ದರ್ಶನ್-ಪವಿತ್ರಾಗೌಡ ಮೊಬೈಲ್ ಗಳಿಂದ ವಾಟ್ಸಪ್, ಕಾಲ್, ಫೋಟೋಗಳು ಮಹತ್ವದ ಲಭ್ಯ
2024-09-06 07:05:53
ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಪವಿತ್ರಾ ಗೌಡ ಅವರ ನಂಬರ್ ಅನ್ನು ದರ್ಶನ್ ಅವರು ಪವೀ ಅಂತ ಸೇವ್ ಮಾಡಿಕೊಂಡಿದ್ದಾರೆ. ತನಿಖೆ ವೇಳೆ ಪೊಲೀಸರು ಮೊಬೈಲ್ನಲ್ಲಿನ ಮಾಹಿತಿ ರಿಟ್ರೀವ್ ಮಾಡಿದಾಗ ಇಂಥ ಸಂಗತಿಗಳು ಬಯಲಾಗಿವೆ. ಡಿ ಗ್ಯಾಂಗ್ ಮೊಬೈಲ್ ರಿಟ್ರೀವ್ ಮಾಡಿರುವ ಪೊಲೀಸರಿಗೆ ಚಾಟ್ನ ಸಂಪೂರ್ಣ ಮಾಹಿತಿ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ಹಾಗೂ ಕೊಲೆ ನಂತರ ಏನೆಲ್ಲ ಸಂಭಾಷಣೆಗಳನ್ನ ಮಾಡಿದ್ದಾರೆ? ಯಾರಿಗೆ ಮೆಸೇಜ್ ಕಳುಹಿಸಿದ್ದಾರೆ ಎಲ್ಲವೂ ಸಿಕ್ಕಿವೆ.
ದರ್ಶನ್ ಐಫೋನ್ 15 ಪ್ರೋ ಮೊಬೈಲ್ ಬಳಸುತ್ತಿದ್ದು, ಅದ್ರಲ್ಲಿ ಪವಿತ್ರಾಗೌಡಳ ಮೂರು ನಂಬರ್ ಸೇವ್ ಮಾಡಿಕೊಂಡಿದ್ದಾರೆ. ಮೊದಲನೇ ನಂಬರ್ ಪವಿ ಅಂತ ಸೇವ್ ಮಾಡಿದ್ರೆ, ಮತ್ತೊಂದು ನಂಬರ್ PAVIIII ಅಂತಾ ಸೇವ್ ಮಾಡಿದ್ದಾರೆ. ಮೂರನೇ ನಂಬರ್ ಪವಿತ್ರಾ ಗೌಡ ಎಂದು ಸೇವ್ ಮಾಡಿಕೊಳ್ಳಲಾಗಿದೆ.
ಮೊಬೈಲ್ ಬಳಕೆಯಲ್ಲಿ ದರ್ಶನ್ಗಿಂತ ಪವಿತ್ರಾ ಗೌಡ ಒಂದು ಕೈ ಮೇಲಿದ್ದಾಳೆ. ಐಫೋನ್ ಸೀರಿಸ್ನಲ್ಲಿ ದರ್ಶನ್ ಐಫೋನ್ 15 ಪ್ರೋ ಬಳಸ್ತಾ ಇದ್ರೆ.. ಪವಿತ್ರಾ ಗೌಡ ದರ್ಶನ್ಗಿಂತ ಹೈ ವರ್ಷನ್ ಅಂದ್ರೆ ಐಫೋನ್ 15 ಪ್ರೋ ಮ್ಯಾಕ್ಸ್ ಮೊಬೈಲ್ ಬಳಸ್ತಾ ಇದ್ದಳು. ಪವಿತ್ರಾಗೌಡ ತನ್ನ ಮೊಬೈಲ್ನ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ದರ್ಶನ್ ನಂಬರ್ ಅನ್ನ ಡಿ ಅಂತಾ ಸೇವ್ ಮಾಡಿಕೊಂಡಿರೋದು ಗೊತ್ತಾಗಿದೆ.
ಇನ್ನು ಆರೋಪಿ ಪವನ್ ಹೆಸರನ್ನ ಪವನ್ ನ್ಯೂ ಅಂತಾ ಸೇವ್ ಮಾಡಿದ್ರೆ, ಮತ್ತೊಬ್ಬ ಆರೋಪಿ ನಂದೀಶ್ ಹೆಸರನ್ನ ನಂದಿ ಪವನ್ ಅಂತಾ ಸೇವ್ ಮಾಡಿಕೊಂಡಿದ್ದಾಳೆ. ಇನ್ನು ಆರೋಪಿ ಧನರಾಜ್ ಹೆಸರನ್ನ ರಾಜು ಅಂತಾ ಸೇವ್ ಮಾಡಿಕೊಂಡಿದ್ರೆ, ನಾಗರಾಜ್ ಹೆಸರನ್ನ ನಾಗು ಮೈಸೂರು ಅಂತಾ ಸೇವ್ ಮಾಡಿಕೊಂಡಿದ್ದಾಳೆ. ಇನ್ನು ತನ್ನ ಗೆಳಗಿ ಸಮತಾಳ ಹೆಸರನ್ನ ಸ್ಯಾಮ್ ಎಂದು ಪವಿತ್ರಾ ಸೇವ್ ಮಾಡಿಕೊಂಡಿದ್ದಾಳೆ.
