ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರ ಭ್ರಷ್ಟ ಸಾಮ್ರಾಜ್ಯ!

ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರ ಭ್ರಷ್ಟ ಸಾಮ್ರಾಜ್ಯ!

2024-09-17 08:13:45

ವರದಿ: ನಾರ.ವೆಂಕಟೇಶ್ ಮೂರ್ತಿ, ಗುಡಿಬಂಡೆ.

ಈ ವಿಶ್ವ ವಿದ್ಯಾನಿಲಯದಲ್ಲಿ ಇವರು ಸಲ್ಲಿಸಿದ್ದು ಬರೋಬ್ಬರಿ 26 ವರ್ಷಗಳ ಸೇವೆ. ಅಂದರೆ almost dominate person ಅಂತಲೇ ಪರಿಗಣಿಸಬಹುದು. ಅಂದಹಾಗೆ ಇವರ ಹೆಸರು ವಿ. ವಿ. ಸುರೇಶ್ ಬಾಬು ಪ್ರಸ್ತುತ ಬೆಂ ವಿ. ವಿ ರಸಾಯನಶಾಸ್ತ್ರ  ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಪುನಃ ಇಲ್ಲಿಗೇ ವಕ್ಕರಿಸಿದ್ದಾರೆ. ಇಲ್ಲಿ ನಾವು ಇವರ ಅಷ್ಟೂ ವರ್ಷಗಳ ಸೇವೆಯ ಬಗ್ಗೆ ಹೇಳಲು ಹೊರಟಿಲ್ಲ ಬದಲಾಗಿ, ಅಷ್ಟೂ ವರ್ಷಗಳಲ್ಲಿ ಇವರು ಚಲಾಯಿಸಿರುವ ಅಧಿಕಾರ, ಮಾಡಿರುವ ಕೋಟ್ಯಾಂತರ ರೂ. ಭ್ರಷ್ಟಾಚಾರಗಳ ಬಗ್ಗೆ ಬಿಚ್ಚಿಡಲು ಮಾಡುತ್ತಿರುವ ಮೊದಲ ಭಾಗದ ಸುದ್ದಿ. ಓದಿಕೊಳ್ಳಿ.


