ಮುಡಾ ಕೇಸ್ ಸಿಎಂ ಪ್ರಾಸಿಕ್ಯೂಶನ್ ವಿರುದ್ಧದ ಅರ್ಜಿ ವಿಚಾರಣೆ ಸೆ.9 ಕ್ಕೆ ಮುಂದೂಡಿಕೆ
2024-09-02 05:18:09
ಬೆಂಗಳೂರು, ಸೆ.2: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಮುಡಾ ಕೇಸ್ ನಲ್ಲಿ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದಿನ ಸೆಪ್ಟೆಂಬರ್ 9 ಸೋಮವಾರಕ್ಕೆ ಮುಂದೂಡಿಕೆಯಾಗಿದೆ.
ಇಂದು ಮಧ್ಯಾಹ್ನ 2:30 ರಿಂದ ಮುಂದೂಡಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಯಿತು. ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲರಾದ ಕೆ.ಜಿ.ರಾಘವನ್ ಪ್ರತಿವಾದ ಮಂಡಿಸಿದರು. ವಿಚಾರಣೆ ಸಂಜೆಯಾಗುತ್ತಿದ್ದಂತೆ ನ್ಯಾ.ನಾಗಪ್ರಸನ್ನ ಅವರು ತಮಗೆ ಕೂಲಕುಂಶವಾಗಿ ಮುಡಾ ಕೇಸ್ ಬಗ್ಗೆ ದಾಖಲೆಗಳನ್ನು ಪರಿಶೀಲಿಸಲು ಸಮಯ ಹಿಡಿಯಲಿದೆ. ಆದ್ದರಿಂದ ಗಣೇಶ ಚತುರ್ಥಿ ಹಬ್ಬದ ನಂತರ ವಿಚಾರಣೆ ನಡೆಸೋಣ ಎಂದು ಹೇಳುತ್ತಾ ವಿಚಾರಣೆಯನ್ನು ಮುಂದಿನ ಸೋಮವಾರ ಸೆಪ್ಟೆಂಬರ್ 9 ಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಪರ ಅರ್ಜಿ ವಾದ ಮಂಡಿಸಿದ್ದ ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸೆಪ್ಟೆಂಬರ್ 12 ಕ್ಕೆ ವಿಚಾರಣೆ ಮುಂದೂಡಲು ಜಡ್ಜ್ ಮುಂದೆ ಮನವಿ ಮಾಡಿದರು. ಆದರೆ ಈ ಮನವಿ ತಳ್ಳಿಹಾಕಿದ ಜಡ್ಜ್ ನಾಗಪ್ರಸನ್ನ ಅವರು ವಿಚಾರಣೆಯನ್ನು ಸೆಪ್ಟೆಂಬರ್ 9 ಕ್ಕೆ ಮುಂದೂಡಿಕೆಯಾಗಿದೆ ಎಂದು ತಿಳಿಸಿ ಕೋರ್ಟ್ ಹಾಲ್ ನಿಂದ ಹೊರನಡೆದರು.
ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಸದ್ಯ ಗಣೇಶ ಚತುರ್ಥಿ ಹಬ್ಬದ ದಿನಕ್ಕೂ ಮುನ್ನ ಹೈಕೋರ್ಟ್ ನಿಂದ ಶಾಕಿಂಗ್ ತೀರ್ಪು ಪಡೆಯುವುದು ತಪ್ಪಿದಂತಾಗಿದೆ.
comments
Log in to write reviews