ಬಿಬಿಎಂಪಿ ಕಸದ ಟೆಂಡರ್ ಕೊಡಿಸಲು ಗುತ್ತಿಗೆದಾರನಿಂದ ಲಂಚದ ಬೇಡಿಕೆ: ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್!

ಬಿಬಿಎಂಪಿ ಕಸದ ಟೆಂಡರ್ ಕೊಡಿಸಲು ಗುತ್ತಿಗೆದಾರನಿಂದ ಲಂಚದ ಬೇಡಿಕೆ: ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್!

2024-09-14 01:04:48

ಬೆಂಗಳೂರು, ಸೆ.14: ಗುತ್ತಿಗೆ ನೀಡಲು 30 ಲಕ್ಷ ರೂಪಾಯಿ ಲಂಚ ಕೊಡಬೇಕೆಂದು ಬೇಡಿಕೆ ಇಟ್ಟ ಆರೋಪದ ಮೇಲೆ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಎಂ.ಮುನಿರತ್ನಂ ನಾಯ್ಡು ಸೇರಿ ನಾಲ್ವರ ವಿರುದ್ಧ ನಗರದ ವೈಯಾಲಿಕಾವಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಎಂಬುವರ ಜೊತೆ ಶಾಸಕ ಮು‌ನಿರತ್ನ ಮಾತನಾಡಿರುವ ಮೊಬೈಲ್ ಫೋನ್ ಆಡಿಯೋ ಸಂಭಾಷಣೆ  ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. 

ಹೀಗಿದೆ ಸಂಭಾಷಣೆ:
ಗುತ್ತಿಗೆದಾರ ಚೆಲುವರಾಜ್: ಅಣ್ಣಾ, ನಮಸ್ಕಾರ, ನನಗೆ ಗಾರ್ಬೇಜ್ ಟೆಂಡರ್(ಕಸ ವಿಲೇವಾರಿ ಗುತ್ತಿಗೆ) ನೀಡಿ, ನನಗೆ ಸದ್ಯ ನೀವು ಹೇಳಿದ್ದಿಷ್ಟು ಹಣ ಹೊಂಚಿಸಲು ಆಗಲಿಲ್ಲ, ಆದರೆ ನೀವು ಏನು ಹೇಳಿದ್ದಿರೊ ಎಷ್ಟು ಹೇಳಿದ್ದಿರೊ ಅಷ್ಟು ಬುಧವಾರ ನಮ್ಮ ಹುಡುಗನ ಮೂಲಕ ತಲುಪಿಸ್ತಿನಿ, ದಯವಿಟ್ಟು ಟೆಂಡರ್ ನನಗೇ ಕೊಡಿಸಿ ಅಣ್ಣಾ

ಶಾಸಕ ಮುನಿರತ್ನ: ಫಸ್ಟ್ ದುಡ್ಡು  ಸೆಟ್ಲ್ ಮಾಡು, 36 ಲಕ್ಷ ಕೊಟ್ಟು ಟೆಂಡರ್ ಸ್ಟ್ಯಾಂಪ್ ಪೇಪರ್ ತಗೊ, ಈಗಾಗಲೇ ಸುನಿಲ ಅಂತ ಕಂಟ್ರ್ಯಾಕ್ಟರ್ ನಿಗೆ ವಾರ್ಡಿನ ಗಾರ್ಬೇಜ್ ಟೆಂಡರ್ ಕೊಡೊಕೆ ಮಾತುಕತೆ ಆಗಿದೆ. ಬುಧವಾರ ಕೊಟ್ರೆ ನಿನಗೆ ಟೆಂಡರ್ ಸಿಗ್ತದೆ. 

