ಚನ್ನರಾಯಪಟ್ಟಣ: ಡಿ ದೇವರಾಜು ಅರಸು ಜನ್ಮದಿನಾಚರಣೆಗೆ ಚಾಲನೆ ನೀಡಿದ ಶಾಸಕ ಸಿಎನ್ ಬಾಲಕೃಷ್ಣ

ಚನ್ನರಾಯಪಟ್ಟಣ: ಡಿ ದೇವರಾಜು ಅರಸು ಜನ್ಮದಿನಾಚರಣೆಗೆ ಚಾಲನೆ ನೀಡಿದ ಶಾಸಕ ಸಿಎನ್ ಬಾಲಕೃಷ್ಣ

2024-08-20 11:04:11

 

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶಯದಲ್ಲಿ ಡಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ಶಾಸಕ ಸಿಎನ್ ಬಾಲಕೃಷ್ಣರವರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿದ ಉಪನ್ಯಾಸಕ ಎಂ ಜೆ ರತ್ನಾಕರ್ ಮಾತನಾಡಿ ಕರ್ನಾಟಕದಲ್ಲಿ ಪರಿವರ್ತನ ಶೀಲಾ ರಾಜಕಾರಣ ಮಾಡಿದ ಹೆಸರಾಂತ ಮುಖ್ಯಮಂತ್ರಿ ದೇವರಾಜ ಅರಸು ಮಾತ್ರ ಎಂದರು. ಅರಸುರವರು ಕೇವಲ ಜನಾನುರಾಗಿ ಅಷ್ಟೇ ಅಲ್ಲ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಎಂದೆಂದೂ ಮಾಸದ ಧ್ರುವತಾರೆಯಾಗಿದ್ದಾರೆ, ಹಾಗೆಯೇ ನಮ್ಮ ಕರ್ನಾಟಕನಾಳಿದ ಎಲ್ಲಾ ರಾಜಕಾರಣಿಗಳಿಗೂ ಮಾದರಿ ಆಡಳಿತವನ್ನು ಕೊಟ್ಟಂತಹ ಅರಸು ರವರು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದೇ ಹೆಸರು ಗಳಿಸಿದ್ದರು. ಭೂ ಸುಧಾರಣೆ ಕಾಯ್ದೆಯ ಮೂಲಕ  ಭಾರತ ದೇಶದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವಾಗಿ ಹಾಗೂ ಸಾಮರಸ್ಯದ ಮೂಲಕ ಸಂಘರ್ಷ ಮಾಡದೆ ಬಡ ರೈತರಿಗೆ ಭೂಮಾಲೀಕರಿಂದ ಭೂಮಿಯನ್ನು  ಬಡ ಗೇಣಿದಾರರಿಗೆ ಕೊಡಿಸಿದ್ದು ನಿಜವಾಗಲೂ ಪ್ರಶಂಶನೀಯ ಎಂದರು. ದೇಶದಲ್ಲಿ ಕಮ್ಯುನಿಸ್ಟ್ ಆಡಳಿತ ಇರುವ ರಾಜ್ಯಗಳು ಕೂಡ ಮಾಡದ ಭೂಮಿ ಹಂಚುವ ಕಾರ್ಯ ಕರ್ನಾಟಕದಲ್ಲಿ ಸಾಧ್ಯವಾಗಿದ್ದು ಅರಸು ಅವರ ಧೈರ್ಯ ಹಾಗೂ ಶಕ್ತಿ ಮತ್ತು ಅರಸುರವರಿಗೆ  ಬಡವರ ಬಗ್ಗೆ ಇದ್ದ ಕಾಳಜಿಯ ಕಾರಣದಿಂದ ಭೂ ಸುಧಾರಣೆ ಹರಿಕಾರ ಎಂದು ಹೆಸರು ಗಳಿಸಿದ್ದಾರೆ ಎಂದರು. ಹಿಂದುಳಿದ ವರ್ಗಗಳ ಮೀಸಲಾತಿಯ ಬೈಬಲ್ ಎಂದೇ ಹೆಸರು ಗಳಿಸಿರುವ ಎಲ್ ಜಿ ಹಾವನೂರು ಆಯೋಗವನ್ನು ರಚಿಸುವ ಮೂಲಕ ಭಾರತದ ಮಂಡಲ್ ವರದಿಗೆ ಪ್ರೇರಣೆಯಾಗುವಂತಹ ಮೀಸಲಾತಿಯನ್ನು ಜಾರಿಗೆ ತಂದಂತಹ ಕೀರ್ತಿ ಇವರದಾಗಿದೆ, ಒಮ್ಮೆ 1979ರಲ್ಲಿ ಮುರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾಗಿದ್ದಾಗ ಎಲ್ಲಾ ರಾಜ್ಯಗಳ ಅಭಿವೃದ್ಧಿ ಸಭೆಯನ್ನು 
 ಚೆನ್ನೈನಲ್ಲಿ ಕರೆದಿರುತ್ತಾರೆ, ಆ ಸಂದರ್ಭ ಅತ್ಯಂತ ಶ್ರೀಮಂತ ರಾಜ್ಯಗಳೆಂದು ಹೆಸರು ಗಳಿಸಿರುವ ಪಂಜಾಬ್ ಮತ್ತು ಹರಿಯಾಣಕ್ಕಿಂತಲೂ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯವು ದೇವರಾಜ್ ಅರಸು ಅವರ ಕಾಲದಲ್ಲಿ ಮುಂದೆ ಬಂದಿತ್ತು ಅದನ್ನು ಎಲ್ಲಾ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮುರಾರ್ಜಿ ದೇಸಾಯಿ ಅವರು ದೇವರಾಜ ಅರಸುರವರ ಎನ್ನುತ್ತಾ ಕೊಂಡಾಡಿದರು, ತದನಂತರ ಊಟದ ವಿರಾಮದ ಸಮಯದಲ್ಲಿ ಅರಸುರವರು ಪ್ರಧಾನ ಮಂತ್ರಿ ಮುರಾರ್ಜಿಯವರನ್ನ ಭೇಟಿ ಮಾಡಿ ಧನ್ಯವಾದಗಳು ತಿಳಿಸಿದ್ದಲ್ಲದೆ ನಮ್ಮ ಕರ್ನಾಟಕ ರಾಜ್ಯವು ಆರ್ಥಿಕವಾಗಿ ಅಭಿವೃದ್ಧಿ ಆಗಲು ನಾನೊಬ್ಬನೇ ಕಾರಣನಲ್ಲ ಇದರ ಸಂಪೂರ್ಣ ಶ್ರೇಯಸ್ಸು ಮತ್ತು ಹೊಗಳಿಕೆ ಸಲ್ಲಬೇಕಾದದ್ದು ನಮ್ಮ ಪ್ರೊಫೆಸರ್ ನಂಜುಂಡಪ್ಪರವರಿಗೆ ಎಂದು ಮುಂದೆ ಕುಳಿತಿದ್ದ ಅಧಿಕಾರಿಯನ್ನು ಪ್ರಧಾನಮಂತ್ರಿಗೆ ಪರಿಚಯಿಸುವ ಮೂಲಕ ಹೃದಯ ವೈಶಾಲತೆಯನ್ನು ಮೆರೆದಿದ್ದರು, ಇದು ಆಡಳಿತ ನಡೆಸುವ ಪ್ರತಿಯೊಬ್ಬ ಮಂತ್ರಿಗೂ ಆದರ್ಶಪ್ರಾಯವಾಗಬೇಕು ಮುಂದೆ ಇದೆ ನಂಜುಂಡಪ್ಪನವರು ಮಂಡಿಸಿದಂತಹ ವರದಿ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಇಂದಿಗೂ ಕರ್ನಾಟಕಕ್ಕೆ ಮಾದರಿಯಾಗಿದೆ ಇಂತಹ ಶಿಕ್ಷಣ ಕ್ಷೇತ್ರದಲ್ಲಿ ಇದ್ದಂತಹ ಪ್ರತಿಭಾನ್ವಿತರನ್ನ ರಾಜ್ಯದ ಆಡಳಿತ ಅಭಿವೃದ್ಧಿಗೆ ಬಳಸಿಕೊಳ್ಳುವುದು ಅರಸುರವರ ಬುದ್ಧಿವಂತಿಕೆ ಮಾರ್ಗವಾಗಿತ್ತು. ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಹೇಳಿದಂತೆ ರಾಜಕೀಯ ಕೀಲಿ ಕೈ ಮೂಲಕ ರಾಜಕೀಯ ಅಧಿಕಾರವನ್ನು ಪಡೆದು ಶೋಷಿತರು ಮುಂದೆ ಬರಬೇಕು ಎನ್ನುವ ಮಾತನ್ನು ಅರಸುರವರು ಪಾಲಿಸಿದರು, ಯಾರು ಶತಮಾನಗಳ ಕಾಲ ತುಳಿತಕ್ಕೊಳಗಾಗಿ ಆರ್ಥಿಕವಾಗಿ ರಾಜಕೀಯವಾಗಿ ಅವಕಾಶ ಇಲ್ಲದಂತಾಗಿದ್ದರು,ಅವರಿಗೆ ಭೂಸುಧಾರಣೆ ,ಜೀತ ವಿಮುಕ್ತಿ, ಮುಂತಾದ ಯೋಜನೆಗಳ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಿದರು. ರಾಜಕೀಯವಾಗಿ ಅವಕಾಶವನ್ನು ಕಲ್ಪಿಸಿ ಮಂತ್ರಿ ಮಹೋದರನ್ನಾಗಿ ಮಾಡಿದ್ದು ಕೂಡ ಅರಸರು ಹೆಗ್ಗಳಿಕೆ ಆಗಿದೆ, ಇಂದು ಹಿಂದುಳಿದ ವರ್ಗಗಳಲ್ಲಿ ಹೆಸರು ಮಾಡಿರುವಂತಹ ರಾಜಕಾರಣಿಗಳಾದಂತಹ ವೀರಪ್ಪ ಮೈಲಿ, ಮಲ್ಲಿಕಾರ್ಜುನ ಖರ್ಗೆ, ಹೆಚ್ ವಿಶ್ವನಾಥ್, ದಿವಂಗತ ಜಾಫರ್ ಷರೀಫ್, ಬಿ ಬಸವಲಿಂಗಪ್ಪ ಮುಂತಾದವರನ್ನು ರಾಜಕೀಯ ಮೇಲ್ಪಂತಿಗೆ ಕೂರಿಸಿದ್ದು ಕೂಡ ಅರಸು ಕಾಲದ ರಾಜಕಾರಣಕ್ಕೇ ಸಾಕ್ಷಿಯಾಗಿದೆ, ಹಾಗಾಗಿ ಅವಕಾಶ ವಂಚಿತರಿಗೆ ರಾಜಕೀಯ ಬಲವನ್ನು ತುಂಬುವ ಮೂಲಕ ರಾಜಕೀಯ ಗುರುಗಳು ಆಗಿದ್ದಾರೆ ಅಷ್ಟೇ ಅಲ್ಲದೆ ಅಂಗವಿಕಲ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಅವಕಾಶ ಕಲ್ಪಿಸುವುದು, ಅಂಗವಿಕಲ ವೇತನ ನೀಡುವುದು, ಅಂಗವಿಕಲ ಪದವಿ ಓದಿದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಟ್ಟಿರುವುದು, ಗ್ರಾಮೀಣ ಬಡವರ ಮನೆಗಳಿಗೆ ಭಾಗ್ಯ ಜ್ಯೋತಿ ವಿದ್ಯುತ್, ಹಿಂದುಳಿದ ವರ್ಗಗಳ ಮಕ್ಕಳಿಗೆ ಹಾಸ್ಟೆಲ್ ಸ್ಥಾಪನೆ, ವಸತಿ ಶಾಲೆಗಳ ಸ್ಥಾಪನೆ ಮಾಡಿದರು. ಕರ್ನಾಟಕದಲ್ಲಿ ಇದ್ದಂತಹ ಮಲಹೋರುವ ಪದ್ಧತಿ ಅಂತಹ ಅಮಾನುಷ ಪದ್ದತಿಯನ್ನು ನಿರ್ಮೂಲನೆ ಮಾಡಲು ಬಿ ಬಸವಲಿಂಗಪ್ಪ ನವರಿಗೆ ಸಹಕಾರ ನೀಡಿದ್ದು ಕೂಡ ಅವರ ದೂರ ದೃಷ್ಟಿಗೆ ಹಾಗೂ ಸಮಾಜ ಪರಿವರ್ತನೆಗೆ ಸಾಕ್ಷಿಯಾಗಿದೆ. ಇಂದು ಕರ್ನಾಟಕದ ಬಹುಪಾಲು ಜಿಲ್ಲೆಗಳ ರೈತರು ಒಕ್ಕಲುತನ ಮಾಡುತ್ತಿರುವ ಬಡ ವಕ್ಕಲಿಗರು ಭೂಮಿಯನ್ನು ಹೊಂದಿದ್ದರೆ ಅದು ಅರಸು ಕಾಲದ ಭೂ ಸುಧಾರಣೆಯ ಕಾಯ್ದೆಯ ಪ್ರತಿಫಲವಾಗಿದೆ, ಹಾಗಾಗಿ ಕೇವಲ ಹಿಂದುಳಿದ ವರ್ಗಗಳಿಗೆ ಅಷ್ಟೇ ಆದ್ಯತೆ ನೀಡದೆ ಮೇಲ್ವರ್ಗದ ಬಡವರಿಗೂ ಕೂಡ ನೆರವು ನೀಡುವುದು ಅವರ ಉದ್ದೇಶವಾಗಿತ್ತು, ಅದೇ ರೀತಿ ಕೇರಳ ರಾಜ್ಯದ ಈಳವ ಜಾತಿಗೆ ಸೇರಿದ ನಾರಾಯಣ ಗುರುರವರು ಧಾರ್ಮಿಕ ಪರಿವರ್ತನೆಗಾಗಿ ಕೀಳವ ಟೆಂಪಲ್ ಅನ್ನು ಸ್ಥಾಪಿಸಿ ಸರ್ವರಿಗೂ ದೇವಸ್ಥಾನ ಪ್ರವೇಶ ಕಲ್ಪಿಸಿ ಜಾತಿ ರಹಿತ ಹಾಗೂ ಅಸ್ಪೃಶ್ಯತೆ ಇಲ್ಲದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದಂತಹ ಮಹಾಪುರುಷ ಇವರೆಲ್ಲರೂ ರಾಜಕೀಯ ಎನ್ನುವುದು ಉದ್ಯಮ ಅಥವಾ ಉದ್ಯೋಗವನ್ನಾಗಿ ಮಾಡಿಕೊಳ್ಳದೆ ಅದು ಒಂದು ಸಾಮಾಜಿಕ ಜವಾಬ್ದಾರಿ ಎಂದು ತಿಳಿದು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಳಿತಕ್ಕೆ ಸಿಕ್ಕಿ ನೊಂದಿರುವ ಜನರಿಗೆ ಬದುಕನ್ನು ಬದಲಿಸುವ ಹಸನಾಗಿಸುವ ಒಂದು ಉತ್ತಮ ಮಾರ್ಗ ಎಂದು ಭಾವಿಸುವ ಮೂಲಕ ಜನರ ಅರಸರಾಗಿ ಮೆರೆದಂತಹ ಕೀರ್ತಿ ದೇವರಾಜ್ ಅವರಿಗೆ ಸಲ್ಲಬೇಕು ಎಂದು ತಿಳಿಸಿದರು.  ಇದೇ ಸಂದರ್ಭದಲ್ಲಿ ಶಾಸಕರಾದ ಸಿಎನ್ ಬಾಲಕೃಷ್ಣ, ತಾಲೂಕು ದಂಡಾಧಿಕಾರಿ ನವೀನ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್ ಚೌಹಾಣ್, ಮುಖ್ಯ ಭಾಷಣಗಾರರಾದ ಎಂ ಜೆ ರತ್ನಾಕರ್, ಹಿಂದುಳಿದ ಸಮಾಜದ ಮುಖಂಡರುಗಳಾದ ಮಂಜಪ್ಪ, ಎಸ್ ಎಂ ಹರೀಶ್, ರಂಗಸ್ವಾಮಿ, ಸೇರಿದಂತೆ ಇತರರುಹಾಜರಿದ್ದರು.  
ವರದಿ ಹರೀಶ್ ಉಲಿ ವಾಲ

author single

L Ramprasad

Managing Director

comments

No Reviews