಕೆ ಪ್ರತಿಭಟನೆ ನಡೆಸುತ್ತಿದ್ದೀರಿ. ನಿನ್ನೆಯಿಂದ ಸಂವಿಧಾನ ಬಿಕ್ಕಟ್ಟು ಎಂದು ಹೇಳಿಕೊಂಡು ಪ್ರತಿಭಟನೆ ಮಾಡಿದ್ದೀರಿ. ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸಲು ಅಂತ ಪ್ರತಿಭಟನೆ ಮಾಡುತ್ತಿದ್ದೀರಿ. ಬಿಜೆಪಿನವರು ಸರ್ವನಾಶ ಮಾಡಲು ಹೊರಟಿದ್ದಾರೆ ಅಂತ ಹೇಳಿದ್ದಾರೆ. ಪಾರ್ಲಿಮೆಂಟ್ಗೆ ಸಂವಿಧಾನ ಪುಸ್ತಕ ಹಿಡಿದು ಬಂದರಲ್ಲಪ್ಪ. ಪ್ರಮಾಣ ವಚನ ಸ್ವೀಕರಿಸಲು ಇದೇನಾ ಸಂವಿಧಾನ ರಕ್ಷಣೆ? ನಿನ್ನೆಯಿಂದ ಪ್ರಾರಂಭ ಮಾಡಿದ್ದೀರಲ್ಲಾ. ಸಿದ್ದರಾಮಯ್ಯನವರೇ? ಇದೇ ನನಗೂ ನಿಮಗೂ ಇರೋ ವ್ಯತ್ಯಾಸ? ಎಂದು ಕುಮಾರಸ್ವಾಮಿ ಚುಚ್ಚಿ ಮಾತನಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಂತ್ರಿಮಂಡಲದ ಎಲ್ಲಾ ಸದಸ್ಯರಿಗೂ ಹೇಳುತ್ತೀನಿ. ನಿನ್ನೆಯಿಂದ ಎಲ್ಲರಿಗೂ ಕುಮಾರಸ್ವಾಮಿ ಅಂತ ಧ್ಯಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಎಲ್ಲಾ ಮಂತ್ರಿಗಳು ನನ್ನ ಧ್ಯಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಪಾದಯಾತ್ರೆಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಅಂತಾ ಕೇಳಲ್ಲ. ಅವರು ರಾಜೀನಾಮೆ ಕೊಡುವುದೂ ಇಲ್ಲ. ಅದು ನನಗೆ ಗೊತ್ತಿದೆ. ಕಾನೂನು ಅಂತಾ ಒಂದಿದೆ. ಯಾವ ಹಂತದಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗುತ್ತೆ. ನಮ್ಮ ಪಾದಯಾತ್ರೆಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. ಜನತೆಗೆ ಒಂದು ರಾಜಕೀಯ ಸಂದೇಶ ಕೊಡಬೇಕಿತ್ತು ಕೊಟ್ಟಿದ್ದೇವೆ. ನಮ್ಮ ಪಾದಯಾತ್ರೆಯಿಂದ ಇದೆಲ್ಲಾ ಆಗಿದೆ ಅಂತ ನಾನು ಹೇಳಲ್ಲ ಎಂದು ಕೇಂದ್ರ ಸಚಿವರಾದ ಎಚ್.ಡಿ.ಕೆ ಹೇಳಿದ್ದಾರೆ.
comments
Log in to write reviews