ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆ!
2024-08-03 05:11:39
ವಾಷಿಂಗ್ಟನ್, ಆ.3: ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಇನ್ನು 3 ತಿಂಗಳು ಬಾಕಿ ಇದ್ದು ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಲಾಗಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಅಧಿಕೃತ ಅಭ್ಯರ್ಥಿಯಾಗುವ ಮೂಲಕ ಮೊದಲ ಕಪ್ಪು ವರ್ಣೀಯ ಹಾಗು ಏಷ್ಯಾದ ಮೊದಲ ವ್ಯಕ್ತಿ ಎನ್ನುವ ಹಿರಿಮೆಗೆ ಕಮಲಾ ಹ್ಯಾರೀಸ್ ಪಾತ್ರವಾಗಿದ್ದಾರೆ.
ನವೆಂಬರ್ 5 ರಂದು ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚುನಾವಣೆಯಲ್ಲಿ ಮುಖಾಮುಖಿಯಾಗಲಿದ್ದಾರೆ.
ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿದರೆ ಕಮಲಾ ಹ್ಯಾರಿಸ್ ಅವರು ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರಾದ ಇತಿಹಾಸ ನಿರ್ಮಾಣ ಮಾಡಲಿದ್ದಾರೆ.
ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು ಕಳೆದ ತಿಂಗಳು ಅಧ್ಯಕ್ಷೀಯ ಸ್ಥಾನದ ಚುನಾವಣಾ ಕಣದಿಂದ ಹಿಂದೆ ಸರಿದ ನಂತರ ಡೆಮಾಕ್ರಟಿಕ್ ಪಕ್ಷದ ಅವಿರೋಧವಾಗಿ ತನ್ನ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿದೆ.
ಅಮೆರಿಕಾದ ಅಧ್ತಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ನಾಮನಿರ್ದೇಶನ ಗಳಿಸಲು ಅಗತ್ಯವಾದ ಮಿತಿಯಾದ 2,350 ಪ್ರತಿನಿಧಿಗಳ ಬೆಂಬಲಕ್ಕೂ ಹೆಚ್ಚು ಮತ ಪಡೆದುಕೊಂಡ ನಂತರ ಕಮಲಾ ಹ್ಯಾರಿಸ್ ಅವರನ್ನು ಔಪಚಾರಿಕವಾಗಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಮಲಾ ಹ್ಯಾರೀಸ್ ಅಮೆರಿಕವನ್ನು ಮತ್ತಷ್ಡು ಅಭಿವೃದ್ಧಿ ಮಾಡುವ ಭರವಸೆ ಹೊಂದಿದ್ದೇನೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿದ ಪಕ್ಷದ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಹೇಳಿದ್ದಾರೆ.
ಅಧ್ಯಕ್ಷೀಯ ನಾಮಿನಿಯನ್ನು ಆಯ್ಕೆಮಾಡುವ ಪ್ರಕ್ರಿಯೆಯಲ್ಲಿ ಡೆಮಾಕ್ರಟಿಕ್ ಪಕ್ಷದ 3,923 ಪ್ರತಿನಿಧಿಗಳು ಭಾಗಿಯಾಗಿದ್ದರು. ಅದರಲ್ಲಿ ಕಮಲಾ ಹ್ಯಾರೀಸ್ ಅವರಿಗೆ ಶೇಕಡಾ 99 ರಷ್ಟು ಮತಗಳು ಚಲಾವಣೆಯಾಗಿವೆ.
ಕಮಲಾ ಹ್ಯಾರಿಸ್ ಹಿನ್ನೆಲೆ...
ಕಮಲಾ ಹ್ಯಾರಿಸ್ ಅವರು ಭಾರತೀಯ ಮೂಲದ ಮಹಿಳೆ. ಇವರ ತಂದೆ ಡೊನಾಲ್ಡ್ ಹ್ಯಾರಿಸ್ ಆಫ್ರಿಕಾ ಖಂಡದ ಜಮೈಕಾದವರು, ತಾಯಿ ಶ್ಯಾಮಲಾ ಗೋಪಾಲನ್ ಕ್ಯಾನ್ಸರ್ ಸಂಶೋಧಕಿ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರ್ತಿ, ಭಾರತದ ಚೆನ್ನೈ ಮೂಲದವರು. ಆದರೆ ಕಮಲಾ ಹ್ಯಾರಿಸ್ ತಮ್ಮನ್ನು ತಾವು ಅಮೆರಿಕನ್ ಎಂದು ಗುರುತಿಸಿಕೊಳ್ಳುತ್ತಾರೆ.
ಕಮಲಾ ಹ್ಯಾರಿಸ್ ಪೋಷಕರು ವಿಚ್ಚೇದನ ಪಡೆದಿದ್ದರು. ನಂತರ ಭಾರತ ಮೂಲದ ತಾಯಿಯ ಆಶ್ರಯದಲ್ಲಿಯೇ ಕಮಲಾ ಬೆಳೆದರು. ಆಕೆಯ ತಾಯಿ ಕಪ್ಪು ವರ್ಣದ ಸಂಪ್ರದಾಯ ಅಳವಡಿಸಿಕೊಂಡು ಅದರಂತೆ ತನ್ನಿಬ್ಬರು ಪುತ್ರಿಯರಾದ ಕಮಲಾ ಮತ್ತು ಮಾಯಾರನ್ನು ಬೆಳೆಸಿದ್ದರು.
ಹೀಗಾಗಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೀಗ ಕಪ್ಪು ವರ್ಣೀಯ ಮತದಾರರು ಮತ್ತು ಭಾರತ ಮೂಲದ ಮತದಾರರು ಕಮಲಾ ಹ್ಯಾರಿಸ್ ಪರವಾಗಿ ಬಹುತೇಕ ವಾಲುವ ಸಾಧ್ಯತೆ ಇದೆ.
ಪರಿಣಾಮ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ 2ನೇ ಬಾರಿ ಸ್ಪರ್ಧಿಸಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಬಾರಿ ಗೆಲ್ಲುವುದು ದುಸ್ತರವಾಗಿದೆ. ಜೊತೆಗೆ ಹಿಂದೆ ಅಮೆರಿಕಾ ಅಧ್ಯಕ್ಷರಾಗಿದ್ದ ವೇಳೆ ಟ್ರಂಪ್ ಅವರು ಭಾರತವನ್ನು ಬಹಿರಂಗವಾಗಿಯೇ ಹೀನಾಯವಾಗಿ ನಿಂದಿಸಿದ್ದು ಭಾರತೀಯ ಮತದಾರರನ್ನು ಕೆರಳಿಸಿತ್ತು. ಕಪ್ಪು ವರ್ಣೀಯರೆಂದು ಕಾಣಿಸದ ಕಾರಣ ಕಮಲಾ ಹ್ಯಾರಿಸ್ ಅವರು ಅಮೆರಿಕದ ಬಿಳಿವರ್ಣೀಯ ಮತದಾರರಾದ ರೆಡ್ ಇಂಡಿಯನ್ನರ ಮತ ಸೆಳೆಯುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೇ ಅಮೆರಿಕದ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಸಂಭವ ಹೆಚ್ಚಾಗಿ ಗೋಚರಿಸಿದೆ ಎಂದು ಅಮೆರಿಕದ ಸುದ್ದಿ ಮಾಧ್ಯಮಗಳು ತಿಳಿಸಿವೆ.
comments
Log in to write reviews