ದರ್ಶನ್ ಬೆನ್ನುನೋವಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಸರ್ಜರಿಗೆ ಸಿದ್ಧತೆ!
2024-11-11 05:48:12
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿಯಾಗಿ ಕಳೆದ ಜೂನ್ 11 ರಿಂದ ಬಂಧಿತರಾಗಿದ್ದ ನಟ ದರ್ಶನ್ ತೂಗುದೀಪ್ ಅವರಿಗೆ
ಬೆನ್ನುನೋವು ಉಲ್ಬಣಿದ ಕಾರಣ ಹೈಕೋರ್ಟ್ 6 ವಾರಗಳ ಕಾಲ ಸೂಕ್ತ ಚಿಕಿತ್ಸೆ ಪಡೆಯಲು ಮಧ್ಯಂತರ ಜಾಮೀನು ನೀಡಿದೆ.
ಆದರೆ ಕಳೆದ 12 ದಿನಗಳಿಂದ ಯಾವುದೇ ಆಪರೇಷನ್ ಅಥವಾ ಸರ್ಜರಿಗೆ ಒಳಗಾಗದೆ ಮೌನ ವಹಿಸಿದ್ದ ದರ್ಶನ್ ಇಂದು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಸದ್ಯ ಬೆಂಗಳೂರಿನ ಬಾಲಗಂಗಾಧರ ನಾಥ ಆಸ್ಪತ್ರೆಯಲ್ಲಿ ದಾಖಲಾಗಿರುವ ದರ್ಶನ್ ಅವರು ವೈದ್ಯರ ಶಿಫಾರಸ್ಸಿನ ಮೇರೆಗೆ ಬೆನ್ನುನೋವಿಗೆ ನಡೆಸಲಾಗುವ ಸರ್ಜರಿಗೆ ಒಳಗಾಗಲು ಸಮ್ಮತಿಸಿದ್ದಾರೆ.
ಈ ಬಗ್ಗೆ ಬಿಜಿಎಸ್ ಆಸ್ಪತ್ರೆ ವೈದ್ಯರ ಮನವೊಲಿಕೆಗೆ ಮಣಿದಿರುವ ಡಿ ಬಾಸ್ (ದರ್ಶನ್) ಪತ್ನಿ ವಿಜಯಲಕ್ಷ್ಮಿ ಜೊತೆಗೆ ಚರ್ಚಿಸಿ ಕೊನೆಗೂ ತಮಗೆ ಸರ್ಜರಿ ಮಾಡಿ ಎಂದು ಬಿಜಿಎಸ್ ಆಸ್ಪತ್ರೆ ವೈದ್ಯರಿಗೆ ಹೇಳಿದ್ದಾರೆ. ಇದರಿಂದ ಬಿಜಿಎಸ್ ಆಸ್ಪತ್ರೆ ವೈದ್ಯರು ಇದೀಗ ದರ್ಶನ್ ಅವರ ಬೆನ್ನುನೋವು ಶಮನಕ್ಕೆ ಮಾಡಬೇಕಾದ ಸರ್ಜರಿಗಾಗಿ ಪೂರ್ವ ಸಿದ್ಧತೆ ನಡೆಸಲು ಆರಂಭಿಸಿದ್ದಾರೆ.
comments
Log in to write reviews