ಮಂಡ್ಯ ; ನಾಲ್ವರು ಯುವಕರಿಂದ ಪ್ರೀತಿ, ಪ್ರೇಮದ ಅಪಪ್ರಚಾರ, ಕಿರುಕುಳಕ್ಕೆ ಬೇಸತ್ತು 14 ವರ್ಷದ ಯುವತಿ ಆತ್ಮಹತ್ಯೆ

ಮಂಡ್ಯ ; ನಾಲ್ವರು ಯುವಕರಿಂದ ಪ್ರೀತಿ, ಪ್ರೇಮದ ಅಪಪ್ರಚಾರ, ಕಿರುಕುಳಕ್ಕೆ ಬೇಸತ್ತು 14 ವರ್ಷದ ಯುವತಿ ಆತ್ಮಹತ್ಯೆ

2024-09-02 12:55:22

ಮಂಡ್ಯ, ಸೆ 01: ನಾಲ್ವರು ಯುವಕರಿಂದ ಪ್ರೀತಿ, ಪ್ರೇಮದ ಅಪಪ್ರಚಾರ ಹಾಗೂ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಡ್ಯದ ಹನಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಇಂಪನಾ (14) ಆತ್ಮಹತ್ಯೆ ಮಾಡಿಕೊಂಡವಳು.

ನಾಲ್ವರು ಯುವಕರಿಂದ ಪ್ರೀತಿ, ಪ್ರೇಮದ ಅಪಪ್ರಚಾರ ಹಾಗೂ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಡ್ಯದ ಹನಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಇಂಪನಾ (14) ಆತ್ಮಹತ್ಯೆ ಮಾಡಿಕೊಂಡವಳು.

ಒಬ್ಬಳೇ ಮಗಳನ್ನು ಕಳೆದುಕೊಂಡು ಇಂಪನಾ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಗಗನ್ ಸೇರಿ ನಾಲ್ವರು ತನ್ನ ಮಗಳಿಗೆ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

author single

L Ramprasad

Managing Director

comments

No Reviews