ದಾವಣಗೆರೆಯಲ್ಲಿ ಪಾಕಿಸ್ತಾನದ ಕುಟುಂಬ ಅರೆಸ್ಟ್!

ದಾವಣಗೆರೆಯಲ್ಲಿ ಪಾಕಿಸ್ತಾನದ ಕುಟುಂಬ ಅರೆಸ್ಟ್!

2024-10-02 05:55:44

ದಾವಣಗೆರೆ, ಅ.2: ಬೆಂಗಳೂರಿನಲ್ಲಿ ಅಡಗಿದ್ದ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದ ಪೊಲೀಸರು ಇದೀಗ ದಾವಣಗೆರೆಯಲ್ಲಿ ವಾಸವಿದ್ದ ನಾಲ್ವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ. ಇದರಿಂದ ರಾಜ್ಯದ ಹಲೆವೆಡೆ ಪಾಕಿಸ್ತಾನಿ ಪ್ರಜೆಗಳು ಅವಿತಿರುವ ಆಘಾತಕಾರಿ ವಿಷಯ ಬೆಳಕಿಗೆ ಬರುತ್ತಿದೆ.

ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸಿದ್ದಿಕಿ ಮೊಹಮ್ಮದ್ ಯಾಸಿನ್ (ಮಗ), ಜೈನಾಬಿ ನೂರ್ (ಸೊಸೆ), ಫಾತಿಮಾ (ಮಗಳು), ಅಲ್ತಾಫ್ ಬಂಧಿತ ಆರೋಪಿಗಳಾಗಿದ್ದು, ಅಲ್ತಾಫ್ ಪತ್ನಿ ಫಾತಿಮಾ ಪಾಕಿಸ್ತಾನ ಪ್ರಜೆಯಾಗಿದ್ದಾಳೆ.

ದಾವಣಗೆಯಲ್ಲಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನದ ಮಹಿಳೆ ನಕಲಿ ದಾಖಲೆ ಸೃಷ್ಟಿಸಿ ಹಿಂದೂಗಳ ಹೆಸರಿನಲ್ಲಿ ವಾಸವಾಗಿದ್ದರು. ಪಾಕಿಸ್ತಾನ ಮೂಲದ ಮಹಿಳೆ ಫಾತಿಮಾ ದಾವಣಗೆರೆಯ ಅಲ್ತಾಫ್ ನನ್ನು ವಿವಾಹವಾಗಿದ್ದಳು.

ಮೊಹಮ್ಮದ್ ಹನೀಫ್ ಕೂಡ ಪಾಕಿಸ್ತಾನದವನಾಗಿದ್ದಾನೆ. ಹನೀಫ್ ಸೊಸೆ, ಮಗಳು, ಅಳಿಯನನ್ನೂ ಬಂಧಿಸಲಾಗಿದೆ. ರಶೀದ್ ಅಲಿ ಸಿದ್ದಿಕಿ ಎಂಬಾತನ ಮಾವ ಮೊಹಮ್ಮದ್ ಹನೀಫ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಪ್ರಮುಖ ಆರೋಪಿ.

ದೆಹಲಿ, ಚೆನ್ನೈ, ಬೆಳಗಾವಿ, ಮುಂಬೈ ಸೇರಿ ಹಲವೆಡೆ ತೆರಳಿ ಮಾಹಿತಿ ಕಲೆ ಹಾಕಲಿವೆ. ಪಾಕಿಸ್ತಾನ ಪ್ರಜೆಗಳಿಗೆ ನಕಲಿ ಆಧಾರ್​ ಮಾಡಿಕೊಟ್ಟವರು ಯಾರು? ಭಾರತೀಯ ದಾಖಲಾತಿಗಳನ್ನು ಮಾಡಿಕೊಟ್ಟವರಿಗೆ ಬಲೆ ಬೀಸಲಾಗಿದೆ.

ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳು ಬಂಧನವಾಗಿರುವ ಸಂಬಂಧ ಹೆಚ್ಚಿನ ತನಿಖೆಗಾಗಿ ಪೊಲೀಸರ 4 ತಂಡಗಳ ರಚನೆ ಮಾಡಲಾಗಿದೆ. ಡಿವೈಎಸ್​ಪಿ ಮೋಹನ್​ಕುಮಾರ್ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್ ಕೃಷ್ಣಕುಮಾರ್, ಜಿಗಣಿ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಮಂಜುನಾಥ್, ಅತ್ತಿಬೆಲೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ರಾಘವೇಂದ್ರ, ಸರ್ಜಾಪುರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ಗಳಾದ ನವೀನ್​, ಕುಮಾರ್ ಅವರ ತಂಡ ರಚನೆ ಮಾಡಲಾಗಿದೆ.

author single

L Ramprasad

Managing Director

comments

No Reviews