ಪ್ರಾಸಿಕ್ಯೂಶನ್ ಕೊಟ್ಟೇ ಕೊಡ್ತಾರೆ: ಗವರ್ನರ್ ಭೇಟಿ ಬಳಿಕ ಅಬ್ರಹಾಂ ಹೇಳಿಕೆ

ಪ್ರಾಸಿಕ್ಯೂಶನ್ ಕೊಟ್ಟೇ ಕೊಡ್ತಾರೆ: ಗವರ್ನರ್ ಭೇಟಿ ಬಳಿಕ ಅಬ್ರಹಾಂ ಹೇಳಿಕೆ

2024-08-06 06:56:28

ಬೆಂಗಳೂರು, .6: ಮೈಸೂರಿನ ಮುಡಾ ಸೈಟ್ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ಅಬ್ರಾಹಂ, ಇಂದು (ಆಗಸ್ಟ್​ 6) ಮತ್ತೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್​ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿ ಪ್ರವಾಸದಿಂದ ಬೆಂಗಳೂರಿಗೆ ವಾಪಸ್ ಆದ ಬೆನ್ನಲ್ಲೇ ಅಬ್ರಾಹಂ ಭೇಟಿ ಮಾಡಿ ಪ್ರಕರಣ ಸಂಬಂಧ ಮತ್ತಷ್ಟು ವಿವರಣೆ ನೀಡಿದ್ದಾರೆ. ಇನ್ನು ರಾಜ್ಯಪಾಲರನ್ನು ಭೇಟಿ ಮಾಡಿ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಾಹಂ, ನನ್ನ ಬಳಿ ಮತ್ತಷ್ಟು ಕ್ಲಾರಿಪಿಕೇಷನ್ ಕೇಳಿದ್ದಾರೆ. ಕಳೆದ ಬಾರಿ ಕೇಳಿದ ದಾಖಲೆಗಳ ಬಗ್ಗೆ ಮತ್ತೆ ಮಾತಾಡಿದ್ದು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟೇ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಹಾಕಿದ ಪ್ರಾಸಿಕ್ಯೂಷನ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶೋಕಾಸ್​ ನೋಟಿಸ್ ಕೊಟ್ಟಿದ್ದರು. ಆದ್ರೆ, 3 ಗಂಟೆ ಕ್ಯಾಬಿನೆಟ್ ಸಭೆ ನಡೆಸಿ ಗರ್ವನರ್ ನೋಟಿಸ್ ಕೊಟ್ಟಿದ್ದು ತಪ್ಪು ಅಂತಾರೆ. ಟಿ. ಜೆ ಅಬ್ರಹಾಂ ಸರಿಯಿಲ್ಲ ಅಂತಾರೆ. ಸಿದ್ದರಾಮಯ್ಯ ಮೇಲೆ ಆರೋಪ ಸರಿಯಿದೆ, ಆದರೆ ಟಿ.ಜೆ ಅಬ್ರಹಾಂ ಸರಿಯಲ್ಲ ಅಂತಾರೆ. ನನ್ನ ಬಳಿ ಮತ್ತಷ್ಟು ಕ್ಲಾರಿಪಿಕೇಷನ್ ಕೇಳಿದ್ರು. ಕಳೆದ ಬಾರಿ ಕೇಳಿದ ದಾಖಲೆಗಳ ಬಗ್ಗೆ ಮತ್ತೆ ಚರ್ಚೆ ಮಾಡಿದ್ದು, ಪ್ರಾಸಿಕ್ಯೂಷನ್​ಗೆ ಕೊಟ್ಟೇ ಕೊಡುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

ಸಾಕಷ್ಟು ವಿವರಣೆ ಕೊಟ್ಟಿದ್ದೇನೆ. ಆದಷ್ಟು ಶೀಘ್ರದಲ್ಲಿ ರಾಜ್ಯಪಾಲರು ಉತ್ತರ ಕೊಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು 2ನೇ ಶೋಕಾಸ್ ನೊಟೀಸ್ ಕೊಟ್ಟಿಲ್ಲ. ಇವತ್ತು ಹೆಚ್ಚುವರಿ ದಾಖಲೆ ಕೊಡಲಿಲ್ಲ. ನನ್ನ ಮೇಲೆ ಸರ್ಕಾರ ಮಾಡಿರುವ ಆಪಾದನೆಗೆ ರಾಜ್ಯಪಾಲರ ಬಳಿ ಸ್ಪಷ್ಟೀಕರಣ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಪಾಲರು ಸ್ಪಷ್ಟನೆ ಕೇಳುತ್ತಾರೆ ಅಂದರೆ ಅವರಿಗೆ ಇದನ್ನು ಮುಂದುವರೆಸಲು ಆಸಕ್ತಿ ಇದೆ ಎಂದರ್ಥ. ಕಳೆದ ಗುರುವಾರ ರಾಜ್ಯಪಾಲರ ಸಮಯ ಕೇಳಿದ್ದೆ. ಇವತ್ತು ಬರಲು ಹೇಳಿದ್ದರು. ಹೀಗಾಗಿ ಬಂದು ಸ್ಪಷ್ಟೀಕರಣ ಕೊಟ್ಟಿದ್ದೇನೆ. ನನ್ನ ವಿರುದ್ಧ ಯಾವ ದೂರೂ ಇಲ್ಲ. ನನ್ನ ವಿರುದ್ಧ ಕೇಸ್ ಹುಡುಕಿ, ಹುಡುಕಲು ಆಗದಿದ್ರೆ ಹೇಗೆ ಹುಡುಕಬೇಕು ಎಂದು ನನ್ನ ಕೇಳಿ ಎಂದು ಸರ್ಕಾರಕ್ಕೆ ನಾನು ನೇರ ಸವಾಲ್ ಹಾಕುತ್ತೇನೆ ಎಂದು ಅಬ್ರಹಾಂ ವಾಗ್ದಾಳಿ ನಡೆಸಿದರು.

author single

L Ramprasad

Managing Director

comments

No Reviews