ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ‌ಮುಡಾ ಹಗರಣದ ಬಾಂಬ್ ಸಿಡಿಸಿದ ಎಚ್.ಡಿ.ಕೆ

ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ‌ಮುಡಾ ಹಗರಣದ ಬಾಂಬ್ ಸಿಡಿಸಿದ ಎಚ್.ಡಿ.ಕೆ

2024-10-18 04:08:38

ಮಂಡ್ಯ, ಅ.18: ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಪ್ರಕರಣದ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯನವರು ಏನಾಗುತ್ತೋ ಏನೋ ಎನ್ನುವ ಟೆನ್ಷನ್​ನಲ್ಲಿದ್ದಾರೆ. ಇದರ ಮಧ್ಯ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಮುಡಾ ಹಗರಣ ಬಾಂಬ್ ಸಿಡಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ಎಚ್​ಡಿಕೆ, ಮೈಸೂರಿನ ಹಿನಕಲ್ ನಲ್ಲಿ 1986 ರಲ್ಲಿ 434 ಎಕರೆ ಹೊಸ ಬಡಾವಣೆ ಮಾಡಲು ನೋಟಿಫಿಕೇಷನ್ ಆಗುತ್ತೆ. 17/4 ರಲ್ಲಿ ಎಲ್ಲ ತೆಗೆದರೆ ಗೊತ್ತಾಗುತ್ತದೆ ಎಂದು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಮಂಡ್ಯದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿರುವ ಕೇಂದ್ರ ಸಿಚಿವ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಇದು ಬೇರೆ. ಆದರೆ, ಇದು‌ ಕೂಡ ಮೂಡ ವಿಚಾರ. ಮೈಸೂರಿನ ಹಿನಕಲ್ ನಲ್ಲಿ 1986 ರಲ್ಲಿ 434 ಎಕರೆ ಹೊಸ ಬಡಾವಣೆ ಮಾಡಲು ನೋಟಿಫಿಕೇಷನ್ ಆಗುತ್ತೆ. 17/4 ರಲ್ಲಿ ಎಲ್ಲ ತೆಗೆದರೇ ಗೊತ್ತಾಗುತ್ತದೆ. ಸತ್ಯಾಮೇವಾ ಜನತೆ ಅನ್ನುತ್ತಾರೆ. ಸಾಕಮ್ಮ ಎಂಬವವರ ಕೈಯಲ್ಲಿ ಅರ್ಜಿ ಹಾಕಿಸಿದ್ದಾರೆ. 20 ದಿನದಲ್ಲಿ ಡಿನೋಟಿಫಿಕೇಷನ್ ಆಗುತ್ತೆ. ಅದನ್ನ ಸಿಎಂ ಅವರು ಕೊಂಡುಕೊಂಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಎಂಗೆ ಮತ್ತೊಂದು ಟೆನ್ಷನ್ ತಂದಿಟ್ಟ ಏನೇ ಹುತ್ತ!

ಈಗಾಗಲೇ ಸಿದ್ದರಾಮಯ್ಯ ಪತ್ನಿ ಪಾರ್ವತಿ ಪಡೆದುಕೊಂಡಿದ್ದ 15 ಮುಡಾ ಸೈಟ್ ಪ್ರಕಣ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕೋರ್ಟ್ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿದೆ. ಮತ್ತೊಂದೆಡೆ ಇಡಿ ಸಹ ದೂರು ದಾಖಲಿಸಿಕೊಂಡಿದೆ. ಹೀಗಾಗಿ ಸಿದ್ದರಾಮಯ್ಯನವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಮೊದಲ ಎಫ್​ಐಆರ್ ದಾಖಲಾಗಿದೆ. ಹೀಗಾಗಿ ಸಿದ್ದರಾಮಯ್ಯನವರ ಸಿಎಂ ಕುರ್ಚಿಗೆ ಕಂಟಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಏನು ಹುತ್ತ ಏನೋ ಎನ್ನುವ ಆತಂಕದಿಂದ ಸಿದ್ದರಾಮಯ್ಯ ತಮ್ಮ ಪತ್ನಿಯಿಂದ ಮುಡಾಗೆ ಸೈಟ್ ಹಿಂದಿರುಗಿಸಿದ್ದಾರೆ. ಆದರೂ ಸಹ ಸಿಎಂ ಟೆನ್ಷನ್​ನಲ್ಲಿ ದಿನ ದೂಡುತ್ತಿದ್ದಾರೆ. ಈ ಮಧ್ಯೆ ಕುಮಾರಸ್ವಾಮಿ ಸಹ ಸಿಎಂ ವಿರುದ್ಧ ಮತ್ತೊಂದು ಮುಡಾ ಹಗರಣ ಬಾಂಬ್ ಸಿಡಿಸಿದ್ದಾರೆ.

author single

L Ramprasad

Managing Director

comments

No Reviews