ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ “21ನೇ ಶತಮಾನ ದಲ್ಲಿ ಗಾಂಧೀಜಿ ರಾಜಕೀಯ ಚಿಂತನೆಗಳ ಪ್ರಸ್ತುತತೆ ಹಾಗೂ ಅರಿವು ಜಾಥಾ”
2024-10-04 21:31:31
ದಿನಾಂಕ. 09.10.2024ರ ಬುಧವಾರದಂದು ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ “21ನೇ ಶತಮಾನ ದಲ್ಲಿ ಗಾಂಧೀಜಿ ರಾಜಕೀಯ ಚಿಂತನೆಗಳ ಪ್ರಸ್ತುತತೆ ಹಾಗೂ ಅರಿವು ಜಾಥಾ”.ಅದೇ ದಿನ ಬೆಳಗ್ಗೆ 9-00 ಗಂ ಟೆಗೆ ಮೈಸೂರಿನ ನ್ಯಾಯಾಲಯದ ಮುಂಭಾಗದಲ್ಲಿ ರುವ ಗಾಂಧೀ ಪುತ್ಥಳಿಗೆ ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷರು, ಪೂಜ್ಯರು ಆದ ಪೂಜ್ಯ ಶ್ರೀ ಚಿದಾನಂದ ಮಹಾಸ್ವಾಮೀಜಿಗಳು ಮಾಲಾರ್ಪಣೆ ಮಾಡಲಿದ್ದಾರೆ.
ಗೌರವಾನ್ವಿತ ಜಿಲ್ಲಾ ಮತ್ತು ಲೋಕಾಯುಕ್ತ ನ್ಯಾಯಾ ಧೀಶರಾದ ಶ್ರೀಮತಿ ಜೆ.ಸಿ. ಭಾಗ್ಯ ಇವರು ಜಾಥಾವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ
ಹೆಚ್.ಬಿ. ರಮೇಶ್ ಕುಮಾರ್ ಭಾಗವಹಿಸಲಿದ್ದಾರೆ.
ಅಂದು ಬೆಳಗ್ಗೆ 10-30 ಗಂಟೆಗೆ ಶ್ರೀ ನಟರಾಜ ಸಭಾ ಭವನದಲ್ಲಿ 21ನೇ ಶತಮಾನದಲ್ಲಿ ಗಾಂಧೀಜಿ ರಾಜಕೀ ಯ ನಿಲುವುಗಳ ಪ್ರಸ್ತುತತೆ ಕುರಿತ ಚಿಂತನ-ಮಂಥನ ಹಾಗೂ ದುಂಡು ಮೇಜಿನ ಸಭೆಯನ್ನು ಹಮ್ಮಿಕೊಳ್ಳ ಲಾಗಿದೆ. ಈ ಸಮಾರಂಭವನ್ನು ಕರ್ನಾಟಕ ಸರ್ಕಾರದ ಗೌರವಾನ್ವಿತ ವಿಧಾನ ಪರಷತ್ತಿನ ಸಭಾಧ್ಯಕ್ಷರಾದ ಸ ನ್ಮಾನ್ಯ ಶ್ರೀ ಬಸವರಾಜ್ ಹೊರಟ್ಟಿರವರು ಉದ್ಘಾಟಿ ಸಲಿದ್ದಾರೆ. ಗಾಂಧೀಜಿರವರ ಭಾವಚಿತ್ರಕ್ಕೆ ಹಿರಿಯ ಗಾಂಧಿ ಮಾರ್ಗಿಗಳಾದ ಶ್ರೀ ವೈ.ಸಿ. ರೇವಣ್ಣರವರು ಪುಷ್ಪಾರ್ಚನೆಯನ್ನು ನೆರವೇರಿಸಲಿದ್ದಾರೆ. ಗಾಂಧೀಜಿ ಕುರಿತ ಚಿಂತನೆಯನ್ನು ನಾಡೋಜ ಡಾ. ವೂಡೇ ಪಿ.