    ಮೊದಲಿಗೆ ಇವರು UVCE ವಿಭಾಗದ ರಾಸಾಯನಶಾಸ್ತ್ರ ವಿಷಯದ ಬೋಧನೆಗೆಂದು ಉಪನ್ಯಾಸಕರಾಗಿ ನೇಮಕವಾಗುತ್ತಾರೆ. ನಂತರ ಸಿಂಡಿಕೇಟ್ ಸದಸ್ಯರ ಮೂಲಕ MSc ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಅನುಮತಿ ಪಡೆದು ಸ್ನಾತಕೋತ್ತರ ವಿಭಾಗದ ಉಪನ್ಯಾಸಕನೆಂದು ಬಿಂಬಿಸಿಕೊಂಡು ಅವರಷ್ಟಕ್ಕೆ ಅವರೇ ಲೆಟರ್ ಹೆಡ್ ಬಳಸುವ ಮೂಲಕ ತಮ್ಮ ಅಸಲಿ ತಾಕತ್ತು ತೋರಿಸಲು ಶುರು ಮಾಡುತ್ತಾರೆ.
    ಬರ ಬರುತ್ತಾ ಈತ ಪಠ್ಯ ಬೋಧನೆ ಸರಿಯಾಗಿ ಮಾಡದ ಕಾರಣ UVCE ಮತ್ತು ಸೆಂಟ್ರಲ್ ಕಾಲೇಜಿನ MSc ವಿದ್ಯಾರ್ಥಿಗಳು ಹಲವಾರು ಬಾರಿ  ಪ್ರತಿಭಟಿಸಿ ದೂರು ನೀಡಿದ್ದು, ಈ ಸಂಬಂಧ ದಿನಪತ್ರಿಕೆಗಳಲ್ಲಿ ವರದಿ ಕೂಡ ಆಗಿರುತ್ತದೆ. ಆದರೆ ಸದರಿ ವರದಿಗಳು ಮೂಲೆ ಸೇರಿದ್ದು ವಿ.ವಿ ಯ ಯಾವುದೇ ದಾಖಲೆಗಳಲ್ಲಿ ಈ ಬಗ್ಗೆ ನಮೂದಾಗದಂತೆ ತನ್ನ ಪ್ರಭಾವ ಬೀರಿ ಗೆದ್ದಿರುತ್ತಾರೆ. ಅಂತಹ ವಿಶ್ವವಿದ್ಯಾಲಯದಲ್ಲಿ ಇಂತಹ ವಿಷಯದಲ್ಲೇ ಗೆದ್ದ ಹುರುಪಿನಲ್ಲಿ UGC-CSIR/DST/DBT/VGST ಇತ್ಯಾದಿಗಳಿಂದ ರಿಸರ್ಚ್ ಪ್ರಾಜೆಕ್ಟ್ ಗೆಂದು ಧನಸಹಾಯ ಪಡೆದುಕೊಂಡು ಆ ಸಂಶೋಧನೆಗಳಿಗೆಂದು ಮಂಜೂರಾದ ಲಕ್ಷಾಂತರ ಹಣದಲ್ಲಿ ಯಾವುದೇ ಪರಿಕರ ಅಥವಾ ಉಪಕರಣಗಳನ್ನು ಖರೀದಿಸದೆ ಕೇವಲ ಬೋಗಸ್ ಬಿಲ್ಲುಗಳನ್ನು ಮಾಡಿ ಕೋಟಿ ಕೋಟಿ  ಹಣವನ್ನು ಲಪಟಾಯಿಸಿ ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿರುತ್ತದೆ. ಹಾಗೆ  ಈತನ ಆಟಾಟೋಪಗಳು ಇಷ್ಟಕ್ಕೆ ನಿಲ್ಲದೆ ಸದರಿ ಹಣದ ಬಾಬ್ತು ಯಾವುದೇ ದಾಸ್ತಾನು ವಹಿ(stock book) ನಿರ್ವಹಿಸದೆ ಈತನ ನಿವೃತ್ತಿ ನಂತರವೂ ಕೂಡ ಅದನ್ನು ಸಂಬಂಧಪಟ್ಟವರಿಗೆ ಇದುವರೆಗೂ ಹಸ್ತಾಂತರಿಸಿರುವುದಿಲ್ಲ ಮತ್ತು ರಾಸಾಯನ ವಿಭಾಗದ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಪ್ರಯೋಗಾಲಯಕ್ಕೆ ಅವಶ್ಯವಿಲ್ಲದ ಸುಮಾರು 3 ಲಕ್ಷ ರೂಗಳಿಗೂ ಅಧಿಕ ವಸ್ತು ಖರೀದಿ ಮಾಡಿ ಹಣ ದುರ್ಬಳಕೆ ಮಾಡಿರುತ್ತಾರೆ. ಹಾಗಾಗಿ ಇವರ ಅಧಿಕಾರ ಅವಧಿಯಲ್ಲಿ ಇವರು ನಿರ್ವಹಿಸಿರುವ ಮತ್ತು ಖರ್ಚು ಮಾಡಿರುವ ಹಣವನ್ನು ಹಿಂದಿನವರಿಗೆ ಹೋಲಿಕೆ ಮಾಡಿದಲ್ಲಿ ಮೂರ್ನಾಲ್ಕು ಪಟ್ಟು ಹೆಚ್ಚೆಂದು ದೃಢಪಟ್ಟಿರುತ್ತದೆ.
