ಮುಡಾ ಕೇಸ್ ನಲ್ಲಿ ಮೂಲ ನಕ್ಷೆಯೇ ನಾಪತ್ತೆ: ಆರ್.ಟಿ.ಐ ಕಾರ್ಯಕರ್ತ ಗಂಗರಾಜು
2024-10-29 05:46:08
ಮುಡಾ ಕೇಸ್ ನ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ, ದೇವನೂರು ಹೊಸ ಬಡಾವಣೆಯ ಮೂಲ ನಕ್ಷೆಯೇ ನಾಪತ್ತೆಯಾಗಿದೆ ಎಂದು ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಸ್ಫೋಟಕ ರಹಸ್ಯವನ್ನು ಹೇಳಿದ್ದಾರೆ.
ದೇವನೂರು ಬಡಾವಣೆಯ ಮೂಲ ನಕ್ಷೆಯೇ ಲಭ್ಯವಿಲ್ಲ ಎಂದು ಮುಡಾದಿಂದ ಉತ್ತರ ಸಿಕ್ಕಿದೆ ಎಂದು ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಹೇಳಿದ್ದಾರೆ.
ಭೂ ಮಾಲೀಕ ದೇವರಾಜು ಡಿನೋಟಿಫೈ ಮಾಡಿದ ಕಡತ, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಸಲ್ಲಿಸಿದ್ದ ಮೂಲ ಅರ್ಜಿ ನಾಪತ್ತೆಯಾಗಿದೆ ಎಂದು ಆರ್.ಟಿ.ಐ ಮೂಲಕ ಉತ್ತರ ಸಿಕ್ಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
comments
Log in to write reviews