ಕೃಷ್ಣ, ಅಧ್ಯಕ್ಷರು, ಕರ್ನಾಟಕ ಸ್ಮಾರಕ ನಿಧಿ, ಗಾಂಧೀಭ ವನ, ಬೆಂಗಳೂರು. ಇವರು ತಿಳಿಸಿಕೊಡಲಿದ್ದಾರೆ. ಕಾ ರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಶಾಸಕ ರು ಹಾಗೂ ಮಾಜಿ ಮಂತ್ರಿಗಳಾದ ಶ್ರೀ ಜಿ.ಟಿ. ದೇವೇ ಗೌಡ, ಕೆ.ಆರ್. ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕ ರಾದ ಶ್ರೀ ಟಿ.ಎಸ್. ಶ್ರೀವತ್ಸ, ಗುಂಡ್ಲುಪೇಟೆ, ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹೆಚ್.ಎಂ. ಗಣೇಶ್ ಪ್ರಸಾದ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶ್ರೀ ನಟರಾಜ ಪ್ರತಿಷ್ಠಾನದ ವಿಶೇ ಷಾಧಿಕಾರಿಗಳಾದ ಪ್ರೊ. ಎಸ್. ಶಿವರಾಜಪ್ಪ ವಹಿಸಲಿ ದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡಪ್ರಭ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾದ ಶ್ರೀ ಅಂಶಿ ಪ್ರಸನ್ನ ಕುಮಾರ್, ವಿಜಯವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಶ್ರೀ ಎಂ.ಆರ್. ಸತ್ಯನಾರಾಯಣ, ಪ್ರಜಾ ವಾಣಿ ದಿನಪತ್ರಿಕೆಯ ಬ್ಯೂರೋ ಚೀಫ್ ರವರಾದ ಶ್ರೀ ಕೆ. ನರಸಿಂಹಮೂರ್ತಿ, ಮೈಸೂರು ವಕೀಲರ ಸಂಘದ ಅ ಧ್ಯಕ್ಷರಾದ ಶ್ರೀ ಎಸ್. ಲೋಕೇಶ್, ಡಾ. ಶಾರದ ಎಂ. ಪ್ರಾಂಶುಪಾಲರು, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾದ ಶ್ರೀಮತಿ ಪೂರ್ಣಿಮಾ ಹೆಚ್.ಎ., ಈ ಸಂದರ್ಭ ದಲ್ಲಿ ಉಪಸ್ಥಿತರಿರುತ್ತಾರೆ. ಉದ್ಘಾಟನೆಯ ಸಮಾರಂ ಭದ ನಂತರ ಗಾಂಧೀಜಿ ರಾಜಕೀಯ ನಿಲುವುಗಳ ಪ್ರ ಸ್ತುತತೆಯನ್ನು ಕುರಿತಾದ ದುಂಡು ಮೇಜಿನ ಸಂವಾದ ವನ್ನು ಏರ್ಪಡಿಸಲಾಗಿದೆ. ಇದರ ನೇತೃತ್ವವನ್ನು ಹಿರಿಯ ಗಾಂಧಿ ಮಾರ್ಗಿಗಳಾದ ಶ್ರೀ ವೈ.ಸಿ. ರೇವಣ್ಣ,ರವರು ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಮಾನ್ಯ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಶ್ರೀ ಜಿ.ಟಿ. ದೇವೇಗೌಡ ಸಮನ್ವಯಕಾರರಾಗಿ, ನಾಡೋಜ ಡಾ. ವೂಡೇ ಪಿ. ಕೃಷ್ಣ,, ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂವಾದದಲ್ಲಿ ಶಾಸಕರಾದ ಟಿ.ಎಸ್.ಶ್ರೀವತ್ಸ ವಿಶೇಷಾಧಿಕಾರಿಗಳಾದ ಪ್ರೊ.ಎಸ್ .ಶಿವರಾಜಪ್ಪ , ರವರು ಹಾಗೂ ಕಾರ್ಯನಿರ್ವಾಹಕರಾದ ಶ್ರೀ ಅಂಶಿ ಪ್ರಸನ್ನ ಕುಮಾರ್, ಸ್ಥಾನಿಕ ಸಂಪಾದಕರಾದ ಶ್ರೀ ಎಂ.ಆರ್. ಸತ್ಯನಾರಾಯಣ ಬ್ಯೂರೋ ಚೀಫ್ ರವರಾದ ಶ್ರೀ ಕೆ. ನರ ಸಿಂಹಮೂರ್ತಿ, ಮೈಸೂರು. ವಕೀಲರ ಸಂಘದ ಅಧ್ಯ ಕ್ಷರಾದ ಶ್ರೀ ಎಸ್.ಲೋಕೇಶ್, ಸರ್ಕಾರಿ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಜೆ.ಜಿ. ವಿಶ್ವ ನಾಥಯ್ಯ, ಡಾ. ಶಾರದ ಎಂ.ಪ್ರಾಂಶುಪಾಲರು, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪೂರ್ಣಿಮಾ ಹೆಚ್.ಎ., ಸಹಾಯಕ ಪ್ರಾಧ್ಯಾಪಕರಾದ, ಶ್ರೀಮತಿ ತಾರಾ ಸಿ.ಎಸ್. ಹಾಗೂ ಶ್ರೀ ನಟರಾಜ ಅಂಗ ಸಂಸ್ಥೆ ಯ ಎಲ್ಲಾ ಮುಖ್ಯಸ್ಥರುಗಳು, ತರಗತಿ ಪ್ರತಿನಿಧಿಗಳು ಮತ್ತು ರಾಜ್ಯಶಾಸ್ತ್ರ ವಿಭಾಗದ ಎಲ್ಲಾ ವಿದ್ಯಾರ್ಥಿನಿಯ ರು ಪಾಲ್ಗೊಳ್ಳಲಿದ್ದಾರೆ.
comments
Log in to write reviews