ಆರೋಪಿಗಳ ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಸಂಬಂಧ ಸಾಕಷ್ಟು ರಹಸ್ಯಗಳೂ ಬಯಲಾಗಿವೆ. ಪವಿತ್ರಾ ಮೊಬೈಲ್‌ನಲ್ಲಿ ಕೊಲೆ ಪ್ರಕರಣ ಸಂಬಂಧ 65 ಫೋಟೋ ಪತ್ತೆ ಆಗಿವೆ. 17 ಸ್ಕ್ರೀನ್ ಶಾಟ್, ಸ್ವಾಮಿ ಕಳಿಸಿದ್ದ 20 ಅಶ್ಲೀಲ ಮೆಸೇಜ್ ಲಭ್ಯ ಆಗಿವೆ. ಪವಿತ್ರಗೌಡ ಜೊತೆ ದರ್ಶನ್ ನಡೆಸಿದ್ದ ವಾಟ್ಸಾಪ್ ಚಾಟ್ ಲಭ್ಯ ಆಗಿದೆ. ವಿನಯ್ ಜೊತೆ ದರ್ಶನ್ ನಡೆಸಿದ್ದ ವಾಟ್ಸಾಪ್ ಚಾಟ್ ಕೂಡ ಪತ್ತೆಯಾಗಿದೆ. ನಾಗರಾಜ್ ಜೊತೆ ದರ್ಶನ್ ವಾಟ್ಸಾಪ್ ಕಾಲ್ ಸಂಭಾಷಣೆಯೂ ಲಭ್ಯವಾಗಿದೆ.
ಜೂನ್ 8ರಿಂದ 11ರವೆರಗೂ 32 ಬಾರಿ ವಾಟ್ಸಾಪ್ ಕಾಲ್ ಮಾಡಲಾಗಿತ್ತು. ಪ್ರದೋಶ್ ಜೊತೆ 10 ಬಾರಿ ವಾಟ್ಸಾಪ್ ಕಾಲ್‌ನಲ್ಲಿ ಮಾತುಕತೆ, ಆರೋಪಿ ಅನುಕುಮಾರ್ ಮೊಬೈಲ್‌ನಲ್ಲಿ 2 ವಿಡಿಯೋ, ಆರೋಪಿ ಪ್ರದೋಶ್ ಜೊತೆ ನಡೆಸಿರುವ ಚಾಟಿಂಗ್, ವಿನಯ್ ಮೊಬೈಲ್‌ನಲ್ಲಿ 42 ಬಾರಿ ವಾಟ್ಸಾಪ್ ಕಾಲ್ ಸಂಭಾಷಣೆ, ಪ್ರದೋಶ್, ಪವನ್ ಜೊತೆ 42 ಬಾರಿ ವಾಟ್ಸಾಪ್ ಕಾಲ್ ಸಂಭಾಷಣೆಯ ವಿವರ ಕೂಡ ಪೊಲೀಸರ ಕೈ ಸೇರಿವೆ.
ವಿನಯ್ ಮೊಬೈಲ್‌ನಲ್ಲಿ 10 ಫೋಟೋಗಳು ರಿಟ್ರೀವ್‌ನಲ್ಲಿ ಪತ್ತೆಯಾಗಿವೆ. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಲ್ಲಿ ಹಿಂಬಾಲಿಸಿ ತೆಗೆದ ಫೋಟೋ, ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿ ಕರೆತಂದಿದ್ದ ವೇಳೆ ತೆಗೆದ ಫೋಟೋ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಫೋಟೋ, ಶವವನ್ನ ಸುಮನಳ್ಳಿ ರಾಜಕಾಲುವೆ ಬಳಿ ಬಿಸಾಡಿರುವ ಫೋಟೋ ಹಾಗೂ ದೀಪಕ್ ಮೊಬೈಲ್‌ನಲ್ಲಿ 30 ಆಡಿಯೋ ಸಂಭಾಷಣೆ ಪತ್ತೆಯಾಗಿದೆ.