ಗುತ್ತಿಗೆದಾರ ಚೆಲುವರಾಜ್: ಅಣ್ಣಾ, ಈಗ ನನ್ನ ಹತ್ತಿರ ಅಷ್ಟು ದುಡ್ಡು ಇಲ್ಲ, ದಯವಿಟ್ಟು ನನಗೇ ವಾರ್ಡಿನ ಗಾರ್ಬೇಜ್ ಟೆಂಡರ್ ಕೊಡಿಸಿ ಅಣ್ಣಾ 

ಶಾಸಕ ಮುನಿರತ್ನ: ಮೊದಲು ಬುಧವಾರ ದುಡ್ಡು ಸೆಟ್ಲ್ ಮಾಡು, ಆಮೇಲೆ ಟೆಂಡರ್ ಕೊಡಿಸೋಣ

ಹೀಗೆ ನಡೆದಿದ್ದ ಮೊಬೈಲ್ ಫೋನ್ ಆಡಿಯೋ ಸಂಭಾಷಣೆಯನ್ನು ಗುತ್ತಿಗೆದಾರ ಚೆಲುವರಾಜ್ ರೆಕಾರ್ಡ್ ಮಾಡಿಕೊಂಡು ನೇರವಾಗಿ ಇದನ್ನು ನಗರದ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಗೆ ಕೊಟ್ಟು ದೂರು ನೀಡಿದ್ದೆ. ಪೊಲೀಸರು ಈ ಮೊಬೈಲ್ ಸಂಭಾಷಣೆಯನ್ನು ಆಲಿಸಿ ಇದರ ಆಧಾರದ ಮೇಲೆ ಶಾಸಕ ಎಂ.ಮುನಿರತ್ನಂ ನಾಯ್ಡು ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಜೊತೆಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೂ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.

ಇದಾದ ನಂತರ ದೂರುದಾರನಾದ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಮಾಧ್ಯಮಗಳಿಗೆ ಹೇಳಿಕೆ ನೀಡಿ, 'ನನಗೆ ನಮ್ಮ ವಾರ್ಡಿನ ಗಾರ್ಬೇಜ್ ಟೆಂಡರ್ ಕೊಡಿಸಲು ಶಾಸಕ ಮುನಿರತ್ನ ಅವರು ನನಗೆ ಮೊದಲು 36 ಲಕ್ಷ ರೂಪಾಯಿ ಲಂಚ ಕೊಡಲು ಹೇಳಿದರು, ಆದರೆ ನಾನು ನನ್ನ ಬಳಿ ಅಷ್ಟೊಂದು ಇಲ್ಲಣ್ಣ, ಈಗ ಸದ್ಯ 1 ಲಕ್ಷ ರೂಪಾಯಿ ಕೊಡ್ತಿನಿ, ಉಳಿದ ದುಡ್ಡು ತಿಂಗಳ ತಿಂಗಳ ಕೊಡ್ತಿನಿ ಅಣ್ಣ, ದಯವಿಟ್ಟು ನನಗೇ ಗಾರ್ಬೇಜ್ ಟೆಂಡರ್ ಕೊಡಿಸಿ ಅಣ್ಣಾ ಎಂದು ಗೋಗರೆದೆ. ಅದಕ್ಕೆ ಎಂಎಲ್ಲೆ ಮುನಿರತ್ನ ಸಾಹೇಬರು ಇಲ್ಲ, ಬುಧವಾರ 30 ಲಕ್ಷ ರೂಪಾಯಿ ಕೊಟ್ರೆ ನಿ‌ನಗೆ ಟೆಂಡರ್ ಸ್ಟ್ಯಾಂಪ್ ಪೇಪರ್ ಸಿಗ್ತದೆ. ಆನಂತರ ಮರುದಿನ ಬೆಳಗ್ಗೆ 10 ಗಂಟೆ ಸುಮಾರಿಗೆ ಎಂಎಲ್ಲೆ ಮುನಿರತ್ನ ಅವರ ಆಪ್ತ ವಸಂತಕುಮಾರ್ ವಾರ್ಡ್ ನಲ್ಲಿ ನನಗೆ ಅನಿರೀಕ್ಷಿತವಾಗಿ ಸಿಕ್ಕಿದ. ಆಗ ವಸಂತ್ ಕುಮಾರ್ ನನಗೆ ಧಮ್ಕಿ ಹಾಕಿ, 'ಏನೋ ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗ್ಬೇಕಾ? ಮೊದಲು ನಮ್ಮ ಯಜಮಾನರು(ಶಾಸಕ ಮುನಿರತ್ನ) ಹೇಳಿದ ಹಾಗೆ ದುಡ್ಡು ಕೊಟ್ರೆ, ನಿನಗೆ ಗಾರ್ಬೇಜ್ ಟೆಂಡರ್ ಸಿಗ್ತದೆ, ಅದು ಬಿಟ್ಟು ನೀನು ಈಗಾಗಲೇ ಅದೇನೊ ಲೋಕಾಯುಕ್ತಕ್ಕೆ ಕಂಪ್ಲೇಂಟ್ ಕೊಡಲು ಹೋಗಿದೆಯಂತೆ, ನೆಟ್ಟಗೆ ಮರ್ಯಾದೆಯಿಂದ ಹೇಳ್ತಿನಿ, ನೀನು ಲೋಕಾಯುಕ್ತ, ಪೊಲೀಸು ಅಂತ ನಮ್ಮ ಯಜಮಾನರ ಮೇಲೆ ಕಂಪ್ಲೇಂಟ್ ಕೊಡಲು ಹೋದರೆ ಮಗನೆ, ನಿನ್ನ ಮುಲಾಜಿಲ್ಲದೆ ರೇಣುಕಾಸ್ವಾಮಿ ರೀತಿ ಮುಲಾಜಿಲ್ಲದೆ ಮರ್ಡರ್ ಮಾಡಿ ಮುಗಿಸ್ತಿವಿ, ಹುಷಾರ್.
ಗೊತ್ತಿದೆಯೇನೊ ನಿನಗೆ ರೇಣುಕಾಸ್ವಾಮಿ ಮರ್ಡರ್ ಯಾರು ಮಾಡಿದ್ದಾರೆ ಅಂತ. ನಮ್ಮ ಎಂಎಲ್ಲೆಎ ಮುನಿರತ್ನ ಸಾಹೇಬರ ತಂಗಿ ಮಗನೇ ಮಾಡಿರೋದು, ನಿನಗೂ ರೇಣುಕಾಸ್ವಾಮಿಗೆ ಆದ ಗತಿ ಬರಬೇಕಾ? ಮೊದಲು ದುಡ್ಡು ಕೊಟ್ಟು ಟೆಂಡರ್ ಇಸ್ಕೊಂಡು ಹೋಗೊ ಎಂದು ನನಗೆ ಬೆದರಿಕೆ ಹಾಕಿ ಹೋದ ಎಂದು ಗುತ್ತಿಗೆದಾರ ಚೆಲುವರಾಜ್ ಹೇಳಿಕೊಂಡಿದ್ದಾರೆ.

ಈ ಜೀವ ಬೆದರಿಕೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಎ1 ಶಾಸಕ ಮುನಿರತ್ನ ಆಗಿದ್ದಾರೆ. ಎ1 ಶಾಸಕ ಮುನಿರತ್ನ, ಎ2 ಆಪ್ತ ಸಹಾಯಕ ವಿಜಯ್ ಕುಮಾರ್, ಎ3 ಸೆಕ್ಯೂರಿಟಿ ಅಭಿಷೇಕ್ ಮತ್ತು ಎ4 ವಸಂತ್ ಕುಮಾರ್ ಆಗಿದ್ದಾರೆ.

ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದರು. ಜೊತೆಗೆ ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು.

ಶಾಸಕ ಮುನಿರತ್ನ ಅವರು ಸೆಪ್ಟೆಂಬರ್​ 9 ರಂದು 20 ಲಕ್ಷ ಹಣ ಕೇಳಿದ್ದರು. ಹಣ ನೀಡಿದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಮುನಿರತ್ನ ಅವರಿಗೆ ನೋಟಿಸ್ ನೀಡಲು ವೈಯಾಲಿಕಾವಲ್ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

author single

L Ramprasad

Managing Director

comments

No Reviews