     ಹೀಗೆ ಈತನ ಘನಂದಾರಿ ಕೆಲಸಗಳು ಇಷ್ಟೊಂದು ಘೋರವಾಗಿದ್ದರೂ ಕೂಡ ನಿವೃತ್ತಿ ಹೊಂದಿದ ನಂತರವೂ ತನಗೆ ಆತ್ಮೀಯರಾದವರನ್ನೇ ಸಮಿತಿಯಲ್ಲಿ ಸದಸ್ಯರಾಗುವಂತೆ ಪ್ರಭಾವ ಬೀರಿ ಆ ಮೂಲಕ UVCE ಆಡಳಿತಾತ್ಮಕ ಹುದ್ದೆ ಅಲಂಕರಿಸಿ ಹಿಂದಿನ ಇವರ ಯಾವುದೇ ಭ್ರಷ್ಟಾರೋಪಗಳು ವಿ.ವಿ ಯ ಯಾವುದೇ ದಾಖಲೆಗಳಲ್ಲಿ ನಮೂದಾಗದಂತೆ ಆ ಮೂಲಕ ತನ್ನ ಮೇಲಿರುವ ಯಾವುದೇ ಆರೋಪಗಳು ಸಾಬೀತಾಗದೆ ತನಗೆ ಅನುಕೂಲಕರವಾಗಿ ಸೃಷ್ಟಿಸಿಕೊಂಡಿರುತ್ತಾರೆ. ಮುಂದುವರೆದು ಇವರಿಗೆ ಕ್ಲೀನ್ ಚಿಟ್ ನೀಡಿ ಬೇಬಾಕಿ ಪ್ರಮಾಣ ಪತ್ರವನ್ನು ಒದಗಿಸಲು ಮಾನ್ಯ ಭ್ರಷ್ಟ ಕುಲ ಸಚಿವರು ತುದಿಗಾಲಲ್ಲಿ ನಿಂತಿರುವುದರಿಂದ  ಸದ್ಯ ಅವರ ನಿವೃತ್ತಿ ನಂತರದ ಆರ್ಥಿಕ  ಸವಲತ್ತುಗಳನ್ನೆಲ್ಲ ಪಡೆದುಕೊಂಡು ದೇಶ ಬಿಟ್ಟು ಹೋಗುವ ಆಲೋಚನೆಯಲ್ಲಿದ್ದಾರೆ ಎಂದು ತಿಳಿದುಬಂದಿರುತ್ತದೆ.
         ಪ್ರಿಯ ಓದುಗರೇ, ಈ ವಿಷಯಕ್ಕೆ ಸಂಬಂಧಪಟ್ಟು ಇದೊಂದು ಸಣ್ಣ ಸುದ್ದಿ ಅಷ್ಟೇ. ಆದರೆ ಸುಮಾರು ವರ್ಷಗಳಿಂದ  ಈ ವಿಶ್ವವಿದ್ಯಾನಿಲಯ ದಿಂದ ಎಂತೆಂತಹ  ಎಕ್ಕುಟ್ಟಿ ಹೋದವರಿಗೂ ಕೂಡ ಕಾಲೇಜು ತೆರೆಯಲು ಅನುಮೋದನೆ ನೀಡುವುದು, ಅರ್ಹತೆ ಇಲ್ಲದಿದ್ದರೂ ಪದವಿ ಪ್ರಮಾಣ ಒದಗಿಸುವುದು, ಭ್ರಷ್ಟಾತಿ ಭ್ರಷ್ಟಾಧಿಕಾರಿಗಳಿಗೆ ಮಣೆ ಹಾಕುವುದು ನಡೆಯುತ್ತಲೇ ಬರುತ್ತಿದೆ. ಸದ್ಯ ಈಗಿರುವ ಉಪಕುಲಪತಿಗಳ ಬಗ್ಗೆ ಹೇಳಬೇಕೆಂದರೆ ಮಹಾನುಭಾವರು ಅವರ ವಸತಿ ನಿಲಯಕ್ಕೇ ಕರೆಸಿಕೊಂಡು ಗಂಟು ಎಣಿಸಿಕೊಳ್ಳುತ್ತಾರೆ. ಇನ್ನು ಈ ಸುದ್ದಿಯ ಮುಖ್ಯಪಾತ್ರ ದಾರಿಯಾದ ವಿ.ವಿ ಸುರೇಶ್ ಬಾಬುರವರಿಗೆ ಒಂದು ಕಡೆ ಉಪಕುಲ ಸಚಿವರು ಆಪದ್ಬಾಂಧವನಂತೆ ನಿಂತಿದ್ದರೆ, ಇನ್ನೊಂದು ಕಡೆ  ವಿಭಾಗದ ಮುಖ್ಯಸ್ಥರಾದ Dr. Y ಶಿವರಾಜರಿಂದ ಅಭಯ ಹಸ್ತವಂತು ಇದ್ದೇ ಇದೆ. ಹಾಗಾಗಿಯೇ ಇವರ ನಿವೃತ್ತಿಯ ನಂತರ ನಿವೃತ್ತಿ ವೇತನ ಸೇರಿದಂತೆ ಇತರೆ ಸವಲತ್ತುಗಳನ್ನು ಒದಗಿಸಲು ಒಂದೇ ಕಾಲಿನಲ್ಲಿ ನಿಂತಿದ್ದಾರೆ. ಪ್ರಸ್ತುತ ಈ ಎಲ್ಲಾ ಅನಾಹುತ ಮತ್ತು ಅವ್ಯವಹಾರಗಳ ಕುರಿತು ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಹೋರಾಟ ಸಂಘದ ಮುಖ್ಯಸ್ಥರೊಬ್ಬರು ಸಾಕ್ಷಾಧಾರಗಳ ಸಮೇತ ಲೋಕಾಯುಕ್ತರಿಗೆ ದೂರಿದ್ದು, ಸದರಿ ದೂರು ಕೂಡ ಮೂಲೆ ಸೇರಿದ ಹಾಗಿದೆ. ಆದ ಕಾರಣ ಲೋಕಾಯುಕ್ತರು ಕೂಡ ಇವರ ರಕ್ಷಣೆಗೆ ಟೊoಕ ಕಟ್ಟಿ ನಿಂತ ಹಾಗಿದ್ದಾರೆಂದು ಭಾವಿಸಬಹುದಾಗಿದೆ. ಇವರಷ್ಟೇ ಅಲ್ಲದೆ ಇನ್ನಷ್ಟು ಕಾಣದ ಕೈಗಳು ಕಾಣುವ ಕಾಲುಗಳು ಇವರ ರಕ್ಷಣೆಗೆ ನಿಂತೇ ನಿಂತಿವೆ. ಅಲ್ಲಿ ಬೆಂಗಳೂರಿನ ಘನತೆವೇತ್ತ ವಿಶ್ವವಿದ್ಯಾಲಯ ತನ್ನ ರಕ್ಷಣೆಗೆ ಯಾರು ಎಂದು ಕಾದು ಕುಳಿತಿದೆ. so ನಿನ್ನಷ್ಟು ದೊಡ್ಡ ದೊಡ್ಡ ಮಾಹಿತಿಗಳನ್ನು ಪಡೆದು ಮುಂದಿನ ಬಾರಿ ದೊಡ್ಡ ಸುದ್ದಿಯನ್ನು ಮಾಡುತ್ತೇವೆ ಅಲ್ಲಿವರೆಗೂ ನಮಸ್ಕಾರ.

 

                                        ಡಾ.ಶಿವರಾಜ್ ವೈ

author single

L Ramprasad

Managing Director

comments

No Reviews