ರಾಜ್ಯದ 19 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
2024-08-18 01:09:05
ರಾಜ್ಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, 19ಕ್ಕೂ ಅಧಿಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.
ಕುಷ್ಟಗಿ, ಹುಣಸಗಿ, ಲಿಂಗಸುಗೂರು, ಕುಕನೂರು, ಕಕ್ಕೇರಿ, ಕೊಟ್ಟೂರು, ಮಧುಗಿರಿ, ಇಂಡಿ, ಮುನಿರಾಬಾದ್ನಲ್ಲಿ ಹೆಚ್ಚು ಮಳೆಯಾಗಿದೆ. ಗೇರುಸೊಪ್ಪ, ಇಳಕಲ್, ಕುರ್ಡಿ, ಶಿರಾ, ಕ್ಯಾಸಲ್ರಾಕ್, ಭಾಲ್ಕಿ, ಮಾಗಡಿ, ಶ್ರವಣಬೆಳಗೊಳ, ಪರಶುರಾಂಪುರ, ಕೊಪ್ಪ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಯಲ್ಲಾಪುರ, ಮಂಡರಗಿ, ಖಜೂರಿ, ಚಿಕ್ಕಮಗಳೂರಿನಲ್ಲಿ ಮಳೆಯಾಗಿದೆ.
ಮುದ್ದೇಬಿಹಾಳ, ಜಯಪುರ, ನಾಪೋಕ್ಲು, ಧರ್ಮಸ್ಥಳ, ಹಾವೇರಿ, ರೋಣ, ಕವಡಿಮಟ್ಟಿ, ಶಿರಹಟ್ಟಿ, ಗಂಗಾವತಿ, ಕುಡತಿನಿ, ಮಿಡಿಗೇಶಿ, ಹೊಸಕೋಟೆ, ಬರಗೂರು, ಸಂಡೂರು, ಕಮ್ಮರಡಿ, ಮಂಕಿ, ಹುಮನಾಬಾದ್, ಸೇಡಂನಲ್ಲಿ ಮಳೆಯಾಗಿದೆ. ಮಾನ್ವಿ, ಪೊನ್ನಂಪೇಟೆ, ಗೋಕರ್ಣ, ತಾಳಿಕೋಟೆ, ದೇವರಹಿಪ್ಪರಗಿ, ಜೋಯಿಡಾ, ಹಳಿಯಾಳ, ಬಾದಾಮಿ, ಕೂಡಲಸಂಗಮ, ವಿಜಯಪುರ, ಗಬ್ಬೂರು, ಗದಗ, ಬೀದರ್, ಲಕ್ಷ್ಮೇಶ್ವರ, ಅಣ್ಣಿಗೆರೆ, ದೊಡ್ಡಬಳ್ಳಾಪುರ, ಚನ್ನರಾಯಪಟ್ಟಣ, ಬಳ್ಳಾರಿ, ಚನ್ನಗಿರಿ, ಕಳಸ, ಮೂಡಿಗೆರೆ, ಚಿತ್ರದುರ್ಗದಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ನಿರೀಕ್ಷೆ ಇದೆ.
comments
Log in to write reviews