ಅಂದಹಾಗೆ ಆರೋಪಿಗಳ ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ 65 ಫೋಟೋ ಪತ್ತೆಗಳು ಲಭ್ಯವಾಗಿದೆ. ಇದ್ರಲ್ಲಿ, 17 ಸ್ಕ್ರೀನ್ ಶಾಟ್, ಸ್ವಾಮಿ ಕಳಿಸಿದ್ದ 20 ಅಶ್ಲೀಲ ಮೆಸೇಜ್ ಲಭ್ಯವಾಗಿದೆ. ಪವಿತ್ರಗೌಡ ಜೊತೆ ದರ್ಶನ್ ನಡೆಸಿದ್ದ ವಾಟ್ಸಾಪ್ ಚಾಟ್ ಸಹ ಸಿಕ್ಕಿದೆ. ಇದ್ರಲ್ಲಿ ವಿನಯ್ ಜೊತೆ ದರ್ಶನ್ ನಡೆಸಿದ್ದ ವಾಟ್ಸಾಪ್ ಚಾಟ್, ನಾಗರಾಜ್ ಜೊತೆ ದರ್ಶನ್ ವಾಟ್ಸಾಪ್ ಕಾಲ್ ಸಂಭಾಷಣೆಯೂ ಲಭ್ಯವಾಗಿದೆ. ವಿನಯ್ ಮತ್ತು ಪ್ರದೋಶ್ ಜೊತೆ ನಡೆಸಿರುವ ಚಾಟಿಂಗ್ ಸಹ ಸಿಕ್ಕಿವೆ.
ಕೊಲೆ ಬಳಿಕ ಪವಿತ್ರಾಗೆ ದರ್ಶನ್ ಫೋನ್ ಮಾಡಿದ್ದಳು. ರೇಣುಕಾಸ್ವಾಮಿ ಮೇಲೆ ಹಲ್ಲೆ ಬಳಿಕ, ವಿನಯ್ ಪವಿತ್ರಾ ಗೌಡಗಳನ್ನ ಮನೆಗೆ ಡ್ರಾಪ್ ಮಾಡಿರ್ತಾನೆ. ಬಳಿಕ ಭಾನುವಾರ ದರ್ಶನ್ ಪವಿತ್ರಾಗೆ ಫೋನ್ ಮಾಡಿ, ಪೊಲೀಸರು ಬಂದು ಏನಾದ್ರು ಕೇಳಿದ್ರೆ ತನಗೆ ಏನು ಗೊತ್ತಿಲ್ಲಾ ಎಂದು ಹೇಳು, ಅದನ್ನು ಬಿಟ್ಟು ಬೇರೆ ಏನು ಹೇಳಬೇಡ ಎಂದು ಹೇಳಿ, ಫೋನ್ ಕಟ್ ಮಾಡ್ತಿರ್ತಾನೆ. ಆಗ ಪವಿತ್ರಾ ಗಾಬರಿ ಬಿದ್ದು, ಪವನ್ ಬಳಿ ವಿಚಾರಿಸ್ತಾಳೆ. ಆಗ ಪವನ್ ಏನಿಲ್ಲ, ನೀವು ಸುಮ್ಮೆ ಇರಿ ಎಂದಿರ್ತಾನೆ. ಅದಕ್ಕೆ ಪವಿತ್ರಾ ಕೂಗಾಡಿ, ಜೋರು ಮಾಡಿರ್ತಾಳೆ. ಆಗ, ರೇಣುಕಾಸ್ವಾಮಿ ಕೊಲೆಮಾಡಿ ಬಾಡಿ ಎಸೆದು ಬಂದಿರೋ ಬಗ್ಗೆ ಪವನ್ ಹೇಳಿರ್ತಾನೆ.
ಇನ್ನು ಕೊಲೆ ಬಳಿಕ ಸರೆಂಡರ್ ಆಗು ಎಂದಾಗ, ರಾಘವೇಂದ್ರ ಆಗಲ್ಲ ಎಂದು ಚಿತ್ರದುರ್ಗದ ಕಡೆ ಹೊರಟಿರ್ತಾನೆ. ಆದ್ರೆ ವಿನಯ್ ಪ್ರದೋಶ್ ಮತ್ತು ರಾಘವೇಂದ್ರ ಮೂವರು ಸೇರಿ ರಾಘವೇಂದ್ರನನ್ನ ಒಪ್ಪಿಸಿರ್ತಾರೆ. ಹೀಗೆ ರೇಣುಕಾಸ್ವಾಮಿಯ ಕೊಲೆಯ ಒಂದೊಂದೇ ರಹಸ್ಯಗಳು ಬಯಲಾಗಿವೆ. ಇದೀಗ ದರ್ಶನ್ ಆ್ಯಂಡ್ ಗ್ಯಾಂಗ್ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಮುಂದೇನಾಗುತ್ತೆ ಕಾದು ನೋಡಬೇಕಿದೆ.
comments
Log in to write reviews